ವಣಗೂರಿನಿಂದ ಕುಕ್ಕೆ ಸುಬ್ರಮಣ್ಯಕ್ಕೆ ಮದುವೆಗೆ ಹೊರಟಿದ್ದ 30 ಮಂದಿ, ಆಸ್ಪತ್ರೆ ಪಾಲಾಗಿದ್ದಾರೆ. ಅದೃಷ್ಟವಷಾತ್ ಯಾವುದೇ ಪ್ರಾಣಾಪಾಯ ಆಗಿಲ್ಲ. ಬಿಸ್ಲೆ ಘಾಟ್ ಡಬಲ್ ಟರ್ನ್‌ನಲ್ಲಿ ಮದುವೆ ವ್ಯಾನ್ 30 ಅಡಿ ಎತ್ತರದಿಂದ ಮಗುಚಿ ಬಿದಿದ್ದು, ನಾಲ್ವರ ಸ್ಥಿತಿ ಗಂಭೀರವಾಗಿದೆ. ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ವನಗೂರು ಬಳಿ ನಡೆದಿದೆ.
ವಣಗೂರು ಕುಣಿಕೆರೆ ಬಸವೇಗೌಡರ ಮಗ ಯೋಗೇಶ್ ಮದುವೆ, ಇಂದು ಕುಕ್ಕೆ ಸುಬ್ರಹ್ಮಣ್ಯ ಸಮೀಪದ ಕುಲಗುಂದ ಯುವತಿ ಜೊತೆ ನಿಶ್ಚಯವಾಗಿತ್ತು. ಇಂದು ಬೆಳಗ್ಗೆ ಮದುವೆ ಇದ್ದ ಕಾರಣ ಗಂಡಿನ ಕಡೆಯವರು, KA12B 2579 ನಂಬರಿನ ಮಿನಿ ಬಸ್‌ನಲ್ಲಿ ಹೊರಟಿದ್ದರು.
ರಸ್ತೆಯ ಪಕ್ಕದಲ್ಲೇ ಚರಂಡಿಗೆಂದು ಗುಂಡಿ ತೆಗೆಯಲಾಗಿತ್ತು. ಬಿಸ್ಲೆ ಘಾಟ್ ಡಬಲ್ ಟರ್ನ್‌ನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಬಸ್, 30 ಅಡಿ ಆಳಕ್ಕೆ ಮಗುಚಿ ಬಿದ್ದಿದೆ. ನಾಲ್ವರನ್ನು ಬಿಟ್ಟು ಉಳಿದವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಹೆಚ್ಚಿನ ಚಿಕಿತ್ಸೆಗೆ ಮಂಗಳೂರು, ನಲ್ಯಾಣಿ ಹಾಗೂ ಸಕಲೇಶಪುರ ಆಸ್ಪತ್ರೆಗಳಿಗೆ, ರವಾನಿಸಲಾಗಿದೆ.

