ಈ ವರ್ಷ ಕರ್ನಾಟಕದಲ್ಲಿ ಸರಾಸರಿಗಿಂತ ಹೆಚ್ಚು ಮುಂಗಾರು ಮಳೆಯಾದ ನಂತರ, ಈಗ ಹಿಂಗಾರು ಮಳೆಯೂ ಹೆಚ್ಚು ಆಗುವ ಸಾಧ್ಯತೆ ಇದೆ. ಹೀಗಂತ ಭಾರತೀಯ ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಅಕ್ಟೋಬರ್ನಿಂದ ಡಿಸೆಂಬರ್ವರೆಗೂ ರಾಜ್ಯದ ಹಲವೆಡೆ ಮಳೆ ಮುಂದುವರಿಯುವ ಸಾಧ್ಯತೆ ಇದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.
2025ನೇ ಸಾಲಿನ ನೈಋತ್ಯ ಮುಂಗಾರು ಕೆಲವು ದಿನಗಳಲ್ಲಿ ಅಂತ್ಯವಾಗಲಿದೆ. ಹಿಂಗಾರು ಮಳೆ ಅಥವಾ ಅಕ್ಟೋಬರ್ – ಡಿಸೆಂಬರ್ ಹಂತದ ಮಾನ್ಸೂನ್ ಮಳೆ ಆರಂಭವಾಗಲಿದೆ. ಈ ವೇಳೆವೂ ಮಳೆಯ ಪ್ರಮಾಣ ರಾಜ್ಯದಲ್ಲಿ ಹೆಚ್ಚು ಇರಲಿದೆ ಎಂದು ಮುನ್ಸೂಚನೆ ನೀಡಲಾಗಿದೆ.
ಹಾಗಾದ್ರೆ ಈ ವರ್ಷ ಮುಂಗಾರು ಹೇಗಿತ್ತು? ಅನ್ನೋದನ್ನ ನೋಡೋದಾದ್ರೆ ಜೂನ್ 1ರಿಂದ ಸೆಪ್ಟೆಂಬರ್ 30ರ ತನಕ ಮಳೆಯಾದ ಪ್ರಮಾಣ 339 ಸೆಂಟಿ ಮೀಟರ್ ಇತ್ತು. ಇದು ರಾಜ್ಯದ ಸರಾಸರಿ ಮಳೆಯಿಗಿಂತ 14 ಸೆ.ಮೀ ಹೆಚ್ಚಿದೆ. ಕರಾವಳಿ ಮತ್ತು ಉತ್ತರ ಒಳನಾಡು ಭಾಗಗಳಲ್ಲಿ ಹೆಚ್ಚು ಮಳೆಯಾಗಿ ಅನೇಕ ಕಡೆಗಳಲ್ಲಿ ಮಳೆ ಆಧಾರಿತ ಅನಾಹುತಗಳೂ ವರದಿಯಾಗಿವೆ.
ಇನ್ನೂ ಮುಂದೆ ಮಳೆ ಹೇಗಿರಲಿದೆ ಅನ್ನೋದನ್ನ ನೋಡೋದಾದ್ರೆ ಹಿಂಗಾರು ಮಳೆ ಅಕ್ಟೋಬರ್ನಿಂದ ಡಿಸೆಂಬರ್ವರೆಗೂ ಮುಂದುವರಿಯಲಿದೆ. ಭಾರತೀಯ ಹವಾಮಾನ ಇಲಾಖೆ ಪ್ರಕಾರ, ಈ ಅವಧಿಯಲ್ಲೂ ವಾಡಿಕೆಗಿಂತ ಹೆಚ್ಚು ಮಳೆಯಾಗುವ ನಿರೀಕ್ಷೆ ಇದೆ. ಇದರಿಂದಾಗಿ ಜನಜೀವನದ ಮೇಲೆ ಪ್ರಭಾವ ಬೀರುವ ಸಾಧ್ಯತೆ ಇದೆ.
ನಗರ ಪ್ರದೇಶಗಳಲ್ಲಿ ಹಾಗೂ ಕೃಷಿ ಕ್ಷೇತ್ರದಲ್ಲಿ ಇದರಿಂದ ಲಾಭ ಮತ್ತು ಹಾನಿ ಎರಡೂ ಸಂಭವಿಸಬಹುದು. ಮುಂಗಾರು ಹಾಗೂ ಹಿಂಗಾರು ಎರಡೂ ಉತ್ತಮವಾಗಿ ಸಂಭವಿಸುತ್ತಿರುವುದು ಕೃಷಿಗೆ ಪೋಷಕವಾಗುವ ಸಾಧ್ಯತೆ ಇದೆ. ನವೆಂಬರ್ ನಲ್ಲಿ ಧಾನ್ಯ ಬೆಳೆಗಳಿಗೆ ಸಾಕಷ್ಟು ನೀರಾವರಿ ಲಭ್ಯವಿರುವ ನಿರೀಕ್ಷೆಯಿದೆ.
ವರದಿ : ಲಾವಣ್ಯ ಅನಿಗೋಳ