Friday, October 31, 2025

Latest Posts

ಮುದ್ದೆ, ಕೋಳಿ, ಇಡ್ಲಿ ಗುಟ್ಟೇನು?

- Advertisement -

ಬಿಜೆಪಿ ನಾಯಕರು ರಾತ್ರಿಯಾದರೆ ಡಿಸಿಎಂ ಡಿ.ಕೆ. ಶಿವಕುಮಾರ್ ಮನೆಯಲ್ಲಿ ರಾಗಿ ಮುದ್ದೆ ನಾಟಿ ಕೋಳಿ ತಿನ್ನುತ್ತಾರೆ. ಬೆಳಗ್ಗೆ ಸಿದ್ದರಾಮಯ್ಯ ಮನೆಯಲ್ಲಿ ತಟ್ಟೆ ಇಡ್ಲಿ ತಿನ್ನುತ್ತಿದ್ದಾರೆ. ಈ ಪಕ್ಷ ಹೇಗೆ ಉದ್ಧಾರ ಆಗುತ್ತದೆ?. ಹೀಗಂತ ಬಿಜೆಪಿ ಉಚ್ಚಾಟಿತ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಗುಡುಗಿದ್ದಾರೆ.

ವಿಧಾನಸೌಧದಲ್ಲಿ ಮಾತನಾಡಿರುವ ಯತ್ನಾಳ್, ಮೇಲಿನವರು ಸುಮ್ಮನೆ ಕೂತಿದ್ದಾರೆ. ಈಗ ತಾನು ಹೋದರೆ ಸಮಸ್ಯೆ ಆಗುತ್ತದೆ ಎಂದು ಸಿಎಂ ನಿವಾಸಕ್ಕೆ ರವಿಕುಮಾರ್‌ ಅವರನ್ನು ಕಳುಹಿಸ್ತಿದ್ದಾರೆ. ಅವರು ಸಿಎಂ ಕಾರಲ್ಲೇ ಹೋಗ್ತಾರೆ.

ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ನಾಪತ್ತೆಯಾಗಿದ್ದಾರೆ. ಬಿಜೆಪಿಯಲ್ಲಿ ಕ್ರಾಂತಿಯಾಗುತ್ತೋ ಅಥವಾ ಶಾಂತಿಯಾಗುತ್ತೋ ಗೊತ್ತಿಲ್ಲ. ಪೂಜ್ಯ ತಂದೆಯವರ ಕಿರಿಯ ಮಗ ನಾಪತ್ತೆಯಾಗಿದ್ದಾನೆ.

ಆರ್‌ಎಸ್‌ಎಸ್ ಕುರಿತಾಗಿ ಸಚಿವ ಪ್ರಿಯಾಂಕ್ ಖರ್ಗೆ ಇಷ್ಟೊಂದು ಮಾತಾಡುವಾಗ, ವಿಜಯೇಂದ್ರ ಮಾತಾಡಬೇಕಿತ್ತಲ್ಲ? ಅವರೂ ಮಾತನಾಡುತ್ತಿಲ್ಲ. ವಿಪಕ್ಷ ನಾಯಕರಾದ ಆರ್. ಅಶೋಕ್ ಕೂಡಾ ಮಾತನಾಡುತ್ತಿಲ್ಲ.

ಪ್ರಿಯಾಂಕ್ ಖರ್ಗೆ ಅವರು ಆರೆಸ್ಸೆಸ್, ಬಿಜೆಪಿ ವಿರುದ್ಧ ಇಷ್ಟೊಂದು ಅಟ್ಯಾಕ್ ಮಾಡ್ತಿದ್ದಾರೆ. ಆಶೋಕ್ ಅವರು ಒಂದೆರಡು ಹೇಳಿಕೆ ಕೊಟ್ಟಿದ್ದಾರೆ. ಆದರೆ, ಅದರಲ್ಲಿ ಉಗ್ರ ಹೇಳಿಕೆ ಅನ್ನುವಂಥವು ಯಾವುದೂ ಇಲ್ಲ. ನಾನೊಬ್ಬ ಇದಕ್ಕೆ ಕೌಂಟರ್ ಕೊಡುತ್ತೇನೆ. ಬಿಜೆಪಿಯಲ್ಲಿ ಪ್ರತಾಪ್ ಸಿಂಹ ಒಬ್ಬರು ಮಾತಾಡ್ತಾರಷ್ಟೇ.

ಕರ್ನಾಟಕದ ಎಲ್ಲಾ ಅಧಿಕಾರಿಗಳು ಪ್ರಿಯಾಂಕ್ ಖರ್ಗೆ ಕೈಗೊಂಬೆಯಾಗಿದ್ದಾರೆ. ಅವರ ತಂದೆ ಕಾಂಗ್ರೆಸ್ ಅಧ್ಯಕ್ಷರಿದ್ದಾರೆ ಅಂತಾ, ಇವರು ಬರೆದ ಪತ್ರ ಪರಿಶೀಲಿಸಿ ಎಂದು, ಸಿಎಂ ಕೂಡ ಹೇಳುವಂತಾಗಿದೆ. ಅದರರ್ಥ, ಸಿಎಂ ಸಿದ್ದರಾಮಯ್ಯ ಕೂಡ ಪ್ರಿಯಾಂಕ್ ಖರ್ಗೆಯ ಕೈಗೊಂಬೆಯಾಗಿದ್ದಾರೆಂದು ಕಿಡಿಕಾರಿದರು.

- Advertisement -

Latest Posts

Don't Miss