Monday, November 17, 2025

Latest Posts

ಚಲುವರಾಯಸ್ವಾಮಿ CM ಆಗ್ಬೇಕು : ಅಪ್ಪಟ ಅಭಿಮಾನಿಯ ಪಾದಯಾತ್ರೆ

- Advertisement -

ಮಂಡ್ಯ: ರಾಜ್ಯ ರಾಜಕೀಯದಲ್ಲಿ ಪವರ್ ಶೇರಿಂಗ್ ಕಿತ್ತಾಟ ಜೋರಾಗುತ್ತಿದ್ದಂತೆಯೇ, ಕೃಷಿ ಸಚಿವ ಚಲುವರಾಯಸ್ವಾಮಿಗೆ ಬೆಂಬಲವಾಗಿ ಅಭಿಮಾನಿಯೊಬ್ಬರು ವಿಶೇಷ ಹರಿಕೆ ಮಾಡಿದ್ದಾರೆ. ನಾಗಮಂಗಲ ತಾಲೂಕಿನ ದೊಡ್ಡ ಚಿಕ್ಕನಹಳ್ಳಿಯ ಆನಂದ ಎಂಬ ಯುವಕ, ಚಲುವರಾಯಸ್ವಾಮಿಯ ಅಪ್ಪಟ ಅಭಿಮಾನಿ. ನನ್ನ ನಾಯಕ ಸಿಎಂ ಆಗಬೇಕು ಎಂಬ ಹರಿಕೆ ಹೊತ್ತು, ಕುಟುಂಬದೊಂದಿಗೆ ತಿರುಪತಿಗೆ ಪಾದಯಾತ್ರೆ ಆರಂಭಿಸಿದ್ದಾರೆ.

ಕೈಯಲ್ಲಿ ಚಲುವರಾಯಸ್ವಾಮಿ ಅವರ ಫೋಟೋ ಹಿಡಿದು, ದೇವರ ಮುಂದೆ ಹರಕೆ ತೀರಿಸಲು ಹೊರಟಿದ್ದಾರೆ. ಚಲುವರಾಯಸ್ವಾಮಿ ಅವರು ಸರಳ, ಪ್ರಾಮಾಣಿಕ ಹಾಗೂ ಜನಪ್ರಿಯ ನಾಯಕರು. ಒಮ್ಮೆ ಸಿಎಂ ಆಗಿ ನೋಡಬೇಕು ಅನ್ನೋದು ನನ್ನ ಕನಸು. ದೇವರು ನನ್ನ ಬಯಕೆ ಈಡೇರಿಸುವರು ಎಂದು ಆನಂದ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಈ ವಿಶಿಷ್ಟ ಪಾದಯಾತ್ರೆ ಇದೀಗ ಸ್ಥಳೀಯರ ಕುತೂಹಲಕ್ಕೆ ಕಾರಣವಾಗಿದೆ.

ವರದಿ: ರಂಜಿತ ರೇವಣ್ಣ ನಾಟನಹಳ್ಳಿ

- Advertisement -

Latest Posts

Don't Miss