Monday, October 13, 2025

Latest Posts

ಮೋದಿ–ಶಾ ಪ್ಲಾನ್ ಗೆ ಬ್ರೇಕ್ – RSS ಹೊಸ ಆಟ ಆರಂಭ!?

- Advertisement -

ರಾಜ್ಯ ರಾಜಕಾರಣದಲ್ಲಿ ಒಂದೆಡೆ ಕಾಂಗ್ರೆಸ್ ಸಂಪುಟ ಪುನರಚನೆ ಕುರಿತ ಚರ್ಚೆ ತೀವ್ರಗೊಳ್ಳುತ್ತಿದ್ದರೆ, ಇನ್ನೊಂದು ಕಡೆ ಬಿಜೆಪಿ ಪಾಳಯದ ಒಳಗಿನ ಕಚ್ಚಾಟವೂ ಶಮನವಾಗಿಲ್ಮುಗಿಯುತ್ತಿಲ್ಲ. ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಮತ್ತು ಪ್ರತಿಪಕ್ಷ ನಾಯಕ ಆರ್. ಅಶೋಕ್ ನಡುವಿನ ಸುದ್ದಿ ಇದೀಗ ಹೊಸ ಚರ್ಚೆಗೆ ಕಾರಣವಾಗಿದೆ.

ಇತ್ತೀಚಿನ ಅತಿವೃಷ್ಟಿ ಹಿನ್ನೆಲೆಯಲ್ಲಿಯೇ ವಿಜಯೇಂದ್ರ ಅವರು ಛಲವಾದಿ ನಾರಾಯಣಸ್ವಾಮಿ ಅವರೊಂದಿಗೆ ಬೀದರ್, ಕಲಬುರ್ಗಿ, ಯಾದಗಿರಿ ಮತ್ತು ಕೊಪ್ಪಳ ಜಿಲ್ಲೆಗಳಿಗೆ ಭೇಟಿ ನೀಡಿ ಪೀಡಿತರ ನೋವು ಆಲಿಸಿದರು. ಸರಕಾರದ ವಿರುದ್ಧ ಕಿಡಿ ಕಾರಿದರು. ಆದರೆ ಆರ್. ಅಶೋಕ್ ಅವರು ಬಳಿಕ ಎಚ್ಚೆತ್ತರು. ವಾಸ್ತವವಾಗಿ ಇಂಥ ಸಂದರ್ಭಗಳಲ್ಲಿ ಮೊದಲು ಪ್ರತಿಪಕ್ಷ ನಾಯಕರು ಎಚ್ಚೆತ್ತುಕೊಳ್ಳಬೇಕಾಗಿತ್ತು. ಆದರೆ ಅವರು ಎಚ್ಚೆತ್ತುಕೊಳ್ಳುವ ಮುಂಚೆ ವಿಜಯೇಂದ್ರ ಅತಿವೃಷ್ಟಿ ಪೀಡಿತ ಪ್ರದೇಶಗಳಿಗೆ ಹೋಗಿ ಜನರ ಸಮಸ್ಯೆ ಆಲಿಸಿದ್ದಾರೆ.

ಪಾರ್ಟಿಯೊಳಗಿನವರು ಒಂದೇ ಪಕ್ಷದ ಪ್ರಮುಖ ಮುಖಗಳು ಪ್ರತ್ಯೇಕವಾಗಿ ಕೆಲಸ ಮಾಡುತ್ತಿದ್ದರೆ, ಜನತೆಗೆ ಯಾವ ಸಂದೇಶ ನೀಡುತ್ತಿದ್ದೇವೆ? ಎಂದು ಪ್ರಶ್ನಿಸುತ್ತಿದ್ದಾರೆ. ಸಭೆಯಲ್ಲಿ ಭಾಗವಹಿಸಿ ಪಕ್ಷದ ನಿಲುವು ಸ್ಪಷ್ಟಪಡಿಸುವ ಬದಲು, ಗೈರು ಹಾಜರಾಗುವ ಮೂಲಕ ಪಕ್ಷವು ಉದ್ದೇಶಪೂರ್ವಕವಾಗಿ ಸರಕಾರಕ್ಕೆ ಸಹಾಯ ಮಾಡಿದೆ ಎಂಬ ಆರೋಪ ಎದ್ದಿದೆ.

ರಾಜ್ಯ ಬಿಜೆಪಿಯ ಗೊಂದಲ ಬಗೆಹರಿಯಬೇಕೆಂದರೆ ಮೊದಲು ರಾಷ್ಟ್ರೀಯ ಬಿಜೆಪಿಯ ಗೊಂದಲ ಬಗೆಹರಿಯಬೇಕು. ಹಾಗಂತಲೇ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಸ್ಥಾನಕ್ಕೆ ಯಾರು ಬರಬಹುದು? ಎಂಬ ಕುತೂಹಲ ರಾಜ್ಯ ಬಿಜೆಪಿಯ ನಾಯಕರಲ್ಲಿದೆ. ಅಂದ ಹಾಗೆ, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಸ್ಥಾನಕ್ಕೆ ಯಾರು ಬರಬೇಕು? ಎಂಬ ವಿಷಯದಲ್ಲಿ ಮೋದಿ-ಅಮಿತ್ ಶಾ ಧೋರಣೆ ಬದಲಾಗಿಲ್ಲ. ಒಂದೋ ಧರ್ಮೇಂದ್ರ ಪ್ರಧಾನ್ ಇಲ್ಲವೇ ಭೂಪೇಂದ್ರ ಯಾದವ್ ಈ ಜಾಗಕ್ಕೆ ಬರಲಿ ಎಂಬುದು ಮೋದಿ-ಅಮಿತ್ ಶಾ ಜೋಡಿಯ ಬಯಕೆ.

ಆದರೆ ಅವರ ಬಯಕೆಗೆ ಶತಾಯಗತಾಯ ಒಪ್ಪಿಗೆ ನೀಡದ ಅರೆಸ್ಸೆಸ್ ವರಿಷ್ಠರು ಶಿವರಾಜ್‌ಸಿಂಗ್ ಚೌಹಾಣ್ ಅವರ ಹೆಸರನ್ನು ಮುಂಚೂಣಿಗೆ ತಂದುಬಿಟ್ಟಿದ್ದರು. ಆದರೆ ದಿಢೀರ್ ಬೆಳವಣಿಗೆಯಲ್ಲಿ ಸ್ವತಃ ಸಿವರಾಜ್‌ಸಿಂಗ್ ಚೌಹಾಣ್ ಅವರು “ನನಗೆ ಅಧ್ಯಕ್ಷ ಪಟ್ಟ ಬೇಡ. ಬದಲಿಗೆ ಪಕ್ಷದ ಸಂಘಟನಾ ಪ್ರಧಾನ ಕಾರ್ಯದರ್ಶಿಯಾಗಿ ಕೆಲಸ ಮಾಡಿದ್ದ ಸಂಜಯ್ ಜೋಷಿ ಬರಲಿ” ಎಂದಿದ್ದಾರೆ.

ಒಟ್ಟಿನಲ್ಲಿ, ಬಿಜೆಪಿ ತನ್ನದೇ ಶಕ್ತಿ ದುರ್ಬಲಗೊಳಿಸಿಕೊಂಡಿದೆ ಎಂಬ ಆತಂಕ ಪಕ್ಷದ ಒಳಗೆ ಹೆಚ್ಚಾಗಿದೆ. ನಾಯಕತ್ವದ ಕೊರತೆ ಮತ್ತು ಒಳಹೊಡೆತದಿಂದ ಬಿಜೆಪಿ ತೀವ್ರ ಚಿಂತೆಯಲ್ಲಿ ಮುಳುಗಿದೆ. ಸಂಜಯ್ ಜೋಷಿಗೆ ಸಾರಥ್ಯ? ಈ ಮಧ್ಯೆ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷರಾಗಿ ಸಂಜಯ್ ಜೋಷಿ ಆಯ್ಕೆಯಾಗುತ್ತಾರಾ? ಎಂಬ ಕುತೂಹಲ ರಾಜ್ಯ ಬಿಜೆಪಿಗರಲ್ಲಿ ಕಾಣಿಸಿಕೊಂಡಿದೆ.

ವರದಿ : ಲಾವಣ್ಯಅನಿಗೋಳ

- Advertisement -

Latest Posts

Don't Miss