2025 ರ ಬಿಹಾರ ಚುನಾವಣೆ ಚುನಾವಣೆ ಪ್ರಾರಂಭವಾಗತ್ತೆ ಅಂತ ಎಲ್ಲರು ಕಾದು ಕುಳಿತಿದ್ದಾರೆ. ರಾಜ್ಯ ರಾಜಕೀಯದಲ್ಲಿ ಭಾರಿ ಚರ್ಚೆಯಾಗುತ್ತಿದೆ. ಬಿಹಾರ ಚುನಾವಣೆಯ ನಂತರ ಕರ್ನಾಟಕದಲ್ಲಿ ಅಧಿಕಾರ ಬದಲಾವಣೆ ಸಾಧ್ಯತೆ ಇದೆ. ರಾಜ್ಯದಲ್ಲಿ ಬಹಳಷ್ಟು ರಾಜಕೀಯ ಬದಲಾವಣೆಗಳು ಸಂಭವಿಸುತ್ತವೆ ಅನ್ನೋ ಮಾತುಗಳು ಹರಿದಾಡುತ್ತಿವೆ. ಕರ್ನಾಟಕದ ಬಹು ನಿರ್ಧಾರಗಳು ಬಿಹಾರದ ಚುನಾವಣೆಯ ಮೇಲೆ ನಿಂತಿವೆ.
ಸದ್ಯ ಚುನಾವಣೆ ಆಯೋಗವು ಬಿಹಾರ ವಿಧಾನಸಭಾ ಚುನಾವಣೆಯ ವೇಳಾಪಟ್ಟಿಯನ್ನು ಪ್ರಕಟಿಸಿದೆ. ವಿಧಾನಸಭಾ ಚುನಾವಣೆಗಳು ಯಾವಾಗ ಪ್ರಾರಂಭವಾಗುತ್ತಿದ್ದು, ಎಲ್ಲರ ಟೆನ್ಶನ್ ಗೆ ಬ್ರೇಕ್ ಬಿದ್ದಂತಾಗಿದೆ. ಯಸ್ ಬಿಹಾರ ವಿಧಾನಸಭಾ ಚುನಾವಣೆಗಳು ನವೆಂಬರ್ 6 ಮತ್ತು 11 ರಂದು ಎರಡು ಹಂತಗಳಲ್ಲಿ ನಡೆಯಲಿವೆ. ಚುನಾವಣೆಗೆ ಸಂಬಂಧಿಸಿದ ಎಲ್ಲಾ ಪ್ರಕ್ರಿಯೆಗಳು ನವೆಂಬರ್ 16 ರಂದು ಮುಕ್ತಾಯಗೊಳ್ಳಲಿವೆ.
ನವೆಂಬರ್ 14 ರಂದು ಫಲಿತಾಂಶಗಳು ಪ್ರಕಟವಾಗಲಿವೆ ಎಂದು ಚುನಾವಣಾ ಆಯೋಗ ಘೋಷಿಸಿದೆ. ಬಿಹಾರದಲ್ಲಿ ಚುನಾವಣಾ ಸಿದ್ಧತೆಯ ಎರಡು ದಿನಗಳ ಪರಿಶೀಲನೆಯ ನಂತರ ಈ ಘೋಷಣೆ ಹೊರಬಿದ್ದಿದೆ. ECI ರಾಜಕೀಯ ಪಕ್ಷಗಳು ಮತ್ತು ಜಾರಿ ಸಂಸ್ಥೆಗಳೊಂದಿಗೆ ಮುಕ್ತ, ನ್ಯಾಯಯುತ ಮತ್ತು ಸುಗಮ ಚುನಾವಣೆಗಳನ್ನು ಖಚಿತಪಡಿಸಿಕೊಳ್ಳಲು ಚರ್ಚೆ ನಡೆಸಿದೆ.
ಮುಂಬರುವ ಚುನಾವಣಾ ಯುದ್ಧ ಮುಖ್ಯಮಂತ್ರಿ ನಿತೀಶ್ ಕುಮಾರ್ ನೇತೃತ್ವದ ಆಡಳಿತಾರೂಢ NDA ಮತ್ತು RJD ತೇಜಸ್ವಿ ಯಾದವ್ ನೇತೃತ್ವದ ಮಹಾಘಟಬಂಧನ್ ನಡುವೆ ಮುಖಾಮುಖಿ ಸ್ಪರ್ಧೆಯಾಗುವ ನಿರೀಕ್ಷೆಯಿದೆ. 243 ಸದಸ್ಯರ ಬಿಹಾರ ವಿಧಾನಸಭೆಯಲ್ಲಿ ಪ್ರಸ್ತುತ 131 NDA ಸ್ಥಾನಗಳು ಮತ್ತು 111 ಮಹಾಘಟಬಂಧನ್ ಸ್ಥಾನಗಳಿವೆ. ಚುನಾವಣಾ ಆಯೋಗವು 90,712 BLO ಗಳು, 243 ERO ಗಳು ಮತ್ತು 38 DEO ಗಳನ್ನು ನಿಯೋಜಿಸಿದೆ.
2020 ರಲ್ಲಿ ನಡೆದ ಕೊನೆಯ ವಿಧಾನಸಭಾ ಚುನಾವಣೆಗಳು ಮೂರು ಹಂತಗಳಲ್ಲಿ ನಡೆದವು. ಚುನಾವಣಾ ಆಯೋಗವು ಸೆಪ್ಟೆಂಬರ್ 30 ರಂದು ಅಂತಿಮ ಮತದಾರರ ಪಟ್ಟಿಯನ್ನು ಬಿಡುಗಡೆ ಮಾಡಿತು. ಈ ಪಟ್ಟಿಯ ಪ್ರಕಾರ, ಒಟ್ಟು ಮತದಾರರ ಸಂಖ್ಯೆ 7.42 ಕೋಟಿ. ಮುಂಬರುವ ಚುನಾವಣೆಗಳು ಮುಖ್ಯಮಂತ್ರಿ ನಿತೀಶ್ ಕುಮಾರ್ ನೇತೃತ್ವದ NDA ಮತ್ತು ರಾಷ್ಟ್ರೀಯ ಜನತಾ ದಳ (RJD) ನೇತೃತ್ವದ ಮಹಾಮೈತ್ರಿಕೂಟದ ನಡುವೆ ನೇರ ಸ್ಪರ್ಧೆಯಾಗುವ ನಿರೀಕ್ಷೆಯಿದೆ. 243 ಸದಸ್ಯರ ವಿಧಾನಸಭೆಯಲ್ಲಿ NDA ಪ್ರಸ್ತುತ 131 ಸ್ಥಾನಗಳನ್ನು ಹೊಂದಿದ್ದರೆ, ಮಹಾಮೈತ್ರಿಕೂಟ 111 ಸ್ಥಾನಗಳನ್ನು ಹೊಂದಿದೆ.
ವರದಿ : ಲಾವಣ್ಯ ಅನಿಗೋಳ