Thursday, October 30, 2025

Latest Posts

ಟ್ರಾಫಿಕ್‌ ಪರಿಹಾರಕ್ಕೆ ಡಿಕೆಶಿಗೆ ತೇಜಸ್ವಿ ಕೊಟ್ರು 5 ಸಲಹೆಗಳು !

- Advertisement -

ರಾಜಕೀಯ ವಾಗ್ವಾದ ಮತ್ತು ಪರಿಸರ ಪ್ರೇಮಿಗಳ ವಿರೋಧಕ್ಕೆ ಕಾರಣವಾಗಿರುವ ಟನಲ್ ರಸ್ತೆ ಯೋಜನೆ ಕುರಿತಂತೆ ಸಂಸದ ತೇಜಸ್ವಿ ಸೂರ್ಯ ಅವರು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರನ್ನು ಭೇಟಿ ಮಾಡಿ ಬೆಂಗಳೂರಿನ ಟ್ರಾಫಿಕ್ ಸಮಸ್ಯೆ ನಿವಾರಣೆಗೆ ಐದು ಪ್ರಮುಖ ಸಲಹೆಗಳನ್ನು ನೀಡಿದ್ದಾರೆ.

ಮೊದಲನೆಯದಾಗಿ, ತೇಜಸ್ವಿ ಸೂರ್ಯ ಅವರ ಪ್ರಕಾರ ಟನಲ್ ರಸ್ತೆ ಯೋಜನೆ ಟ್ರಾಫಿಕ್ ಸಮಸ್ಯೆ ಪರಿಹಾರವಲ್ಲ. 47,000 ಕೋಟಿ ರೂ ವೆಚ್ಚದ ಯೋಜನೆ ಕೇವಲ 30-35 ಕಿಮೀ ಉದ್ದದ ರಸ್ತೆಗೆ ಅತಿಯಾದ ಖರ್ಚು. ಜನಸಾಮಾನ್ಯರು ಪ್ರತೀ ಪ್ರಯಾಣಕ್ಕೆ ₹330 ಟೋಲ್ ಪಾವತಿಸಬೇಕಾಗಿರುವುದು ಕೈಗೆಟಕುವದಿಲ್ಲ. ಜೊತೆಗೆ, ಪ್ರವೇಶ ಮತ್ತು ನಿರ್ಗಮನಕ್ಕೆ 22 ರ್ಯಾಂಪ್‌ಗಳು ನಿರ್ಮಾಣವಾಗಲಿದ್ದು, ಇವು ಹೊಸ ಟ್ರಾಫಿಕ್ ದಟ್ಟಣೆ ಕೇಂದ್ರಗಳಾಗಬಹುದು. ಮೆಟ್ರೋ ರೆಡ್ ಲೈನ್ ಮಾರ್ಗಕ್ಕೂ ಈ ಯೋಜನೆ ಅಡ್ಡಿಯಾಗುವ ಸಾಧ್ಯತೆ ಇದೆ ಎಂದು ಅವರು ಎಚ್ಚರಿಸಿದ್ದಾರೆ.

ಎರಡನೆಯದಾಗಿ, ಅವರು ಮೆಟ್ರೋ ರೈಲು ವ್ಯವಸ್ಥೆ ವಿಸ್ತರಣೆಗೇ ಹೆಚ್ಚು ಪ್ರಾಮುಖ್ಯತೆ ನೀಡಬೇಕು ಎಂದು ಸಲಹೆ ನೀಡಿದ್ದಾರೆ. ಇಂದು ಲಕ್ಷಾಂತರ ಜನರು ಮೆಟ್ರೋ ಮೂಲಕ ಪ್ರಯಾಣಿಸುತ್ತಿರುವುದರಿಂದ ಈ ವ್ಯವಸ್ಥೆಯ ವ್ಯಾಪ್ತಿ ಹೆಚ್ಚಿಸಬೇಕು, ಕಾಮಗಾರಿಗಳನ್ನು ಸಮಯಕ್ಕೆ ಮುಗಿಸಬೇಕು ಮತ್ತು ಟಿಕೆಟ್ ದರವನ್ನು ಜನಸ್ನೇಹಿಯಾಗಿ ಇಡಬೇಕು ಎಂದಿದ್ದಾರೆ. ಮೆಟ್ರೋ ಕಾಮಗಾರಿಗಳ ಮೇಲ್ವಿಚಾರಣೆಗೆ Special War Room ರಚನೆಗೂ ಶಿಫಾರಸು ಮಾಡಿದ್ದಾರೆ.

ಮೂರನೆಯದಾಗಿ, ಅವರು ಉಪನಗರ ರೈಲು ಯೋಜನೆ ಶೀಘ್ರ ಪೂರ್ಣಗೊಳಿಸುವ ಅಗತ್ಯವಿದೆ ಎಂದು ಹೇಳಿದ್ದಾರೆ. 314 ಕಿ.ಮೀ. ಉದ್ದದ ಈ ಯೋಜನೆ ಕಡಿಮೆ ವೆಚ್ಚದಲ್ಲಿ ಹೆಚ್ಚು ಪ್ರಯಾಣಿಕರಿಗೆ ಪ್ರಯೋಜನಕಾರಿಯಾಗಿದೆ. ಇದರ ಅನುಷ್ಠಾನಕ್ಕಾಗಿ ಕೆ-ರೈಡ್ ಮತ್ತು ರೈಲ್ವೆ ಇಲಾಖೆಯೊಂದಿಗೆ ತಕ್ಷಣ ಸಭೆ ನಡೆಸುವಂತೆ ಅವರು ಉಪಮುಖ್ಯಮಂತ್ರಿಗೆ ಮನವಿ ಮಾಡಿದ್ದಾರೆ. ಜೊತೆಗೆ, ಟ್ರ್ಯಾಮ್ ರೈಲು ಯೋಜನೆಗಳನ್ನೂ ನಗರ ಒಳಭಾಗದಲ್ಲಿ ಅಳವಡಿಸುವಂತೆ ಸಲಹೆ ನೀಡಿದ್ದಾರೆ, ಅಲ್ಪ ದೂರ ಪ್ರಯಾಣಕ್ಕೆ ಇದು ಸೂಕ್ತವಾಗುತ್ತದೆ ಎಂದು ಹೇಳಿದ್ದಾರೆ.

ಕೊನೆಯದಾಗಿ, ಅವರು ಪಿಆರ್‌ಆರ್ ರಸ್ತೆ ಮತ್ತು ಬಿಎಂಟಿಸಿ ಬಸ್‌ಗಳ ವಿಸ್ತರಣೆಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಬಿಎಂಟಿಸಿಗೆ 5 ಸಾವಿರ ಹೊಸ ಬಸ್‌ಗಳನ್ನು ಸೇರಿಸಿ, ಬಸ್ ನಿಲ್ದಾಣಗಳನ್ನು ಹೆಚ್ಚಿಸಿ ಮತ್ತು ಹೊರ ವರ್ತುಲ ರಸ್ತೆಯಲ್ಲಿ ಬಿಆರ್‌ಟಿಎಸ್ ಕಾರಿಡಾರ್ ನಿರ್ಮಿಸಬೇಕೆಂದು ಮನವಿ ಮಾಡಿದ್ದಾರೆ. ತೇಜಸ್ವಿ ಸೂರ್ಯ ಅವರ ಪ್ರಕಾರ, ಸರ್ಕಾರವು ಟನಲ್ ಯೋಜನೆ ಕೈಬಿಟ್ಟು ಜನಪರ ಪರಿಹಾರ ಮಾರ್ಗಗಳನ್ನು ಅನುಸರಿಸುವ ವಿಶ್ವಾಸವಿದೆ. ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಕೂಡ ಸಂಚಾರ ದಟ್ಟಣೆ ನಿವಾರಣೆಯೇ ನಮ್ಮ ಉದ್ದೇಶ ಎಂದು ಭರವಸೆ ನೀಡಿದ್ದಾರೆ.

ವರದಿ: ರಂಜಿತ ರೇವಣ್ಣ ನಾಟನಹಳ್ಳಿ

- Advertisement -

Latest Posts

Don't Miss