ಮದ್ಯಪಾನ ಮತ್ತು ಜೂಜಾಟ ಮುಕ್ತ ಗ್ರಾಮ ಕೊಪ್ಪಳ ಜಿಲ್ಲೆಯ ಬಿನ್ನಾಳ ಗ್ರಾಮದಲ್ಲಿ ಪಾದಯಾತ್ರೆ ಮಾಡುವ ಮೂಲಕ ಗಾಂಧಿ ಜಯಂತಿ ನಿಮಿತ್ಯ ಗಾಂಧಿ ಚಿಂತನ ಸಭಾ ಅದ್ದೂರಿಯಾಗಿ ಜರುಗಿದೆ. ಆದ್ಯಾತ್ಮಿಕ ಬಿನ್ನಾಳ ಗ್ರಾಮ ಶ್ರೀ ಜಯದೇವ ಮುರುಘರಾಜೇಂದ್ರ ಜಗದ್ಗುರುಗಳು ಜನಿಸಿದ ಗ್ರಾಮ ಪ್ರಸ್ತುತ ಮೇಘಾಲಯ ರಾಜ್ಯಪಾಲರು ಸಿ.ಎಚ್. ವಿಜಯಶಂಕರ ಮೂಲ ಊರು ಬಿನ್ನಾಳದಲ್ಲಿ ಗಾಂಧಿ ತತ್ವ ಪಾಲನೆ ಮಾಡಲಾಗಿದೆ.
ಮದ್ಯ ಸೇವನೆ ಮತ್ತು ಜೂಜಾಟದಿಂದ ಮುಳಿಗಿ ಸಾಕಷ್ಟು ಸಮಸ್ಯೆಗಳಿಂದ ನೊಂದು ಬೆಂದು ಹೋಗಿದ್ದ ಬಿನ್ನಾಳ ಗ್ರಾಮ, ಇಂದು ಯುವಕರ ಮತ್ತು ಮುಖಂಡರ ದೃಢ ಸಂಕಲ್ಪದಿಂದ ಮದ್ಯ ಮತ್ತು ಜೂಜಾಟ ಮುಕ್ತ ಗ್ರಾಮವಾಗಿ ಮಾಡುವ ಮೂಲಕ ಗಾಂಧಿ ಜಯಂತಿ ಆಚರಣೆ ಮಾಡಲಾಗಿದೆ.
ಊರಿನ ಯುವಕರು ಮುಖಂಡರು ಜನಪ್ರತಿನಿದಿನಗಳು, ರೈತರು, ಶಾಲಾ ಮಕ್ಕಳು, ಮಹಿಳೆಯರು ಹಲವಾರು ಸಂಘ ಸಂಸ್ಥೆ ಪದಾಧಿಕಾರಿಗಳು ಬಿಳಿ ಬಟ್ಟೆ ಧರಿಸಿ, ಗಾಂಧಿ ಟೋಪಿ ಧರಿಸಿ ಬಿನ್ನಾಳ ಗ್ರಾಮದ ಬೀದಿ ಬೀದಿ ಯಲ್ಲಿ ಪಾದಯಾತ್ರೆ ಮಾಡಲಾಯಿತು.
ಕೊಪ್ಪಳ ಗಾಂಧಿ ಬಳಗದಿಂದ ನಡೆದ ಪಾದಯಾತ್ರಯಲ್ಲಿ ಕಪ್ಪತ್ತಗುಡ್ಡದ ಶ್ರೀ ಶಿವಕುಮಾರ್ ಮಹಾಸ್ವಾಮಿಗಳು ದಿವ್ಯ ಸಾನಿಧ್ಯ ವಹಿಸಿ ಗಾಂಧಿ ಜಯಂತಿ ಆಚರಿಸಿದ್ದಾರೆ. ಇವರೆಲ್ಲರ ದೃಢ ಸಂಕಲ್ಪದಿಂದ ಕೊಪ್ಪಳ ಜಿಲ್ಲೆಯ ಬಿನ್ನಾಳ ಗ್ರಾಮ ಮದ್ಯ ಮತ್ತು ಜೂಜಾಟ ಮುಕ್ತ ಗ್ರಾಮವಾಗಿದೆ.
ವರದಿ : ಲಾವಣ್ಯ ಅನಿಗೋಳ