ಸೂಕ್ತ ಕಾರಣವಿಲ್ಲದೇ ಡೇರಿ ಆಡಳಿತ ಮಂಡಳಿ ವಜಾ ಮಾಡಿರುವುದನ್ನು ವಿರೋಧಿಸಿ, ತುಮಕೂರು ಜಿಲ್ಲೆ ಕುಣಿಗಲ್ ತಾಲೂಕಿನ ಬೇಗೂರು ಹಾಲು ಉತ್ಪಾದಕರ ಸಹಕಾರ ಸಂಘದ ಸದಸ್ಯರು, ಸಹಕಾರ ಇಲಾಖೆ ಸಹಾಯಕ ನಿಬಂಧಕರ ಕಚೇರಿ ಎದುರು ಪ್ರತಿಭಟನೆ ಮಾಡಿದ್ದಾರೆ.
ರಾಜಕೀಯ ದುರುದ್ದೇಶದಿಂದ ಆಡಳಿತ ಮಂಡಳಿ ವಜಾಗೊಳಿಸಲಾಗಿದೆ. ಹೊಸದಾಗಿ ಡೇರಿ ಕಾರ್ಯದರ್ಶಿ ನೇಮಕವಾದ ಬಳಿಕ ಈ ರೀತಿ ಮಾಡಲಾಗಿದೆ. ನಿಯಮ ಪಾಲನೆ ಮಾಡಿದ್ರೂ ಉದ್ದೇಶಪೂರ್ವಕವಾಗಿ, ಆಡಳಿತಾಧಿಕಾರಿ ನೇಮಕ ಮಾಡಲಾಗಿದೆ. ಇದಕ್ಕೆ ಕಾರಣರಾದ ಸಹಕಾರ ಇಲಾಖೆ ನಿಬಂಧಕರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.
ಸೂಪರ್ ಸೀಡ್ ಮಾಡುವ ಮುನ್ನ ಅನುಸರಿಸಬೇಕಾದ ಕಾನೂನು ಕ್ರಮಗಳನ್ನು ಪಾಲಿಸಿಲ್ಲ. ಸಂಘಕ್ಕೆ ನೋಟಿಸ್ ಸಹ ನೀಡದೇ, ಏಕಪಕ್ಷೀಯ ನಿರ್ಧಾರ ಕೈಗೊಂಡಿದ್ದಾರೆ. ಕೂಡಲೇ ಆದೇಶ ವಾಪಸ್ ಪಡೆಯಬೇಕು. ವಯೋ ನಿವೃತ್ತಿಯಿಂದ ತೆರವಾದ ಕಾರ್ಯದರ್ಶಿ ಸ್ಥಾನಕ್ಕೆ, ನಿಯಮಬದ್ಧವಾಗಿ ಮಾಡಿರುವ ನೇಮಕಕ್ಕೆ ಒಪ್ಪಿಗೆ ನೀಡಬೇಕೆಂದು ಒತ್ತಾಯಿಸಿದ್ದಾರೆ.
ಜೆಡಿಎಸ್, ಬಿಜೆಪಿ ಮುಖಂಡರ ಒತ್ತಡಕ್ಕೆ ಮಣಿದು ಆಡಳಿತ ಮಂಡಳಿ ರದ್ದು ಮಾಡಲಾಗಿದೆ ಎಂದು, ಕೆಪಿಸಿಸಿ ಸದಸ್ಯ ಬೇಗೂರು ನಾರಾಯಣ ಆರೋಪಿಸಿದ್ದಾರೆ.