Tuesday, October 14, 2025

Latest Posts

ಮೀನಾಕ್ಷಿ ಸೋಮೇಶ್ವರ ದೇಗುಲದಲ್ಲಿ ಕುಂಬ್ಳೆ ದಂಪತಿ

- Advertisement -

ಭಾರತದ ಮಾಜಿ ಕ್ರಿಕೆಟಿಗ ಮತ್ತು ಸ್ಪಿನ್ ಮಾಂತ್ರಿಕ ಅನಿಲ್ ಕುಂಬ್ಳೆ ಅವರು ಪತ್ನಿ ಚೇತನಾ ಜೊತೆ ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ಶಿವನಸಮುದ್ರದ ಪ್ರಸಿದ್ಧ ಮೀನಾಕ್ಷಿ ಸೋಮೇಶ್ವರ ದೇವಾಲಯಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.

ಹಿಂದೆ ಮಾಡಿದ ಹರಕೆ ನೆರವೇರಿದ ಹಿನ್ನೆಲೆಯಲ್ಲಿ ಕುಂಬ್ಳೆ ದಂಪತಿ ದೇವಾಲಯಕ್ಕೆ ಆಗಮಿಸಿದ್ದು, ಚೇತನಾ ಕುಂಬ್ಳೆ ದೇವರಿಗೆ ಮಡಿಲಕ್ಕಿ ಅರ್ಪಿಸಿದರು. ಬಳಿಕ ಇಬ್ಬರೂ ದೇವಾಲಯದ ಆವರಣದಲ್ಲಿ ಕೆಲ ಕ್ಷಣ ಧ್ಯಾನಕ್ಕೆ ಜಾರಿದರು ಮತ್ತು ಶೋಡೋಪಚಾರ ಪೂಜೆಯಲ್ಲಿ ಭಾಗವಹಿಸಿದರು.

ಮೀನಾಕ್ಷಿ ಸೋಮೇಶ್ವರ ದೇವಾಲಯದ ಪಕ್ಕದಲ್ಲಿರುವ ಮದ್ಯರಂಗ ದೇವಾಲಯಕ್ಕೂ ಕುಂಬ್ಳೆ ದಂಪತಿ ಭೇಟಿ ನೀಡಿ ದೇವರ ದರ್ಶನ ಪಡೆದರು. ಹುಣ್ಣಿಮೆ ದಿನ ತಾಯಿಯ ದರ್ಶನ ಪಡೆದರೆ ಜೀವನದಲ್ಲಿ ಒಳಿತಾಗುತ್ತದೆ ಎಂಬ ನಂಬಿಕೆಯಿಂದ ಇಂದು ಪೂಜೆ ಸಲ್ಲಿಸಿದರೆಂದು ದೇವಸ್ಥಾನ ಮೂಲಗಳು ತಿಳಿಸಿವೆ.

ಶಿವನಸಮುದ್ರದ ಈ ದೇಗುಲವು ಶತಮಾನಗಳ ಇತಿಹಾಸವನ್ನು ಹೊಂದಿದ್ದು, 8ನೇ ಶತಮಾನದಲ್ಲಿ ಆದಿ ಶಂಕರಾಚಾರ್ಯರು ಇಲ್ಲಿ ಶ್ರೀ ಚಕ್ರವನ್ನು ಪ್ರತಿಷ್ಠಾಪಿಸಿದ್ದರೆಂಬ ನಂಬಿಕೆ ಇದೆ. ಈ ದೈವಿಕ ಶಕ್ತಿ ಕೇಂದ್ರವು ಇಂದಿಗೂ ಭಕ್ತರನ್ನು ಆಕರ್ಷಿಸುತ್ತಲೇ ಇದೆ.

ವರದಿ: ರಂಜಿತ ರೇವಣ್ಣ ನಾಟನಹಳ್ಳಿ

- Advertisement -

Latest Posts

Don't Miss