ಏನ್‌ ಅಂಡರ್​ಸ್ಟ್ಯಾಂಡಿಂಗ್ ಗುರೂ.. ಕರ್ಣನಾದ ಗಿಲ್ಲಿಗೆ ಕ್ಲೀನ್ ಬೋಲ್ಡ್!

ಬಿಗ್ ಬಾಸ್ ಮನೆಯೊಳಗೆ ದಿನದಿಂದ ದಿನಕ್ಕೆ ಹೊಸ ಹೊಸ ಘಟನೆಗಳು ನಡೆಯುತ್ತಿವೆ. ಈ ಬಾರಿ ಪ್ರೇಕ್ಷಕರ ಮನ ಸೆಳೆದ ಘಟನೆ ಎಂದರೆ ಗಿಲ್ಲಿ ಮಾಡಿದ ತ್ಯಾಗ ಮತ್ತು ಕಾವ್ಯಾಳ ಕೃತಜ್ಞತೆ. ಕಾವ್ಯಾ ಮತ್ತು ಗಿಲ್ಲಿಯ ನಡುವಿನ ಅರ್ಥಪೂರ್ಣ ಬಾಂಧವ್ಯ ಈಗ ಎಲ್ಲರ ಚರ್ಚೆಯ ಕೇಂದ್ರವಾಗಿದೆ. ಸೋಷಿಯಲ್ ಮೀಡಿಯಾದಲ್ಲಿ ಗಿಲ್ಲಿ–ಕಾವ್ಯಾ ಜೋಡಿ ಈಗಾಗಲೇ ಅತ್ಯಂತ ಜನಪ್ರಿಯ. ಇವರಿಬ್ಬರ ನಡುವಿನ ಅಂಡರ್‌ಸ್ಟ್ಯಾಂಡಿಂಗ್ ನೋಡಿದರೆ ಇದು ನಿಜವಾದ ಬಾಂಧವ್ಯ ಎನ್ನುವ ಅಭಿಮಾನಿಗಳ ಅಭಿಪ್ರಾಯಗಳು ಹರಿದಾಡುತ್ತಿವೆ.

ಈ ವಾರ ಬಿಗ್ ಬಾಸ್ ಮನೆಯಲ್ಲಿ ಸದಸ್ಯರಿಗೆ ಮನೆಯಿಂದ ಬಂದ ಪತ್ರಗಳ ಟಾಸ್ಕ್ ನೀಡಲಾಗಿತ್ತು. ಗಿಲ್ಲಿ ಮತ್ತು ಕಾವ್ಯಾ ಇಬ್ಬರಿಗೂ ಪ್ರತ್ಯೇಕವಾಗಿ ಕರೆ ನೀಡಲಾಗಿದ್ದು, ಅವರಿಬ್ಬರ ಮುಂದೆಯೂ ಪರಸ್ಪರರ ಲೆಟರ್ ಇಡಲಾಗಿತ್ತು. ಆದರೆ ನಿಯಮ ಒಂದೇ — ಒಬ್ಬರು ಮಾತ್ರ ಲೆಟರ್ ತೆಗೆದುಕೊಂಡರೆ ಅದನ್ನು ಉಳಿಸಿಕೊಳ್ಳಬಹುದು. ಇಬ್ಬರೂ ತರಲು ಯತ್ನಿಸಿದರೆ ಇಬ್ಬರ ಲೆಟರ್ ಕಳೆದು ಹೋಗುತ್ತದೆ ಹಾಗೂ ನಾಮಿನೇಷನ್‌ನಲ್ಲಿರಬೇಕಾಗುತ್ತದೆ.

ಈ ವೇಳೆ ಗಿಲ್ಲಿ ಕಾವ್ಯಾ ಲೆಟರ್ ತರಲು ತೀರ್ಮಾನಿಸಿ, ತಮ್ಮದೇ ಲೆಟರ್ ತ್ಯಜಿಸಿದರು. ತಮ್ಮ ಕುಟುಂಬದ ಪತ್ರ ಕಳೆದುಕೊಂಡರೂ ಅವರ ಮುಖದಲ್ಲಿ ಯಾವುದೇ ಬೇಸರ ಇರಲಿಲ್ಲ. ಈ ತ್ಯಾಗ ಕೇವಲ ಆಟದ ನಿರ್ಧಾರವಲ್ಲ, ಅದು ಕಾವ್ಯಾಗೆ ಮಾಡಿದ ನಿಜವಾದ ಕಾಳಜಿಯ ಪ್ರದರ್ಶನವಾಗಿತ್ತು. ಗಿಲ್ಲಿಯ ಈ ತ್ಯಾಗ ನೋಡಿ ಕಾವ್ಯಾ ಭಾವುಕರಾದರು. ಅವರು ಗಿಲ್ಲಿಗೆ ಪ್ರೀತಿಯಿಂದ ಅಪ್ಪುಗೆ ನೀಡಿದ ಕ್ಷಣ ಪ್ರೇಕ್ಷಕರ ಹೃದಯ ಗೆದ್ದಿತು. ಮನೆಯೊಳಗೆ ಇದ್ದವರಿಗೂ ಅವರಿಬ್ಬರ ಬಾಂಧವ್ಯ ಅಚ್ಚರಿ ಮೂಡಿಸಿತು.

ಈ ವಾರದ ಕ್ಯಾಪ್ಟನ್ ಆಯ್ಕೆ ಪ್ರಕ್ರಿಯೆಯಲ್ಲಿ ಕಾವ್ಯಾಗೆ ಹೆಚ್ಚು ಮತಗಳು ಬಿದ್ದರೆ ಅವರು ವಾರದ ಕ್ಯಾಪ್ಟನ್ ಆಗುವ ಸಾಧ್ಯತೆ ಹೆಚ್ಚಿದೆ. ಇದರೊಂದಿಗೆ ಗಿಲ್ಲಿಯ ತ್ಯಾಗದ ಕಥೆ ಈಗ ಪ್ರೇಕ್ಷಕರ ಮನಗಳಲ್ಲಿ ಚರ್ಚೆಯ ಹಾಟ್ ಟಾಪಿಕ್ ಆಗಿದೆ. ಒಟ್ಟಿನಲ್ಲಿ, ಬಿಗ್ ಬಾಸ್ ಸೀಸನ್ 12 ಮನೆಯಲ್ಲಿ ಪ್ರೀತಿ, ತ್ಯಾಗ ಮತ್ತು ಬಾಂಧವ್ಯದ ಸೀನ್ ಎಲ್ಲವನ್ನೂ ಒಂದೇ ವೇದಿಕೆಯಲ್ಲಿ ತೋರಿಸುತ್ತಿರುವ ಗಿಲ್ಲಿ–ಕಾವ್ಯಾ ಜೋಡಿ, ಈ ಸೀಸನ್‌ನ ನಿಜವಾದ ಎಮೋಶನಲ್ ಹೀರೋ ಮತ್ತು ಹೀರೋಯಿನ್ ಆಗಿ ಹೊರಹೊಮ್ಮುತ್ತಿದ್ದಾರೆ.

ವರದಿ: ರಂಜಿತ ರೇವಣ್ಣ ನಾಟನಹಳ್ಳಿ

About The Author