Tuesday, October 14, 2025

Latest Posts

ದಸರಾದಲ್ಲಿ10 ವರ್ಷದ ಬಾಲಕಿ ಅತ್ಯಾಚಾರ ಕೇಸ್ ಗೆ ಹೊಸ ಟ್ವಿಸ್ಟ್ !

- Advertisement -

ಮೈಸೂರಿನಲ್ಲಿ ದಸರಾ ಹಬ್ಬದ ವೇಳೆ ಬಲೂನ್ ಮಾರಾಟ ಮಾಡಲು ಬಂದ ಅಪ್ರಾಪ್ತ ಬಾಲಕಿಗೆ ಅತ್ಯಾಚಾರ ಮಾಡಿ ಹತ್ಯೆ ಮಾಡಿದ ಘಟನೆ ಸಂಬಂಧಿಸಿದಂತೆ ಬೆಚ್ಚಿ ಬೀಳಿಸೋ ಸಂಗತಿ ಬಯಲಾಗಿದೆ. ಪೊಲೀಸರ ವರದಿ ಪ್ರಕಾರ, ಕಾರ್ತಿಕ್ ಎಂಬ ವ್ಯಕ್ತಿ ಮದ್ಯಪಾನದಿಂದ ಮಾಡಿಕೊಂಡು, ಬಾಲಕಿಯನ್ನು ಅತ್ಯಾಚಾರ ಮಾಡಿ, 19 ಬಾರಿ ಚಾಕು ಇರಿದು ಹತ್ಯೆ ಮಾಡಿದ ಘಟನೆ ಬೆಳಕಿಗೆ ಬಂದಿದೆ.

ಬಾಲಕಿಯ ಮರಣೋತ್ತರ ಪರೀಕ್ಷೆಯಲ್ಲಿ ಈ ಭೀಕರ ಘಟನೆ ದೃಢಪಟ್ಟಿದೆ. ಆರೋಪಿಯು ಬಲೂನ್ ಮಾರಾಟ ಮಾಡುವ ಬಾಲಕಿಯನ್ನು ಹತ್ಯೆ ಮಾಡಿದ್ದಾನೆ. ಈ ಘಟನೆಯಲ್ಲಿ, ಕಾರ್ತಿಕ್ ಮೈಸೂರಿನ ಟೆಂಟ್‌ನಲ್ಲಿ ಮಲಗಿದ್ದ ಬಾಲಕಿಯನ್ನು ಎಳೆದೊಯ್ದು ಅತ್ಯಾಚಾರ ಮಾಡಿದ್ದಾನೆ. 19 ಬಾರಿ ಚಾಕು ಚಾಕುವಿನಿಂದ ಕ್ರೂರಿವಾಗಿ ಹತ್ಯೆ ಮಾಡಿದ್ದಾನೆ. ನಂತರ ಘಟನೆ ಸಿಸಿಟಿವಿ ದೃಶ್ಯಗಳ ಪರಿಶೀಲನೆಯ ಮೂಲಕ ಆರೋಪಿ ಪತ್ತೆಯಾಗಿದ್ದಾನೆ. ನಂತರ ಆತ ಮೈಸೂರಿನಿಂದ ಕೊಳ್ಳೇಗಾಲಕ್ಕೆ ಓಡಿ ಹೋದಿದ್ದಾನೆ.

ಕಾನೂನುಬದ್ಧ ಕಾರ್ಯಾಚರಣೆಯಲ್ಲಿ, ಕೊಳ್ಳೇಗಾಲದಲ್ಲಿ ಆತನನ್ನು ಬಂಧಿಸಲು ಹೋದಾಗ, ಕಾರ್ತಿಕ್ ಪೊಲೀಸ್ ಕಾನ್ಸ್ಟೆಬಲ್ ಮೇಲೆ ದಾಳಿ ಮಾಡಿ ಪರಾರಿಯಾಗಲು ಯತ್ನಿಸಿದ್ದಾನೆ. ಆ ಸಮಯದಲ್ಲಿ ಕಾರ್ತಿಕ್ ಮೇಲೆ ಗುಂಡು ಹಾರಿಸಿ ತಕ್ಷಣ ಆರೋಪಿಯನ್ನ ಬಂಧಿಸಲಾಗಿದೆ.

ಈ ದುರ್ಘಟನೆಯಿಂದ ದುಃಖಿತ ಬಾಲಕಿಯ ಕುಟುಂಬದವರು ಹೊಟ್ಟೆಪಾಡಿಗಾಗಿ ಕಲಬುರಗಿಯಿಂದ ಮೈಸೂರಿಗೆ ಬಂದು ದಸರಾ ಹಬ್ಬದ ಸಂದರ್ಭದಲ್ಲಿ ಬಲೂನ್ ಮಾರಾಟ ಮಾಡಿಕೊಂಡಿದ್ದರು. ಬೆಳಗ್ಗೆ ಬಾಲಕಿಯ ನಾಪತ್ತೆಯಾಗಿದ್ದು, ಪರಿಶೀಲನೆ ನಡೆಸಿದಾಗ ಮಣ್ಣಿನ ಗುಡ್ಡೆಯೊಂದರಲ್ಲಿ ಬಾಲಕಿಯ ಶವ ಪತ್ತೆಯಾಗಿತ್ತು. ಪೊಲೀಸರು ಪ್ರಕರಣದ ಬಗ್ಗೆ ತಪಾಸಣೆ ಮುಂದುವರೆಸಿದ್ದು, ನ್ಯಾಯಾಂಗಕ್ಕೆ ಶೀಘ್ರದಲ್ಲೇ ಪ್ರಕರಣವನ್ನು ಹಾಜರಾತಿ ಮಾಡುವುದಾಗಿ ತಿಳಿಸಿದ್ದಾರೆ.

ವರದಿ : ಲಾವಣ್ಯ ಅನಿಗೋಳ

- Advertisement -

Latest Posts

Don't Miss