Friday, November 14, 2025

Latest Posts

ಇರುವೆಗಳಿಗೆ ಹೆದರಿ ಮಹಿಳೆ ಸೂಸೈಡ್

- Advertisement -

ತೆಲಂಗಾಣದಲ್ಲಿ ಮಹಿಳೆಯೊಬ್ರು ಇರುವೆಗಳಿಗೆ ಹೆದರಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಸಂಗಾರೆಡ್ಡಿ ಜಿಲ್ಲೆಯ 25 ವರ್ಷದ ಮಹಿಳೆಗೆ ಮೊದಲಿನಿಂದಲೂ ಇರುವೆ ಅಂದ್ರೆ ಭಯ ಇತ್ತಂತೆ. ಈ ಹಿಂದೆ ಮಂಚೇರಿಯ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿತ್ತು. ಆದರೆ ಇರುವೆಗಳಿಗೆ ಹೆದರುವ ರೋಗ ವಾಸಿಯಾಗಿರಲಿಲ್ಲ.

ಆ ಮಹಿಳೆಗೆ 2022ರಲ್ಲಿ ಮದುವೆಯಾಗಿದ್ದು, ಮೂವರು ಮಕ್ಕಳಿದ್ದಾರೆ. ಎಂದಿನಂತೆ ಪತಿ ಕೆಲಸಕ್ಕೆ ಹೋಗಿದ್ದಾರೆ. ಸಂಜೆ ಹಿಂದಿರುಗಿದಾಗ ಬಾಗಿಲು ಒಳಗಡೆಯಿಂದ ಲಾಕ್ ಆಗಿತ್ತು. ಅಕ್ಕಪಕ್ಕದ ಮನೆಯವರ ಸಹಾಯದಿಂದ ಬಾಗಿಲು ಒಡೆದು ನೋಡಿದಾಗ, ಪತ್ನಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ಗೊತ್ತಾಗಿದೆ.

ಆತ್ಮಹತ್ಯೆ ಮಾಡಿಕೊಂಡ ಸ್ಥಳದಲ್ಲಿ ಡೆತ್‌ನೋಟ್‌ ಕೂಡ ಸಿಕ್ಕಿದೆ. ಅದರಲ್ಲಿ ಪತಿಯ ಬಳಿ ಕ್ಷಮೆಯಾಚಿಸಿದ್ದಾಳೆ. ಕ್ಷಮಿಸಿ.. ನಾನು ಇರುವೆಗಳೊಂದಿಗೆ ಬದುಕಲು ಸಾಧ್ಯವಿಲ್ಲ. ಮಕ್ಕಳನ್ನು ಚೆನ್ನಾಗಿ ನೋಡಿಕೊಳ್ಳಿ. ಜಾಗರೂಕರಾಗಿರಿ ಎಂದು ಬರೆದಿದ್ದಾಳೆ. ತನ್ನ ಸೀರೆಯಿಂದಲೇ ನೇಣಿಗೆ ಶರಣಾಗಿದ್ದಾಳೆ.

ಪೊಲೀಸರ ಪ್ರಕಾರ ಆಕೆ ಮನೆಯನ್ನು ಶುಚಿಗೊಳಿಸುವಾಗ ಇರುವೆಗಳನ್ನು ನೋಡಿರಬಹುದು ಮತ್ತು ಭಯದಿಂದ ಈ ತಪ್ಪು ನಿರ್ಧಾರ ತೆಗೆದುಕೊಂಡಿರಬಹುದು ಎಂದು ಹೇಳಿದ್ದಾರೆ. ಸದ್ಯ ಅಮೀನ್‌ಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ.

- Advertisement -

Latest Posts

Don't Miss