Monday, October 6, 2025

Latest Posts

ನವೆಂಬರ್‌ನಲ್ಲಿ ಯಾವ ‘ಕ್ರಾಂತಿ’ಯೂ ಇಲ್ಲ, ಅದು ಭ್ರಾಂತಿಯಷ್ಟೆ!

- Advertisement -

ರಾಜ್ಯ ರಾಜಕಾರಣದಲ್ಲಿ ನವೆಂಬರ್‌ನಲ್ಲಿ ದೊಡ್ಡ ಕ್ರಾಂತಿ ಸಂಭವಿಸಲಿದೆ ಎಂಬ ಬಿಜೆಪಿ ನಾಯಕರು ನೀಡುತ್ತಿರುವ ಹೇಳಿಕೆಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ತೀವ್ರ ಪ್ರತಿಕ್ರಿಯೆ ನೀಡಿದ್ದಾರೆ. ಸೋಮವಾರ ಕೊಪ್ಪಳದ ಬಸಾಪುರ ಲಘು ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ್ದಾರೆ. ರಾಜಕೀಯದಿಂದ ಹಿಡಿದು ಜಾತಿ ಸಮೀಕ್ಷೆ, ಲಿಂಗಾಯತ ಧರ್ಮ, ಗ್ಯಾರಂಟಿ ಯೋಜನೆಗಳ ವರದಿ, ಆರೋಗ್ಯ ಸಮಸ್ಯೆಗಳವರೆಗೆ ಹಲವು ವಿಚಾರಗಳ ಕುರಿತು ಪ್ರತಿಕ್ರಿಯೆ ನೀಡಿದರು.

ಸಿದ್ದರಾಮಯ್ಯ ಅವರು ಜಾತಿ ಆಧಾರಿತ ಸಮೀಕ್ಷೆ ಬಗ್ಗೆ ಮಾತನಾಡುತ್ತಾ, ಈ ಸಮೀಕ್ಷೆಯಲ್ಲಿ ಯಾರನ್ನೂ ತುಳಿಯುವ ಪ್ರಶ್ನೆಯೇ ಇಲ್ಲ. ಸಮಾಜದ ನಿಜ ಸ್ಥಿತಿಗತಿಗಳು ಏನು ಅನ್ನುವ ಅಂಕಿ-ಅಂಶಗಳು ಬೇಕು. ಅದೇ ನಮ್ಮ ಉದ್ದೇಶ. ಸಮ ಸಮಾಜ ವಿರೋಧ ಇರುವವರು ಹಿಂತಹ ದಾರಿ ತಪ್ಪಿಸುವ ಸ್ಟೇಟ್ಮೆಂಟ್ ಕೊಡ್ತಾರೆ ಅಂತ ಹೇಳಿದ್ದಾರೆ. ಈಗಾಗಲೇ 1.10 ಕೋಟಿ ಕುಟುಂಬಗಳ ಸಮೀಕ್ಷೆ ಮುಗಿದಿದೆ. ಇನ್ನು ಎರಡು ದಿನಗಳಲ್ಲಿ ರಾಜ್ಯದಾದ್ಯಂತ ಸಮೀಕ್ಷೆ ಪೂರ್ಣಗೊಳ್ಳಲಿದೆ ಎಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದರು. ಕೊಪ್ಪಳ ಜಿಲ್ಲೆಯ ಸಮೀಕ್ಷೆ ಈಗಾಗಲೇ ಶೇ. 97ರಷ್ಟು ಮುಗಿದಿದೆ ಎಂದು ಮಾಹಿತಿ ನೀಡಿದರು.

ಸಮೀಕ್ಷೆ ವಿರುದ್ಧ ಅನ್ನೋ ಪ್ರಹ್ಲಾದ ಜೋಶಿ ಪ್ರತಿಕ್ರಿಯೆಗೆ ಬಗ್ಗೆ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಅವರು ಕೇಂದ್ರ ಸಚಿವರಾಗಿದ್ದಾರೆ. ಕೇಂದ್ರ ಸರ್ಕಾರವೇ ಜಾತಿ ಸಮೀಕ್ಷೆ ಮಾಡುತ್ತಿದೆ ಅದನ್ನ ವಿರೋಧ ಮಾಡ್ತಾರಾ ಪ್ರಹ್ಲಾದ ಜೋಶಿ ಅಂತ ಪ್ರಶ್ನಿಸಿದ್ದಾರೆ. ಅದೇ ರೀತಿ ಲಿಂಗಾಯತ ಪ್ರತ್ಯೇಕ ಧರ್ಮದ ಕೂಗಿನ ಕುರಿತು ಮಾತನಾಡಿದ ಸಿಎಂ, ಈ ಬಗ್ಗೆ ನನ್ನ ನಿಲುವು ಏನಿಲ್ಲ. ಇದು ಯಾವುದೋ ದಿಕ್ಕಿಲ್ಲದ ಚರ್ಚೆಯಾಗಿದೆ. ಮುನ್ನೆಲೆಗೂ ಬಂದಿಲ್ಲಾ, ಹಿನ್ನೆಲೆಗೂ ಬಂದಿಲ್ಲ. ಲಿಂಗಾಯತ ಪ್ರತ್ಯೇಕ ಧರ್ಮದ ಬಗ್ಗೆ ಡಿಮ್ಯಾಂಡ್ ಮಾಡುತ್ತಿದ್ದಾರೆ ಎಂದರು.

ಇನ್ನು ಬಿಜೆಪಿ ಮುಖಂಡರು ಗ್ಯಾರಂಟಿ ಯೋಜನೆಗಳು ನಿಂತಿವೆ ಎಂದು ಆರೋಪಿಸುತ್ತಿರುವ ಕುರಿತು, ಯಾರೂ ಯೋಜನೆ ನಿಂತಿದೆ ಎಂದು ಅಧಿಕೃತವಾಗಿ ಹೇಳಿಲ್ಲ. ಯಾರಿಗಾದರೂ ದಾಖಲೆಗಳಿದ್ದರೆ ಮುಂದಿಟ್ಟು ತೋರಿಸಲಿ, ಎಂದು ಸಿಎಂ ಸವಾಲು ಎಸೆದರು. ಗ್ಯಾರಂಟಿ ಯೋಜನೆಗಳು ನಿಂತಿಲ್ಲ ಗ್ಯಾರಂಟಿ ಯೋಜನೆಗಳು ನಿಂತಿವೆ ಅಂತಾ ಯಾರು ಹೇಳಿದ್ರು? ಗ್ಯಾರಂಟಿ ನಿಂತಿವೆ ಎಂದು ಯಾರೂ ಹೇಳಿಲ್ಲ. ಯಾರದ್ದು ಉಳಿದಿಲ್ಲ. ಸುಮ್ಮನೆ ಈ ಬಗ್ಗೆ ಹೇಳಬೇಡಿ. ನಾನಿಲ್ಲೇ ಇದ್ದೇನೆ ದಾಖಲೆ ಇದ್ದರೆ ಕೊಡಿ ಎಂದು ಗುಡುಗಿದ್ದಾರೆ. ರಾಜ್ಯ ರಾಜಕಾರಣದಲ್ಲಿ‌ ನವೆಂಬರ್ ನಲ್ಲಿ ಯಾವ ಕ್ರಾಂತಿಯೂ ನಡೆಯಲ್ಲ.ಅವೆಲ್ಲಾ ಭ್ರಾಂತಿಯಷ್ಟೇ ಎಂದು ಹೇಳಿದರು. ಎಂದಿದ್ದಾರೆ.

ವರದಿ : ಲಾವಣ್ಯ ಅನಿಗೋಳ

- Advertisement -

Latest Posts

Don't Miss