ತಾಯಿ ಬಳಿ ಮಲಗಿದ್ದ ಗಂಡು ಮಗುವನ್ನ ಮಹಿಳೆಯೊಬ್ಬಳು ಕಳ್ಳತನ ಮಾಡಿ ಸಿಕ್ಕಿಬಿದ್ದಿದ್ದಾಳೆ. ಮೈಸೂರಿನ ರೈಲ್ವೆ ನಿಲ್ದಾಣದ ಪ್ಲಾಟ್‌ಫಾರ್ಮ್‌ನಲ್ಲಿ ತಾಯಿ ಬಳಿ ಮಲಗಿದ್ದ ಆರು ತಿಂಗಳ ಗಂಡು ಮಗುವನ್ನು ಕದ್ದ ಮಹಿಳೆಯನ್ನು ರೈಲ್ವೇ ಪೊಲೀಸರು ಬಂಧಿಸಿ, ಮಗುವನ್ನು ಸುರಕ್ಷಿತವಾಗಿ ಪೋಷಕರಿಗೆ ಹಸ್ತಾಂತರಿಸಿದ್ದಾರೆ.
ಬುಧವಾರ ರಾತ್ರಿ ಪೋಷಕರು ತಮ್ಮ ಮಗುವಿನೊಂದಿಗೆ ರೈಲ್ವೆ ನಿಲ್ದಾಣದ ಪ್ಲಾಟ್‌ಫಾರ್ಮ್‌ನ ಬಳಿ ಮಲಗಿದ್ದರು. ಈ ವೇಳೆ ಅಜ್ಞಾತ, ಅಪರಿಚಿತ ಮಹಿಳೆಯೊಬ್ಬಳು ನಿದ್ದೆ ಮಾಡುತ್ತಿದ್ದಂತಹ ತಾಯಿ ಬಳಿ ಮಲಗಿರುವಂತಹ ಮಗುವನ್ನು ಕದ್ದುಕೊಂಡು ಹೋಗಿದ್ದಳು. ನಿದ್ರೆಯಿಂದ ಎದ್ದ ತಾಯಿ ಮಗುವು ಕಾಣೆಯಾಗಿರುವುದನ್ನು ಗಮನಿಸಿದ್ದಾರೆ. ಭಾರಿ ಆತಂಕಕ್ಕೊಳಗಾಗಿ ಅಳಲು ತೋಡಿಕೊಂಡಿದ್ದಾರೆ.
ತಾಯಿಯ ಆಕ್ರಂದನ ಕೇಳಿದ ರೈಲ್ವೇ ಪೊಲೀಸರು ತಕ್ಷಣ ವಿಚಾರಣೆ ಆರಂಭಿಸಿದರು.ಪೊಲೀಸರು ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿದಾಗ ಮಧ್ಯವಯಸ್ಕ ಮಹಿಳೆಯೊಬ್ಬಳು ಮಗುವನ್ನು ಎತ್ತಿಕೊಂಡು ಹೋಗಿರುವುದು ದಾಖಲಾಗಿತ್ತು. ತಕ್ಷಣ ಕಾರ್ಯಪ್ರವೃತ್ತರಾದ ರೈಲ್ವೇ ಪೊಲೀಸರು ತನಿಖೆ ಆರಂಭಿಸಿದ್ದಾರೆ. ತನಿಖೆ ನಡೆಸಿ ಹಾಸನ ಮೂಲದ 50 ವರ್ಷದ ನಂದಿನಿ ಎಂಬ ಮಹಿಳೆಯನ್ನು ಪತ್ತೆಹಚ್ಚಿ ಬಂಧಿಸಿದ್ದಾರೆ.
ಬಂಧಿತೆಯ ವಶದಲ್ಲಿದ್ದಂತಹ ಆ ಮಗುವನ್ನು ಸುರಕ್ಷಿತವಾಗಿ ಪೊಲೀಸರು ವಶಪಡಿಸಿಕೊಂಡಿದ್ದಾರೆ. ನಂತರ ಪೋಷಕರಿಗೆ ಒಪ್ಪಿಸಿದ್ದಾರೆ. ಆದ್ರೆ ಈ ಘಟನೆ ರೈಲ್ವೆ ನಿಲ್ದಾಣ ಪ್ರದೇಶದಲ್ಲಿ ಭದ್ರತಾ ಕ್ರಮಗಳ ಬಗ್ಗೆ ಪ್ರಶ್ನೆ ಎತ್ತುವಂತೆ ಮಾಡಿದೆ.
ವರಿರದಿ : ಲಾವಣ್ಯ ಅನಿಗೋಳ