ನಾಪತ್ತೆಯಾಗಿದ್ದ ಇಬ್ಬರು ಬಾಲಕಿಯರು, ಶವವಾಗಿ ಪತ್ತೆಯಾಗಿದ್ದಾರೆ. ಕೋಲಾರ ಜಿಲ್ಲೆ ಮುಳಬಾಗಿಲು ತಾಲೂಕಿನ ಕುಪ್ಪಂಪಾಳ್ಯದಲ್ಲಿ ಘಟನೆ ನಡೆದಿದೆ. ಈಶ್ವರ್ ರಾವ್ ಪುತ್ರಿ ಚೈತ್ರಾ ಬಾಯಿ ಮತ್ತು ರಾಘವೇಂದ್ರ ರಾವ್ ಸಾಕು ಮಗಳು ಧನ್ಯಾಬಾಯಿ, ಯಳಚೇಪಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ, 7ನೇ ತರಗತಿಯಲ್ಲಿ ಓದುತ್ತಿದ್ರು.
ಅಕ್ಟೋಬರ್ 2ರಂದು ಮನೆ ಎದುರು ಆಟವಾಡುತ್ತಿದ್ದರು. ಹೊರಗೆ ಶೌಚಾಲಯಕ್ಕೆ ಹೋಗಿ ಬರುವುದಾಗಿ ಹೇಳಿ ಹೋದವರು, ಸಂಜೆಯಾದರೂ ಬಂದಿಲ್ಲ. ಸಂಬಂಧಿಕರ ಮನೆಯಲ್ಲಿ, ತೋಟದಲ್ಲಿ ಕುಟುಂಬಸ್ಥರು ಹುಡುಕಾಡಿದ್ರೂ ಸಿಕ್ಕಿಲ್ಲ. ಅದೇ ದಿನ ಸಂಜೆ ಮುಳಬಾಗಿಲು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ, ನಾಪತ್ತೆ ದೂರು ದಾಖಲಿಸಿದ್ರು.
3 ದಿನದ ಬಳಿಕ ಮನೆಯಿಂದ 2 ಕಿಲೋ ಮೀಟರ್ ದೂರದಲ್ಲಿರುವ, ಕುಪ್ಪಂಪಾಳ್ಯ ಹೊರವಲಯದ ಬಾವಿಯಲ್ಲಿ, ಶವಗಳು ತೇಲುತ್ತಿರುವುದು ಪತ್ತೆಯಾಗಿದೆ. ಯಾರೋ ತಮ್ಮ ಮಕ್ಕಳನ್ನು ಹೊಡೆದು ಬಾವಿಯಲ್ಲಿ ಬಿಸಾಡಿದ್ದಾರೆಂದು ಪೋಷಕರು ಆರೋಪಿಸಿದ್ದಾರೆ.
ಗ್ರಾಮಸ್ಥರ ಪ್ರಕಾರ, ಇಬ್ಬರು ಬಾಲಕಿಯರು ಆಗಾಗ್ಗೆ ಬಾವಿ ಬಳಿ ಹೋಗುತ್ತಿದ್ದರಂತೆ. ಬಾಲಕಿ ಧರಿಸಿದ್ದ ವಾಚ್ ಸಂಜೆ 4.30ರ ವೇಳೆಗೆ ನಿಂತಿದೆ. ಕಾಲು ಜಾರಿ ನೀರಿನಲ್ಲಿ ಬಿದ್ದು ಸಾವನ್ನಪ್ಪಿರಬಹುದೆಂದು ಪೊಲೀಸರು ಅಭಿಪ್ರಾಯ ಪಟ್ಟಿದ್ದಾರೆ.