Wednesday, November 26, 2025

Latest Posts

BMTC ಬ್ರೇಕ್‌ ಫೇಲ್‌.. ಜನರು ಜಸ್ಟ್‌ ಮಿಸ್‌!

- Advertisement -

ಬಿಎಂಟಿಸಿ ಬಸ್ಸೊಂದು ಇದ್ದಕ್ಕಿದ್ದಂತೆ ನಂದಿನಿ ಪಾರ್ಲರ್‌ಗೆ ನುಗ್ಗಿದ ಘಟನೆ ಸಿಲಿಕಾನ್ ಸಿಟಿಯಲ್ಲಿ ನಡೆದಿದೆ. ಕಮಲಾ ನಗರದ ಶಂಕರ್ ನಾಗ್ ಬಸ್ ನಿಲ್ದಾಣದ ಬಳಿ, 96G ಸಂಖ್ಯೆಯ ಬಸ್‌ ಬೆಳಗ್ಗೆ 7:30ಕ್ಕೆ ಹೊರಟಿತ್ತು.

ಈ ವೇಳೆ ಬಸ್‌ನ ಬ್ರೇಕ್ ಫೇಲ್ಯೂರ್ ಆಗಿದ್ದು, ನಿಲ್ದಾಣದಿಂದ 200 ಮೀಟರ್‌ ದೂರದಲ್ಲಿದ್ದ ನಂದಿನಿ ಪಾರ್ಲರ್‌ಗೆ ಡಿಕ್ಕಿಯಾಗಿದೆ. ಪರಿಣಾಮ ಅಂಗಡಿಯ ಗೋಡೆ ಮತ್ತು ಪೀಠೋಪಕರಣಗಳಿಗೆ ಹಾನಿಯಾಗಿದೆ.

ಅದೃಷ್ಟವಶಾತ್ ಇನ್ನೂ ಅಂಗಡಿ ತೆರೆದಿರಲಿಲ್ಲ. ಹೀಗಾಗಿ ಘಟನೆಯಲ್ಲಿ ಪ್ರಾಣಹಾನಿ ಸಂಭವಿಸಿಲ್ಲ. ಬಸ್‌ನಲ್ಲಿದ್ದ ಎಲ್ಲಾ ಪ್ರಯಾಣಿಕರು ಸುರಕ್ಷಿತವಾಗಿದ್ದು, ಅಪಘಾತದ ಬಳಿಕ ಎಲ್ಲರೂ ಬೇರೆ ಬಸ್‌ಗಳಲ್ಲಿ ತೆರಳಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಬಸ್‌ ಚಾಲಕ, ನಿಲ್ದಾಣದಿಂದ ಹೊರಡುತ್ತಿದ್ದಂತೆ ಬ್ರೇಕ್‌ ಫೇಲ್ ಆಗಿ, ಬಸ್‌ ನಿಯಂತ್ರಣ ತಪ್ಪಿತು. ಎಷ್ಟೇ ಪ್ರಯತ್ನ ಪಟ್ಟರು ಕಂಟ್ರೋಲ್‌ ಮಾಡೋಕೆ ಸಾಧ್ಯವಾಗದೇ, ನಂದಿನಿ ಪಾರ್ಲರ್‌ಗೆ ನುಗ್ಗಿದೆ ಅಂತಾ ಹೇಳಿದ್ರು. ಇನ್ನು, ಬಿಎಂಟಿಸಿ ಅಧಿಕಾರಿಗಳು, ಈ ಬಗ್ಗೆ ತನಿಖೆಗೆ ಆದೇಶಿಸಿದ್ದಾರೆ.

- Advertisement -

Latest Posts

Don't Miss