ಆಲಿಯಾ ಮನೆ ಸೇರಲಿದೆ ನಮ್ಮ ಮೈಸೂರಿನ ಗಣಪ!

ಬಾಲಿವುಡ್‌ ಬೆಡಗಿ ಆಲಿಯಾ ಭಟ್‌ ಅವರು ವಿಘ್ನ ನಿವಾರಕ ಗಣೇಶನನ್ನು ತುಂಬಾನೇ ನಂಬುತ್ತಾರೆ ಮತ್ತು ಆರಾಧಿಸುತ್ತಾರೆ. ನಾನ್ಯಾಕ್‌ ಈ ವಿಚಾರ ಹೇಳ್ತಾ ಇದ್ದೀನಿ ಅಂದ್ರೆ, ಇದೀಗ ಲೇಟೆಸ್ಟ್‌ ವಿಷಯವೊಂದು ರವೀಲ್‌ ಆಗಿದೆ. ಅದೇನಪ್ಪ ಅಂದ್ರೆ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ನಿರ್ಮಾಣಗೊಂಡಿರುವ ಗಣಪನ ವಿಗ್ರಹವೊಂದು ಆಲಿಯಾ ಅವರ ಮನೆ ಬೆಳಗಲಿದೆ.

ಹೌದು, ಖ್ಯಾತ ಶಿಲ್ಪಿ ಅರುಣ್‌ ಯೋಗಿರಾಜ್‌ ಅವರು ಆಲಿಯಾ ಭಟ್‌ ಅವರಿಗಾಗಿ ಗಣೇಶನ ಮೂರ್ತಿಯೊಂದನ್ನು ಅದ್ಭುತವಾಗಿ ಕೆತ್ತಿದ್ದಾರೆ. ನಾಲ್ಕು ಅಡಿ ಗಣಪ, ಮೂರಡಿ ಪೀಠವುಳ್ಳ ವಿಗ್ರಹ ಇದಾಗಿದೆ. ಹೊಯ್ಸಳ ಹಾಗೂ ಮೈಸೂರು ಶೈಲಿಯಲ್ಲಿ ಕೆತ್ತನೆ ಮಾಡಲಾಗಿದೆ. ಕಳೆದ ಆರು ತಿಂಗಳಿನಿಂದ ನಿರಂತರ ಕೆತ್ತನೆ ಕಾರ್ಯ ನಡೆಯುತ್ತಿದೆ. ಸೆಪ್ಟೆಂಬರ್‌ 17 ರಂದು ಆಲಿಯಾ ಭಟ್ ಕುಟುಂಬಸ್ಥರಿಂದ ಪೂಜೆ ನೆರವೇರಿಸಿದ್ದಾರೆ. ಇಂದು ಈ ವಿಗ್ರಹ ಮುಂಬೈಗೆ ತೆರಳಲಿದೆ.

ಈ ಬಗ್ಗೆ ಮಾತನಾಡಿರುವ ಶಿಲ್ಪಿ ಅರುಣ್‌ ಯೋಗಿರಾಜ್‌, ಆಲಿಯಾ ಅವರು ಗಣಪ‌ ಮೂರ್ತಿ ಮಾಡಿಕೊಡುವಂತೆ ಮನವಿ ಮಾಡಿದ್ದರು. ನಮ್ಮನ್ನ ಮುಂಬೈಗೆ ಕರೆಸಿಕೊಂಡು ಮಾತನಾಡಿದ್ದರು. ನಾವು ಮನೆಯ ಸ್ಥಳ ಎಲ್ಲವನ್ನೂ ಗಮನಿಸಿ ಬಂದಿದ್ದೆ. ಆ ಮನೆಗೆ ಹೊಂದಿಕೊಳ್ಳುವಂತೆ ಗಣಪನ ಕೆತ್ತನೆ ಮಾಡಲಾಗಿದೆ ಎಂದು ಹೇಳಿದ್ದಾರೆ. ಇನ್ನು ವಿಶೇಷವಾಗಿ ಶಿಲ್ಪಿ ಅರುಣ್‌ ಅವರು ನಮ್ಮೆಲ್ಲರಿಗೂ ತಿಳಿದಿರೊ ಹಾಗೇ ಅಯೋಧ್ಯೆಯಲ್ಲಿರುವ ರಾಮ ಮಂದಿರಕ್ಕೆ ರಾಮನ ವಿಗ್ರಹವನ್ನು ಕೆತ್ತನೆ ಮಾಡಿದ್ದಾರು ಮತ್ತು ಮೂರು ಅಂತಸ್ತಿನ ದೇವಾಲಯವನ್ನು ನಾಗರ ವಾಸ್ತುಶಿಲ್ಪ ಶೈಲಿಯಲ್ಲಿ ವಿನ್ಯಾಸಗೊಳಿಸಿದ್ದಾರೆ.

ವರದಿ: ರಂಜಿತ ರೇವಣ್ಣ ನಾಟನಹಳ್ಳಿ

About The Author