ಸ್ಯಾಂಡಲ್ ವುಡ್ ಗೆ ಇದೀಗ ಹೊಸ ಪ್ರತಿಭಾನ್ವಿತ ನಾಯಕನ ಎಂಟ್ರಿ ಆಗಿದೆ.. ರಿಯಲ್ ಸ್ಟಾರ್ ಉಪೇಂದ್ರ ಅಣ್ಣ ನ ಮಗ ನಿರಂಜನ್ ಸುಧೀಂದ್ರ ಅವರು ಸೂಪರ್ ಸ್ಟಾರ್ ಸಿನಿಮಾ ಮೂಲಕ ನಾಯಕರಾಗಿ ಚಿತ್ರರಂಗಕ್ಕೆ ಹೆಜ್ಜೆ ಇಡ್ತಿದ್ದಾರೆ.. ಕೆಲ ದಿನಗಳ ಹಿಂದಷ್ಟೇ ಚಿತ್ರದ ಟೈಟಲ್ ಟೀಸರ್ ರಿವೀಲ್ ಮಾಡಿದ್ದ ಚಿತ್ರತಂಡ, ಇಂದು ನಿರಂಜನ್ ಅವರ ಹುಟ್ಟುಹಬ್ಬದ ವಿಶೇಷತೆಯಲ್ಲಿ ಚಿತ್ರದ ನಾಯಕನ ಕ್ಯಾರೆಕ್ಟರ್ ಟೀಸರ್ ನ್ನ ರಿಲೀಸ್ ಮಾಡಿದೆ.. ಈ ಮೂಲಕ ನಿರಂಜನ್ ಅವರ ಬರ್ತ್ ಡೇಗೆ ಚಿತ್ರತಂಡ ಟೀಸರ್ ನ್ನ ಗಿಫ್ಟ್ ಆಗಿ ನೀಡಿದೆ.. ವಿಶೇಷ ಅಂದ್ರೆ ರೋರಿಂಗ್ ಸ್ಟಾರ್ ಶ್ರೀಮುರಳಿ ಅವರು ಸೂಪರ್ ಸ್ಟಾರ್ ಚಿತ್ರದ ಈ ಟೀಸರ್ ನ್ನ ಲಾಂಚ್ ಮಾಡಿದ್ರು.. ಚಿತ್ರದ ಟೈಟಲ್ ಗೆ ತಕ್ಕಂತೆ ಈ ಕ್ಯಾರೆಕ್ಟರ್ ಟೀಸರ್ ಕೂಡ ಪವರ್ ಫುಲ್ ಆಗಿ ಮೂಡಿಬಂದಿದೆ.. ಮತ್ತೊಂದು ವಿಶೇಷ ಅಂದ್ರೆ ಈ ಟೀಸರ್ ಗೆ ರಾಕಿಂಗ್ ಸ್ಟಾರ್ ಯಶ್ ಅವರು ಹಿನ್ನೆಲೆ ಧ್ವನಿ ನೀಡಿದ್ದಾರೆ.. ಸಿಕ್ಸ್ ಪ್ಯಾಕ್ ಬಾಡಿಯ ನಿರಂಜನ್ ವರ್ಕೌಟ್ ಮಾಡ್ತಿರುವ ವೀಡಿಯೋ ಈ ಟೀಸರ್ ನಲ್ಲಿದೆ.. ನಿರಂಜನ್ ಅವರು ಪವರ್ ಫುಲ್ ಹಾಗೂ ರಗಡ್ ಲುಕ್ ನಲ್ಲಿ ಮಿಂಚಿದ್ದಾರೆ.. ಜೊತೆಗೆ ಎಫೆಕ್ಟೀವ್ ಮ್ಯೂಸಿಕ್ ಹಾಗೂ ಬ್ಯಾಕ್ ಗ್ರೌಂಡ್ ನಲ್ಲಿ ಯಶ್ ಅವರ ಕಂಠದಲ್ಲಿ ಜಬರ್ದಸ್ತ್ ಡೈಲಾಗ್ಸ್ ಇದೆ.. ಒಟ್ಟಾರೆ ಇಡೀ ಟೀಸರ್ ಸಖತ್ ಥ್ರಿಲ್ಲಿಂಗ್ ಆಗಿ ಮೂಡಿಬಂದಿದೆ..
ಟೀಸರ್ ರಿಲೀಸ್ ಮಾಡಿ, ನಂತ್ರ ಮಾತನಾಡಿದ ನಟ ಶ್ರೀಮುರಳಿ ಅವರು ಚಿತ್ರರಂಗಕ್ಕೆ ನಾಯಕರಾಗಿ ಎಂಟ್ರಿ ಕೊಡ್ತಿರುವ ನಿರಂಜನ್ ಗೆ ಶುಭ ಹಾರೈಸಿದ್ರು.. ಟೀಸರ್ ಬಗ್ಗೆ ಸಾಕಷ್ಟು ಮೆಚ್ಚುಗೆ ವ್ಯಕ್ತಪಡಿಸಿ, ಚಿತ್ರದ ಟೈಟಲ್ ಗೆ ತಕ್ಕಂತೆ ಸೂಪರ್ ಸ್ಟಾರ್ ಆಗಿ ಮಿಂಚುವಂತಾಗ್ಲಿ ಅಂತ ವಿಶ್ ಮಾಡಿದ್ರು.. ಜೊತೆಗೆ ತಮ್ಮ ಚಿತ್ರರಂಗದಲ್ಲಿನ 17 ವರ್ಷಗಳ ಅನುಭವದ ಮೇಲೆ ನಟ ನಿರಂಜನ್ ಗೆ ಕೆಲ ಸಲಹೆಗಳನ್ನ ನೀಡಿದ್ರು.. ಸಿನಿಮಾರಂಗದಲ್ಲಿ ಕಷ್ಟಗಳು, ಸಕ್ಸಸ್ ಎಲ್ಲಾ ಕಾಮನ್, ಆದ್ರೆ ಅದಕ್ಕೆ ನಾವು ರೆಡಿಯಾಗಿರ್ಬೇಕು.. ಚಿತ್ರರಂಗದಲ್ಲಿ ಎಲ್ಲರನ್ನೂ ಒಳ್ಳೆಯವರು ಅಂತಲೇ ಭಾವಿಸು ಅಂತ ಈ ಎರಡು ಒಳ್ಳೆ ಸಲಹೆಗಳನ್ನ ನೀಡಿದ್ರು..
ನಿರಂಜನ್ ನಟನೆಯ ಸೂಪರ್ ಸ್ಟಾರ್ ಚಿತ್ರವನ್ನ ನಿರ್ದೇಶಕ ರಮೇಶ್ ವೆಂಕಟೇಶ್ ಬಾಬು ಅವರು ಡೈರೆಕ್ಟ್ ಮಾಡ್ತಿದ್ದಾರೆ.. ರಮೇಶ್ ವೆಂಕಟೇಶ್ ಬಾಬು ಅವರ ನಿರ್ದೇಶನದ ಮೊದಲ ಸಿನಿಮಾ ಸೂಪರ್ ಸ್ಟಾರ್.. ಅಂದಹಾಗೆ ಸೂಪರ್ ಸ್ಟಾರ್ ಅನ್ನೋ ಚಿತ್ರದ ಟೈಟಲ್ ಕೇಳ್ತಿದ್ದ ಹಾಗೆ, ಅರೆರೆ ಇದು ಉಪೇಂದ್ರ ನಟನೆಯ ಚಿತ್ರದ ಹೆಸರಲ್ವಾ ಅನ್ನಿಸೋದು ಸಹಜ.. ಇದೀಗ ಅದೇ ಟೈಟಲ್ ನ ಚಿತ್ರದಲ್ಲಿ ನಿರಂಜನ್ ನಾಯಕರಾಗಿ ನಟಿಸ್ತಿದ್ದಾರೆ.. ಆದ್ರೆ ಉಪ್ರೇಂದ್ರ ಅವರ ಚಿತ್ರಕ್ಕೂ ಈ ಚಿತ್ರಕ್ಕೂ ಯಾವುದೇ ಸಂಬಂಧವಿಲ್ಲ.. ಚಿತ್ರದ ಸಬ್ಜೆಕ್ಟ್ ಗೆ ಈ ಟೈಟಲ್ ಸೂಕ್ತ.. ಹಾಗಾಗಿ ಈ ಟೈಟಲ್ ಇಡಲಾಗಿದೆ ಅಂತ ಟೈಟಲ್ ಬಗ್ಗೆ ಇರುವ ಗೊಂದಲಗಳಿಗೆ ಸ್ಪಷ್ಟನೆ ನೀಡಿದ್ದಾರೆ ನಿರ್ದೇಶಕರು.. ಈ ಸಮಯದಲ್ಲಿ ನಿರಂಜನ್ ಚಿಕ್ಕಪ್ಪ, ನಟ ಉಪೇಂದ್ರ ಅವರು ಮಾತನಾಡಿ ಸೂಪರ್ ಸ್ಟಾರ್ ಚಿತ್ರಕ್ಕಾಗಿ ನಿರಂಜನ್ ಸಾಕಷ್ಟು ಎಫರ್ಟ್ ಹಾಕಿದ್ದಾನೆ, ಅದರ ಪ್ರತಿಫಲವಾಗಿಯೇ ಇಂದು ಚಿತ್ರದ ಟೀಸರ್ ಇಷ್ಟು ಚೆನ್ನಾಗಿ ಮೂಡಿಬಂದಿದೆ ಅಂತ ಹೇಳಿದ್ರು.. ನಿರಂಜನ್ ಹುಟ್ಟುಹಬ್ಬಕ್ಕೆ ವಿಶ್ ಮಾಡಿ ಉಪೇಂದ್ರ ಅವರು, ಟೀಸರ್ ತುಂಬಾ ಚೆನ್ನಾಗಿ ಮೂಡಿಬಂದಿದೆ, ಈ ಮೂಲಕ ನಿನ್ನ ಜವಾಬ್ದಾರಿ ಕೂಡ ಹೆಚ್ಚಾಗಿದೆ ನಿರಂಜನ್.. ಆಲ್ ದ ಬೆಸ್ಟ್ ನಿನಗೆ ಒಳ್ಳೆಯದಾಗ್ಲಿ ಅಂತ ಶುಭ ಕೋರಿದ್ರು.. ಜೊತೆಗೆ ನಿಜವಾದ ಸೂಪರ್ ಸ್ಟಾರ್ಸ್ ನಾವಲ್ಲ, ಅಭಿಮಾನಿಗಳೇ ನಿಜವಾದ ಸೂಪರ್ ಸ್ಟಾರ್ಸ್ ಅಂದ್ರು..
ಇನ್ನೂ ಸೂಪರ್ ಸ್ಟಾರ್ ಚಿತ್ರದ ಈ ಕ್ಯಾರೆಕ್ಟರ್ ಟೀಸರ್ ರಿವೀಲ್ ಕಾರ್ಯಕ್ರಮಕ್ಕೆ ಭರ್ಜರಿ ಸಿನಿಮಾ ಖ್ಯಾತಿಯ ನಿರ್ದೇಶಕ ಚೇತನ್, ಅಯೋಗ್ಯ ಚಿತ್ರದ ನಿರ್ದೇಶಕ ಮಹೇಶ್, ನಟ ಶಶಿಕುಮಾರ್ ಕುಮಾರ್ ಪುತ್ರ ಅಕ್ಷಿತ್, ಆಲ್ ಓಕೆ ರ್ಯಾಪರ್ ಅಲೋಕ್ ಹೀಗೆ ಸಾಕಷ್ಟು ಜನ ಕಲಾವಿದರು ಆಗಮಿಸಿದ್ದು, ಟೀಸರ್ ಗೆ ಮೆಚ್ಚುಗೆ ಸೂಚಿಸಿ, ನಿರಂಜನ್ ಅವರ ಮೊದಲ ಚಿತ್ರಕ್ಕೆ ಶುಭ ಹಾರೈಸಿದ್ರು.. ಅಲ್ಲದೆ ಉಪೇಂದ್ರ ಅವರ ಇಡೀ ಫ್ಯಾಮಿಲಿ ಈ ಕಾಯ್ರಕ್ರಮದಲ್ಲಿ ಭಾಗಿಯಾಗಿತ್ತು..
ಅಂದಹಾಗೆ ನಿರ್ಮಾಪಕ ಮೈಲಾರಿ ಅವರು ಈ ಚಿತ್ರವನ್ನ ನಿರ್ಮಾಣ ಮಾಡ್ತಿದ್ದಾರೆ.. ಆರ್ ವಿಬಿ ಸಿನಿಮಾಸ್ ಹಾಗೂ ಮೈಲಾರಿ ಪ್ರೊಡಕ್ಷನ್ಸ್ ಬ್ಯಾನರ್ ನಲ್ಲಿ ಈ ಸಿನಿಮಾ ಮೂಡಿಬರ್ತಿದೆ.. ರಾಘವೆಂದ್ರ.ವಿ ಅವರು ಈ ಚಿತ್ರಕ್ಕೆ ಮ್ಯೂಸಿಕ್ ಕಂಪೋಸ್ ಮಾಡ್ತಿದ್ದಾರೆ.. ಸದ್ಯ ಚಿತ್ರದ ಟೀಸರ್ ರಿಲೀಸ್ ಮಾಡಿರುವ ಚಿತ್ರತಂಡ ಅತೀ ಶೀಘ್ರದಲ್ಲೇ ಸೂಪರ್ ಸ್ಟಾರ್ ಚಿತ್ರದ ಚಿತ್ರೀಕರಣವನ್ನೂ ಆರಂಭಿಸಲಿದೆ.. ಮುಂದಿನ ವರ್ಷ ಬಿಗ್ ಸ್ಕ್ರೀನ್ ನಲ್ಲಿ ನಿರಂಜನ್ ನಟನೆಯ ಸೂಪರ್ ಸ್ಟಾರ್ ಚಿತ್ರ ತೆರೆಕಾಣಲಿದೆ..
ಚಂದನ.ಎಸ್, ಸಿನಿಮಾ ಬ್ಯೂರೋ, ಕರ್ನಾಟಕ ಟಿವಿ