Wednesday, October 15, 2025

Latest Posts

ಮಾಟಮಂತ್ರ ಹೆಸರಿನಲ್ಲಿ ವಂಚನೆ : 53 ಲಕ್ಷ ಮೌಲ್ಯದ ಚಿನ್ನ ವಶ!

- Advertisement -

ಮಾಟಮಂತ್ರದಿಂದ ಮುಕ್ತಿ ಅಥವಾ ರಹಸ್ಯ ನಿಧಿಗಳನ್ನು ಹೊರತೆಗೆಯಲು ಪೂಜೆ ಮಾಡುತ್ತೇವೆ ಎಂದು ಹೇಳಿ ಜನರನ್ನು ವಂಚಿಸುತ್ತಿದ್ದ 49 ವರ್ಷದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ಕೋಲಾರ ಮೂಲದ ದಾದಾ ಪೀರ್ ಎಂದು ಗುರುತಿಸಲಾಗಿದ್ದು, ಅವನಿಂದ ₹53 ಲಕ್ಷ ಮೌಲ್ಯದ 485.4 ಗ್ರಾಂ ಕದ್ದ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ.

ಸೆಪ್ಟೆಂಬರ್ 26ರಂದು ಹುಳಿಮಾವು ಪೊಲೀಸರಿಗೆ ಬನ್ನೇರುಘಟ್ಟ ಮುಖ್ಯರಸ್ತೆಯ ಬಳಿ ಅನುಮಾನಾಸ್ಪದ ವ್ಯಕ್ತಿ ನಿಂತಿರುವ ಬಗ್ಗೆ ಮಾಹಿತಿ ಸಿಕ್ಕಿದ್ದು, ಆ ವೇಳೆ ದಾದಾ ಪೀರ್ ಬಂಧನಕ್ಕೊಳಗಾದನು. ವಿಚಾರಣೆ ವೇಳೆ ಅವನು ಆಭರಣಗಳನ್ನು ಕದ್ದಿರುವುದನ್ನು ಹಾಗೂ ಅವನ್ನು ಮಾರಾಟ ಮಾಡಲು ಖರೀದಿದಾರರನ್ನು ಹುಡುಕುತ್ತಿದ್ದುದನ್ನು ಒಪ್ಪಿಕೊಂಡಿದ್ದಾನೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಹುಳಿಮಾವು ಪೊಲೀಸ್ ಠಾಣೆಯಲ್ಲಿ ಕಳ್ಳತನದ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ವಿಚಾರಣೆಯ ವೇಳೆ ಆತ ಮಾಟಮಂತ್ರ ಅಥವಾ ರಹಸ್ಯ ನಿಧಿ ಪೂಜೆಯ ಹೆಸರಿನಲ್ಲಿ ಜನರನ್ನು ವಂಚಿಸಿದ್ದನ್ನು ಸಹ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ವರದಿ: ರಂಜಿತ ರೇವಣ್ಣ ನಾಟನಹಳ್ಳಿ

- Advertisement -

Latest Posts

Don't Miss