ಸವಿತಾ ಸಮಾಜದ ವಿರುದ್ಧ ಅವಹೇಳನಕಾರಿ ಪದಬಳಕೆ ಮಾಡಿರುವ ಆರೋಪದಲ್ಲಿ ಬಿಜೆಪಿ ಎಂಎಲ್‌ಸಿ ಸಿ.ಟಿ. ರವಿ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಕಾಂಗ್ರೆಸ್ ಮುಖಂಡ ಮುರುಗೇಶ್ ಮೊದಲಿಯಾರ್ ದೂರಿನನ್ವಯ, ಬೆಂಗಳೂರಿನ ಮಡಿವಾಳ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಅಕ್ಟೋಬರ್ 17ರಂದು ಚಿಕ್ಕಮಗಳೂರಿನ ಮೆಡಿಕಲ್ ಕಾಲೇಜಿಗೆ ಎಂಎಲ್‌ಸಿ ಸಿ.ಟಿ. ರವಿ ಭೇಟಿ ಕೊಟ್ಟಿದ್ರು. ಆ ವೇಳೆ ಡೀನ್ ಇರದಿದ್ದಕ್ಕೆ ಸಿಟ್ಟಾಗಿದ್ದ ಸಿ.ಟಿ. ರವಿ, ಫೋನ್ ಮಾಡಿ ತರಾಟೆಗೆ ತೆಗೆದುಕೊಂಡಿದ್ರು. ನಿನಗೆ ಮುಂಚೇನೆ ಬರ್ತೀನಿ ಅಂತಾ, ಹೇಳಿದ್ನೋ ಇಲ್ವೋ? ನಾಟಕ ಆಡ್ತೀರಾ?
ನಾನ್ ಯಾರು. ನನಗೇನು ಕಥೆ ಹೇಳ್ತೀಯಾ? ನಿಮ್ಮ ಇನ್‌ಸ್ಟಿಟ್ಯೂಟ್‌ಗೆ ಬರ್ತೀನಿ ಅಂತಾ ಹೇಳಿದ್ರೂ ನೀವು ಏಕೆ ಬಂದಿಲ್ಲ ಎಂದು ಗರಂ ಆಗಿದ್ರು. ಆ ವೇಳೆ ಅವಹೇಳನಕಾರಿ ಪದ ಬಳಸಿದ್ದಾರೆಂದು ಆರೋಪಿಸಲಾಗಿದೆ.
ಈ ಹಿಂದೆ ಮದ್ದೂರು ಗಣೇಶ ಮೆರವಣಿಗೆಯಲ್ಲಿ ಪ್ರಚೋದನಾಕಾರಿ ಭಾಷಣ ಮಾಡಿದ್ದಾರೆಂದು, ಸಿ.ಟಿ. ರವಿ ವಿರುದ್ಧ ಮದ್ದೂರು ಪೊಲೀಸರು ಸುಮೋಟೋ ಪ್ರಕರಣ ದಾಖಲಿಸಿಕೊಂಡಿದ್ರು. ಇನ್ಸ್‌ಪೆಕ್ಟರ್ ಮಂಜುನಾಥ್ ದೂರಿನ ಮೇರೆಗೆ ಎಫ್‌ಐಆರ್ ದಾಖಲಾಗಿದೆ.

