ಬಿಹಾರ ಚುನಾವಣೆ ಬಳಿಕ ನವೆಂಬರ್ ಕ್ರಾಂತಿಯಾಗಲಿದೆ ಅನ್ನೋ ಚರ್ಚೆಗಳಿಗೆ, ಗೃಹ ಸಚಿವ ಡಾ.ಜಿ ಪರಮೇಶ್ವರ್ ಅವರು ಸ್ಪಷ್ಟನೆ ಕೊಟ್ಟಿದ್ದಾರೆ. ಬದಲಾವಣೆಗೆ ಚುನಾವಣೆಯೇ ಬೇಕಾ ಅಂತಾ ಪ್ರಶ್ನಿಸಿದ್ದಾರೆ. ಹೈಕಮಾಂಡ್‌ನವರು ಮಾಡೋದಿದ್ರೆ ಮಾಡ್ತಾರೆ. ಚುನಾವಣೆ ಅನ್ನೋ ಪ್ರಶ್ನೆಯೇ ಇಲ್ಲ. ಉಪಮುಖ್ಯಮಂತ್ರಿಗಳು ನಮ್ಮ ಪಕ್ಷದ ಅಧ್ಯಕ್ಷರು. ನಮ್ಮೆಲ್ಲರಿಗೂ ಜವಾಬ್ದಾರಿ ಇದೆ. ಉತ್ತರ ಕರ್ನಾಟಕದಲ್ಲಿ ದೊಡ್ಡ ಪ್ರವಾಹ ಆಗ್ತಿದೆ. ದಕ್ಷಿಣ ಕರ್ನಾಟಕದಲ್ಲೂ ಅನೇಕ ಸಮಸ್ಯೆಗಳಿವೆ. ಎಲ್ಲವನ್ನು ಬಗೆಹರಿಸುವುದು ನಮ್ಮ ಮೊದಲ ಆದ್ಯತೆ. ಅದನ್ನು ಬಿಟ್ಟು ಬದಲಾವಣೆ ಅನ್ನೋ ಬಗ್ಗೆ ಹೆಚ್ಚಿನ ಗಮನ ಹರಿಸುವ ಅಗತ್ಯವಿಲ್ಲ.
ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದು ಸರಿ ಇದೆ. ಪ್ರತಿ ದಿನ ಒಬ್ಬೊಬ್ಬರು ಒಂದೊಂದು ಹೇಳಿಕೆ ಕೊಡುವುದನ್ನು ನಾವು ನೋಡುತ್ತಿದ್ದೇವೆ. ಅದನ್ನು ಬಗೆಹರಿಸಬೇಕೆಂದು ಹೇಳಿದ್ದು ಸರಿ ಇದೆ. ಅದನ್ನು ಹೈಕಮಾಂಡ್‌ನವರು ಮಾಡ್ತಾರೆ. ಹೈಕಮಾಂಡ್ ಗಮನಕ್ಕೆ ಎಲ್ಲವೂ ಹೋಗುತ್ತೆ. ಯಾವ ಸಂದರ್ಭದಲ್ಲಿ ಔಷಧಿ ಕೊಡಬೇಕೆಂದು ಅವರಿಗೆ ಗೊತ್ತು. ಅದನ್ನೇ ಮಾಡ್ತಾರೆ. ಸತೀಶ್ ಹೇಳಿದಂತೆಯೇ, ನಾನು ಕೂಡ ಗೊಂದಲ ಬಗೆಹರಿಸಿ ಎಂದು ಹೇಳುವುದಾಗಿ ಪರಮೇಶ್ವರ್ ಸ್ಪಷ್ಟನೆ ಕೊಟ್ಟಿದ್ದಾರೆ.
ಇದೇ ವೇಳೆ ಲಿಂಗಾಯತ ಪ್ರತ್ಯೇಕ ಧರ್ಮದ ಬಗ್ಗೆ ಮಾತನಾಡಿರುವ ಪರಮೇಶ್ವರ್, ಇದನ್ನು ಅವರಿಬ್ಬರ ಬಳಿಯೇ ಕೇಳಬೇಕು ಎಂದ್ರು. ಲಿಂಗಾಯತ ಧರ್ಮ, ವೀರಶೈವ ಸಮುದಾಯದವರು ಬೇರೆ ಅನ್ನೋ ಮಾತುಗಳನ್ನು ಕೇಳುತ್ತಿದ್ದೇವೆ. ಮೊದಲು ಅದನ್ನು ಸರಿಪಡಿಸಿಕೊಂಡ್ರೆ ಎಲ್ಲವೂ ಸರಿಯಾಗುತ್ತದೆ. ಲಿಂಗಾಯತ ಕಾರ್ಯಕ್ರಮಕ್ಕೆ ಕರೆದಿದ್ದಕ್ಕೆ ಸಿಎಂ ಹೋಗಿದ್ದಾರೆ ಅಷ್ಟೆ. ಅಲ್ಲಿ ಧಾರ್ಮಿಕ ವಿಚಾರಗಳನ್ನು ಅವರು ಮಾತನಾಡಿಲ್ಲ ಅಂತಾ, ಪರಮೇಶ್ವರ್ ಊಹಾಪೋಹಗಳಿಗೆತೆರೆ ಎಳೆಯುವ ಪ್ರಯತ್ನ ಮಾಡಿದ್ದಾರೆ.