ಪವರ್ ಶೇರಿಂಗ್ ವಿಚಾರ ರಾಜ್ಯ ಕಾಂಗ್ರೆಸ್ ಪಾಳಯದಲ್ಲಷ್ಟೇ ಅಲ್ಲ. ಇಡೀ ರಾಜ್ಯದಲ್ಲಿ ಕುತೂಹಲಕ್ಕೆ ಕಾರಣವಾಗಿದೆ. ಸಿದ್ದರಾಮಯ್ಯ ನಾನೇ ಸಿಎಂ ಅಂತಾರೆ. ಮತ್ತೊಮ್ಮೆ ಹೈಕಮಾಂಡ್ ತೀರ್ಮಾನ ಅಂತಾರೆ. ಆದ್ರೆ, ಡಿಸಿಎಂ ಡಿ.ಕೆ. ಶಿವಕುಮಾರ್ ಮೌನದ ಮೊರೆ ಹೋಗಿದ್ದಾರೆ. ದೇವರು, ಭಕ್ತ, ಪ್ರಯತ್ನ ವಿಫಲವಾಗಲ್ಲ ಎನ್ನುತ್ತಾ ಒಗಟಾಗಿ ಮಾತುಗಳನ್ನಾಡ್ತಿದ್ದಾರೆ. ಈ ಮಧ್ಯೆ ಮುಂದಿನ ಸಿಎಂ ಯಾರು? ಯಾವಾಗ? ಅನ್ನೋ ಬಗ್ಗೆ ದೈವವಾಣಿ ನುಡಿಯಲಾಗಿದೆ.
ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿ ತಾಲೂಕಿನ ಹಂದನಕೆರೆಯ ಗುರು ಗಿರಿ ಸಿದ್ದೇಶ್ವರ ಸ್ವಾಮಿ ಕ್ಷೇತ್ರದಲ್ಲಿ, ಮುಂದಿನ ಮುಖ್ಯಮಂತ್ರಿ ಬಗ್ಗೆ ಭವಿಷ್ಯ ನುಡಿಯಲಾಗಿದೆ. ಪಂಜುರ್ಲಿ ದೈವದ ಎದುರು ಅಭಿಮಾನಿಯೊಬ್ರು, ಡಿಕೆಶಿ ಸಿಎಂ ಯಾವಾಗ ಆಗ್ತಾರೆ ಎಂದು ಪ್ರಶ್ನಿಸಿದ್ದಾರೆ. ಅವರು ಬೇಗ ಶೀರ್ಘವೇ ಆಗುತ್ತಾರೆಂದು ಭವಿಷ್ಯ ನುಡಿದಿದೆ.
ಆ ವಿಚಾರವೆಲ್ಲಾ ಆಗಲೇ ಆಯ್ತಲ್ಲ. ಅವರು ಮಾಡಿದ ಪ್ರಯತ್ನ ಇಷ್ಟು ವರ್ಷ ಕುಂಠಿತವಾಗಿದ್ದರೂ ಸಹ, ಇನ್ಮುಂದೆ ಅವರು ಮಾಡಿ ಪ್ರಯತ್ನಕ್ಕೆ ಫಲಿತಾಂಶವನ್ನು ನಾನು ಕೊಡುತ್ತೇನೆ. ನಾನು ಕೆಲವೊಂದು ಸನ್ನಿಧಾನಕ್ಕಾಗಿ ಹೇಳಿದ್ದೇನೆ. ಅವರು ಸಿಎಂ ಸ್ಥಾನದಲ್ಲಿ ಕುಳಿತಾಗ, ನಾನು ಹೇಳಿರುವುದನ್ನು ಚಾಚು ತಪ್ಪದೇ ಮಾಡಲು ಹೇಳಿ. ಒಂದು ಕಾಲದವರೆಗೆ ಪ್ರಯತ್ನಕ್ಕೆ ಫಲ ಒದಗುತ್ತದೆ.
ನನ್ನ ಮೇಲೆ ನಂಬಿಕೆ ಇಟ್ಟು ಆ ಪ್ರಸಾದವನ್ನು ಇಟ್ಟುಕೊಳ್ಳಲಿ. ಆದಷ್ಟು ಶೀಘ್ರವೇ ಅವರನ್ನು ಉನ್ನತ ಸ್ಥಾನಕ್ಕೆ ಕೂರಿಸುವಂತಹ ಜವಾಬ್ದಾರಿ ನನ್ನದು ಎಂದು ಪಂಜುರ್ಲಿ ದೈವ ಹೇಳಿದೆ.

