Friday, October 24, 2025

Latest Posts

ಕಾಂಗ್ರೆಸ್‌ ಈಗ ಮನೆಯೊಂದು ಮೂರು ಬಾಗಿಲು !

- Advertisement -

ಕಾಂಗ್ರೆಸ್‌ ಈಗ ಮನೆಯೊಂದು ಮೂರು ಬಾಗಿಲು. ಅಲ್ಲ, ಅಲ್ಲ ಸಿಎಂ ಖುರ್ಚಿ ಒಂದು ಕಾಂಪಿಟೇಷನ್‌ ಅಲ್ಲಿ ಇರೋವ್ರು ಮೂವರು. ಕಾಂಗ್ರೆಸ್‌ ಪಾಳಯದಲ್ಲಿ ಇಷ್ಟು ದಿನ ನಡೆಯುತ್ತಿದ್ದ ಚರ್ಚೆ ಎಂದರೆ ನವೆಂಬರ್‌ ಕ್ರಾಂತಿ. ಈಗ ಹೊಸ ಚರ್ಚೆಗೆ ಕಾರಣವಾಗಿರುವುದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪುತ್ರ ಯತೀಂದ್ರ ಸಿದ್ದರಾಮಯ್ಯ ಅವರ ಆ ಒಂದು ಹೇಳಿಕೆ. ಬೆಳಗಾವಿ ಜಿಲ್ಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಅವರು, ಸತೀಶ್ ಜಾರಕಿಹೊಳಿ ಅವರನ್ನು ಪ್ರಗತಿಪರ ಮತ್ತು ಸೈದ್ಧಾಂತಿಕ ನಾಯಕತ್ವ ನೀಡಬಲ್ಲ ವ್ಯಕ್ತಿ ಎಂದು ಪ್ರಶಂಸಿದ್ದು, ತಮ್ಮ ತಂದೆ ರಾಜಕೀಯ ಜೀವನದ ಕೊನೆಯ ಹಂತದಲ್ಲಿದ್ದಾರೆ ಎಂದಿದ್ದಾರೆ. ಈ ಮಾತುಗಳಿಂದ ಮುಂದಿನ ಮುಖ್ಯಮಂತ್ರಿ ಯಾರು? -ಮುಂದಿನ ಮುಖ್ಯಮಂತ್ರಿ ಸತೀಶ್‌ ಜಾರಕಿಹೊಳಿಯೇ? ಈ ರೀತಿಯ ಊಹಾಪೋಹಗಳು ಹೆಚ್ಚಾಗಿವೆ.

ಈ ಹೇಳಿಕೆಗೆ ಗೃಹ ಸಚಿವ ಡಾ.ಜಿ. ಪರಮೇಶ್ವರ್ ಅವರು ಪ್ರತಿಕ್ರಿಯಿಸಿದ್ದು, ಯತೀಂದ್ರರ ಮಾತು ಸೈದ್ಧಾಂತಿಕವಾಗಿದ್ದು, ಸಿಎಂ ಹುದ್ದೆಯನ್ನು ದೃಷ್ಟಿಯಲ್ಲಿ ಇಟ್ಟು ಹೇಳಿಲ್ಲ ಎಂದಿದ್ದಾರೆ. ಪರಮೇಶ್ವರ್ ಅವರು ಯತೀಂದ್ರ ಸೈದ್ಧಾಂತಿಕವಾಗಿ ಸತೀಶ್ ಜಾರಕಿಹೊಳಿ ಹೆಸರು ಹೇಳಿದ್ದಾರೆ, ಅದರಲ್ಲಿ ತಪ್ಪೇನಿಲ್ಲ ಎಂದು ಸ್ಪಷ್ಟಪಡಿಸಿದರು.

ಇನ್ನೊಂದೆಡೆ, ಯತೀಂದ್ರರ ಹೇಳಿಕೆಗೆ ಸತೀಶ್ ಜಾರಕಿಹೊಳಿ ತೀವ್ರ ಪ್ರತಿಕ್ರಿಯೆ ನೀಡಿದ್ದಾರೆ. ಬೆಳಿಗ್ಗೆ ನಾಜೂಕಾಗಿ ಪ್ರತಿಕ್ರಿಯಿಸಿದ್ದರೂ ಸಂಜೆ ವೇಳೆಗೆ ಅವರು ನೇರವಾಗಿ ಅಖಾಡಕ್ಕಿಳಿದರು. ಅಹಿಂದ ನಾಯಕತ್ವ ರಾಜ್ಯದಲ್ಲಿ ಸೃಷ್ಟಿಯಾಗಬೇಕು, ಸಿದ್ದರಾಮಯ್ಯನವರ ನಂತರ ಅಹಿಂದ ನಾಯಕರೇ ಸಿಎಂ ಆಗಬೇಕು ಎಂದು ಅವರು ಸ್ಪಷ್ಟವಾಗಿ ಹೇಳಿದರು. ನನಗೆ ನಾಯಕತ್ವ ಸಿಗದಿದ್ರೆ ಬೇರೆ ಯಾರಾದರೂ ಅಹಿಂದ ನಾಯಕರು ಹುಟ್ಟಲೇಬೇಕು. ಆ ಪರಂಪರೆಯನ್ನು ಉಳಿಸಬೇಕು ಎಂದ ಅವರು, ಸಿದ್ದರಾಮಯ್ಯನವರಂತೆಯೇ ಅಹಿಂದ ನಾಯಕತ್ವವನ್ನು ಮುಂದುವರಿಸುವ ಆಸೆ ವ್ಯಕ್ತಪಡಿಸಿದರು. ಇದರೊಂದಿಗೆ ರಾಜ್ಯ ಕಾಂಗ್ರೆಸ್‌ನಲ್ಲಿ ನಾಯಕತ್ವದ ಚರ್ಚೆ ಮತ್ತಷ್ಟು ಚುರುಕಾಗಿದೆ.

ವರದಿ: ರಂಜಿತ ರೇವಣ್ಣ ನಾಟನಹಳ್ಳಿ

- Advertisement -

Latest Posts

Don't Miss