Wednesday, November 26, 2025

Latest Posts

ರಾಹುಲ್ ಗಾಂಧಿ ಮತಚೋರಿ ಆರೋಪ : ಬ್ರೆಜಿಲ್ ಮಾಡೆಲ್ ಲಾರಿಸ್ಸಾ ಪ್ರತಿಕ್ರಿಯೆ

- Advertisement -

ಹರಿಯಾಣ ವಿಧಾನಸಭಾ ಚುನಾವಣೆಯಲ್ಲಿ ಮತದಾರರ ಪಟ್ಟಿ ಹಗರಣದ ಕುರಿತು, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೀಡಿದ್ದ ಆರೋಪ ಈಗ ಅಂತರಾಷ್ಟ್ರೀಯ ಚರ್ಚೆಗೆ ಕಾರಣವಾಗಿದೆ. ರಾಹುಲ್ ಉಲ್ಲೇಖಿಸಿದ್ದ ಬ್ರೆಜಿಲ್ ಮೂಲದ ಮಾಡೆಲ್ ಲಾರಿಸ್ಸಾ ಈ ವಿವಾದಕ್ಕೆ ಇದೀಗ ಪ್ರತಿಕ್ರಿಯೆ ನೀಡಿದ್ದಾರೆ. ನನಗೆ ಭಾರತೀಯ ರಾಜಕೀಯದೊಂದಿಗೆ ಯಾವುದೇ ಸಂಬಂಧವಿಲ್ಲ. ಯಾರೋ ನನ್ನ ಫೋಟೋವನ್ನು ಸ್ಟಾಕ್ ಇಮೇಜ್‌ನಿಂದ ಖರೀದಿಸಿ ದುರುಪಯೋಗ ಮಾಡಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ.

ಲಾರಿಸ್ಸಾ ಇನ್‌ಸ್ಟಾಗ್ರಾಮ್‌ನಲ್ಲಿ ವಿಡಿಯೋ ಪ್ರಕಟಿಸಿ, ನಾನು ಭಾರತಕ್ಕೆ ಎಂದಿಗೂ ಹೋಗಿಲ್ಲ, ಆದರೆ ಭಾರತದ ಜನರನ್ನು ಪ್ರೀತಿಸುತ್ತೇನೆ. ನನಗೆ ಬಂದ ಎಲ್ಲ ಪತ್ರಕರ್ತರ ಸಂದೇಶಗಳಿಗೆ ನಾನು ಪ್ರತಿಕ್ರಿಯೆ ನೀಡಿದ್ದೇನೆ ಎಂದಿದ್ದಾರೆ. ತಮ್ಮ ಚಿತ್ರವನ್ನು ದುರುಪಯೋಗ ಮಾಡಿದ ವಿಚಾರವನ್ನು ಅವರು ಗಂಭೀರವಾಗಿ ಪರಿಗಣಿಸಿದ್ದಾರೆ.

ನಾನು ಆ ನಿಗೂಢ ಬ್ರೆಜಿಲಿಯನ್ ಮಾಡೆಲ್‌ ಆದರೆ ಈಗ ಮಾಡೆಲ್ ಕೂಡ ಅಲ್ಲ. ಇದು ನನ್ನ ಚಿತ್ರ ಮಾತ್ರ, ನಾನು ಅಲ್ಲ ಎಂದು ಹೇಳಿದ್ದಾರೆ. ಭಾರತೀಯರಿಂದ ಬಂದ ಕಾಳಜಿ ಮತ್ತು ಬೆಂಬಲಕ್ಕೆ ಧನ್ಯವಾದ ಹೇಳಿದ ಲಾರಿಸ್ಸಾ, ನಾನು ಭಾರತೀಯಳಂತೆ ಕಾಣುತ್ತೇನೆ ಎಂದು ಕೆಲವರು ಹೇಳಿದ್ದಾರೆ, ಆದರೆ ನಾನು ಮೆಕ್ಸಿಕನ್‌ನಂತೆ ಕಾಣುತ್ತೇನೆ ಅನಿಸುತ್ತದೆ ಎಂದು ಹಾಸ್ಯಮಯಾವಾಗಿ ಹೇಳಿದ್ದಾರೆ.

ವರದಿ: ರಂಜಿತ ರೇವಣ್ಣ ನಾಟನಹಳ್ಳಿ

- Advertisement -

Latest Posts

Don't Miss