Tuesday, October 14, 2025

Latest Posts

ವಾಸಂತಿ ಇನ್ನೂ ಬದುಕಿದ್ದಾಳೆ ಎಂದ ಸುಜಾತಾ ಭಟ್

- Advertisement -

ಧರ್ಮಸ್ಥಳದ ಪ್ರಕರಣದಲ್ಲಿ ಸಂಚಲನ ಸೃಷ್ಟಿಸಿದ್ದ ಸುಜಾತಾ ಭಟ್ ಮತ್ತೊಂದು ಸ್ಫೋಟಕ ಹೇಳಿಕೆ ನೀಡಿದ್ದಾರೆ. ಬುರುಡೆ ಗ್ಯಾಂಗ್‌ ಜೊತೆ ಹೋಗಿ ತಪ್ಪು ಮಾಡಿದ್ದೇನೆ. ಆ ಪಶ್ಚಾತ್ತಾಪ ನನಗೆ ಈಗಲೂ ಕಾಡುತ್ತಾ ಇದೆ. 60 ವರ್ಷದ ಜೀವನದಲ್ಲಿ ಇದೊಂದು ಕಪ್ಪುಚುಕ್ಕೆ. ಉಳಿದ ಜೀವನವನ್ನು ಚೆನ್ನಾಗಿ ಮಾಡುವ ಆಸೆ ಇದೆ. ಮುಂದಿನ ವಾರ ಧರ್ಮಸ್ಥಳಕ್ಕೆ ಹೋಗುತ್ತೇನೆ. ದೇವರ ದರ್ಶನ ಮಾಡಿಕೊಂಡು ಬರಬೇಕು ಅಂದುಕೊಂಡಿದ್ದೇನೆಂದು ಸುಜಾತಾ ಭಟ್‌ ಹೇಳಿದ್ದಾರೆ.

ಖಾಸಗಿ ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಸುಜಾತಾ ಭಟ್‌, ವಾಸಂತಿ ಇನ್ನೂ ಬದುಕಿರುವ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ. ನಟನ ಸಹೋದರನ ಜೊತೆಯೇ ವಾಸಂತಿ ಇರಬಹುದೆಂದು ಹೊಸ ಬಾಂಬ್‌ ಹಾಕಿದ್ದಾರೆ. ವಾಸಂತಿ ಕೇಸ್‌ನಲ್ಲಿ ನಟನ ಸಹೋದರ ಇರೋದು ನಿಜ. ಹೀಗಂತ ಸುಜಾತಾ ಭಟ್‌ ಸ್ಫೋಟಕ ಹೇಳಿಕೆ ನೀಡಿದ್ದಾರೆ.

ನಟನ ಸಹೋದರನಿಗೂ ನನಗೂ ಯಾವುದೇ ಸಂಬಂಧ ಇಲ್ಲ. ಯಾವುದೇ ನಟನ ಸಹೋದರ ನನಗೆ ಸಹಾಯ ಮಾಡಿಲ್ಲ. ನನಗೆ ಸಹಾಯ ಮಾಡಿದ್ದಾರೆ ಅನ್ನೋದು ಸುಳ್ಳು. ವಾಸಂತಿ ಇರುವಾಗ ನಟನ ಸಹೋದರ, ಸ್ನೇಹಿತ ಶ್ರೀವತ್ಸ ಮನೆಗೆ ಬರ್ತಿದ್ರು. ವಾಸಂತಿ ತಂದೆಯೇ ಈ ಬಗ್ಗೆ ನನಗೆ ಹೇಳಿದ್ರು. ಅವರ ಜೊತೆ ವಾಸಂತಿ ಹೋಗಿರುವ ಅನುಮಾನ ಇದೆ.
ಕೊಳೆತ ಮೃತದೇಹ ತೋರಿಸಿ ವಾಸಂತಿಯದ್ದು ಅಂದಿದ್ರು. ಮೃತದೇಹದ ಮೇಲೆ ಆಕೆಯ ತಾಳಿಸರ ಸಿಕ್ಕಿತ್ತು ಎಂದು ಸುಜಾತಾ ಭಟ್‌ ಹೇಳಿದ್ದಾರೆ.

- Advertisement -

Latest Posts

Don't Miss