Thursday, November 27, 2025

Latest Posts

“ಗುಂಡಿ ಮುಚ್ಚುವ ಯೋಗ್ಯತೆ ಇಲ್ಲ”

- Advertisement -

ಡಿಸಿಎಂ ಡಿ.ಕೆ ಶಿವಕುಮಾರ್‌ ಡ್ರೀಮ್‌ ಪ್ರಾಜೆಕ್ಟ್‌ ಆದ ಬೆಂಗಳೂರಿನ ಟನಲ್ ರೋಡ್‌ಗೆ ಭಾರೀ ವಿರೋಧ ವ್ಯಕ್ತವಾಗುತ್ತಿದೆ. ಜೆಡಿಎಸ್‌ ಕೂಡ ಟನಲ್‌ ರೋಡ್‌ ಯೋಜನೆಯನ್ನು ವಿರೋಧಿಸಿದೆ. ಗುಂಡಿ ಮುಚ್ಚುವುದಕ್ಕೆ ಆಗದವರು ಟನಲ್‌ ರೋಡ್‌ ಮಾಡ್ತೀರಾ ಎಂದು ಜೆಡಿಎಸ್‌ ಯುವ ನಾಯಕ ನಿಖಿಲ್‌ ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.

ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ, ಜೆಡಿಎಸ್ ಹೊಂದಾಣಿಕೆ ಆಯ್ತು. ಫಲಿತಾಂಶ ನೋಡಿ ಕಾಂಗ್ರೆಸ್‌ನವರು ಬೆಚ್ಚಿ ಬಿದ್ದಿದ್ದಾರೆ. ಹೀಗಾಗಿ ಆ ರೀತಿಯೆಲ್ಲಾ ಮಾತಾಡ್ತಾರೆ. ಬೆಂಗಳೂರಿನಲ್ಲೇ ಶೇಕಡ 70ರಷ್ಟು ಆದಾಯ ಉತ್ಪಾದನೆ ಆಗುತ್ತಿದೆ. ಅತೀ ಹೆಚ್ಚು ತೆರಿಗೆ ಸಂಗ್ರಹವೂ ಆಗ್ತಿದೆ. ಮತ್ತೆ ವಾಪಸ್‌ ಎಷ್ಟು ಕೊಡುತ್ತಿದ್ದೀರಾ. ಸರಿಯಾಗಿ ಒಂದ್‌ ಗುಂಡಿ ಮುಚ್ಚುವುದಕ್ಕೂ ಆಗಿಲ್ಲ ಎಂದು ವ್ಯಂಗ್ಯವಾಡಿದ್ದಾರೆ.

ಟನಲ್‌ ರೋಡ್‌ ಮಾಡ್ತೀನಿ ಎಂದು ಹೇಳ್ತಾರೆ. ಅಲ್ಲಿ ಓಡಾಡೋರು ಬರೀ ಕಾರು ಇಟ್ಟುಕೊಂಡವರು. ಓಮ್ಮೆ ಹೋಗಿ ಬರಲು 600 ರೂಪಾಯಿ ಕೊಡ್ಬೇಕು. ತಿಂಗಳಿಗೆ 20 ಸಾವಿರ ರೂಪಾಯಿ ಕಟ್ಬೇಕಾ ಮೆಟ್ರೋ ಟಿಕೆಟ್‌ ಬೆಲೆ ಏರಿಕೆ ಆಗಿದೆ. ಬೈಕ್‌ನಲ್ಲಿ ಓಡಾಡುವವರು ಏನ್‌ ಮಾಡ್ಬೇಕು? ಸಾರ್ವಜನಿಕ ಸಾರಿಗೆಗೆ ಪ್ರೋತ್ಸಾಹ ಕೊಡುವಂತೆ ಆಗ್ರಹಿಸಿದ್ರು. ಗುಂಡಿ ಮುಚ್ಚುವುದಕ್ಕೆ ಯೋಗ್ಯತೆ ಇಲ್ಲ. 50 ತಿಂಗಳಲ್ಲಿ ಮುಗಿಸುತ್ತೇನೆ ಅಂತಾ ಹೇಳ್ತಾರೆ ಅಗುತ್ತಾ?. ಟನಲ್‌ ರೋಡ್‌ಗೆ ಸಂಪೂರ್ಣ ವಿರೋಧ ಇದೆ. ಟನಲ್‌ ರೋಡನ್ನ ಯಾವ ಪುರುಷಾರ್ಥಕ್ಕಾಗಿ ಮಾಡುತ್ತಿದ್ದೀರಾ ಎಂದು ನಿಖಿಲ್‌ ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.

ಇನ್ನು, ಕಾಂಗ್ರೆಸ್‌ ಸಂಸದ ರಾಹುಲ್‌ ಗಾಂಧಿ ಅವರ ವೋಟ್‌ ಚೋರಿ ಆರೋಪಕ್ಕೆ ನಿಖಿಲ್‌ ಕುಮಾರಸ್ವಾಮಿ ವ್ಯಂಗ್ಯವಾಡಿದ್ದಾರೆ. ಅವರ
ಚೈಲ್ಡಿಸ್‌, ಬಾಲಿಷ ಹೇಳಿಕೆಗಳಿಂದಲೇ ಆರ್‌ಜೆಡಿ ಈ ಬಾರಿ ಸೋಲು ಅನುಭವಿಸುತ್ತದೆ ಎಂದು ಭವಿಷ್ಯ ನುಡಿದಿದ್ದಾರೆ.

ಒಟ್ನಲ್ಲಿ, ರಾಜ್ಯ ಕಾಂಗ್ರೆಸ್‌ ವಿರುದ್ಧ ಸಮರ ಸಾರುವುದಕ್ಕೆ ಜೆಡಿಎಸ್‌ ಸನ್ನದ್ಧವಾಗಿದೆ.

- Advertisement -

Latest Posts

Don't Miss