ಸ್ನೇಹಿತೆಯ ಅಣ್ಣನನ್ನೇ ಪ್ರೀತಿಸುತ್ತಿದ್ದ ಯುವತಿ ಗರ್ಭಿಣಿಯಾಗಿದ್ಲು. ಮದುವೆಯಾಗುವಂತೆ ಕೇಳಿದ್ರೆ ಪ್ರೇಮಿ ನಿರಾಕರಿಸಿದ್ದಾನೆ. ಇದರಿಂದ ಮರ್ಯಾದೆಗೆ ಹಂಜಿದ ಯುವತಿ ಸಾವಿನ ದಾರಿ ಹಿಡಿದಿದ್ದಾಳೆ.
ಪ್ರೇಮಿಯ ಬಣ್ಣದ ಬಣ್ಣ ಮಾತಿಗೆ ಮರಳಾಗಿ ಆತನ ಜೊತೆ ಯುವತಿ ಬೆರೆತುಹೋಗಿದ್ಲು. ಇದಕ್ಕೆ ಸಾಕ್ಷಿಯಾಗಿ ಒಡಲಲ್ಲಿ ಕುಡಿಯೊಂದು ಜೀವ ತಳೆದಿತ್ತು. ಈ ವಿಷಯವನ್ನ ಪ್ರೇಮಿಯ ಜೊತೆ ಹೇಳಿಕೊಂಡು, ಮದುವೆಯಾಗುವಂತೆ ಯುವತಿ ಕೇಳಿದ್ಲು. ಜೊತೆಗಿರುವಷ್ಟು ದಿನ ಮಜಾ ಮಾಡಿದ್ದ ಯುವಕ, ಈಗ ಮದುವೆಗೆ ನಿರಾಕರಿಸಿದ್ದ. ಈತನ ಹೆಸರೇ ಶರತ್ ಕುಮಾರ್. ರಾಣೆಬೆನ್ನೂರು ತಾಲೂಕಿನ ಕುದರಿಹಾಳ ಗ್ರಾಮದ ನಿವಾಸಿ.
ಶರತ್ ಕುಮಾರ್, ಬಿಜೆಪಿಗ, ಮಾಜಿ ಶಾಸಕ ಅರುಣ್ ಪೂಜಾರಿ ಆಪ್ತವಲಯದಲ್ಲಿ ಗುರುತಿಸಿಕೊಂಡಿದ್ದ. ಆಕ್ರಮ ಮರಳು ಸಾಗಾಟ ದಂಧೆಯನ್ನೂ ಮಾಡ್ತಿದ್ನಂತೆ. ಚಿಕ್ಕವಯಸ್ಸಿಗೆ ಸ್ವಲ್ಪ ದುಡ್ಡುಕಾಸು ಮಾಡಿಕೊಂಡಿದ್ದ. ಆದ್ರೆ ಬುದ್ಧಿ ಮಾತ್ರ ನೆಟ್ಟಗಿರಲಿಲ್ಲ. ಬ್ಯಾಡಗಿ ತಾಲೂಕಿನ ಶಂಕರಿಪುರ ಗ್ರಾಮದ ಸಿಂಧು ಜೊತೆ ಸಂಪರ್ಕ ಬೆಳೆಸಿದ್ದ.
ಓದುತ್ತಿದ್ದ ಸಿಂಧು ಹಲಗೇರಿಯ ಮಾವನ ಮನೆಯಲ್ಲಿ ಇರ್ತಿದ್ಲು. ಕ್ಲಾಸ್ ಮೇಟ್ ಕ್ಯಾವ್ಯಾ ಮನೆಗೆ ಆಗಾಗ ಹೋಗುತ್ತಿದ್ಲು. ಈ ಸಮಯದಲ್ಲೇ ಶರತ್ &ಸಿಂಧು ಮಧ್ಯೆ ಪ್ರೀತಿ ಅರಳಿತ್ತು. ಬಳಿಕ ಸಿಂಧು 3 ತಿಂಗಳ ಗರ್ಭಿಣಿಯಾಗಿದ್ದಾಳೆ. ಈ ವಿಚಾರ ತಿಳಿದ ಬಳಿಕ ಶರತ್ ಕುಮಾರ್ ಮದುವೆಗೆ ನಿರಾಕರಿಸಿದ್ದಾನೆ. ಇದರಿಂದ ಮನನೊಂದು ಸಿಂಧು ಮನೆಯಲ್ಲಿ ಯಾರೂ ಇಲ್ಲದ ವೇಳೆ, ಫ್ಯಾನ್‌ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಒಳಗಾಗಿದ್ದಾಳೆ.
ಸಿಂಧು ಗರ್ಭಿಣಿಯಾದ ವಿಚಾರ ತಿಳಿದ ಬಳಿಕ ಪೋಷಕರು, ರಾಣೆಬೆನ್ನೂರು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಅತ್ಯಾಚಾರದ ದೂರು ನೀಡಲು ಮುಂದಾಗಿದ್ರು. ಪೊಲೀಸರು ರಾಜಿ ಪಂಚಾಯಿತಿ ಮೂಲಕ ಬಗೆಹರಿಸಿಕೊಳ್ಳುವಂತೆ ಸೂಚಿಸಿದ್ದಾರೆ. ಆದರೆ ಒಪ್ಪದ ಶರತ್ ಕುಮಾರ್ ಮದುವೆಗೆ ನಿರಾಕರಿಸಿದ್ದಾನೆ. ಆದಾದ ಬಳಿಕವೂ ಸಿಂಧು-ಶರತ್ ಮಧ್ಯೆ ಮೆಸೇಜ್ ಮುಂದುವರೆದಿವೆ. ಆದರೂ ಶರತ್ ಮನಸು ಕರಗಲೇ ಇಲ್ಲ. ಇದರಿಂದ ಮನನೊಂದಿದ್ದ ಸಿಂಧು ಆತ್ಮಹತ್ಯೆಗೆ ಶರಣಾಗಿದ್ದಾಳೆ.
ಸದ್ಯ, 10 ಜನರ ವಿರುದ್ಧ ಸಿಂಧು ಹೆತ್ತವರು ದೂರು ನೀಡಿದ್ದಾರೆ. FIR ದಾಖಲಿಸಿರೋ ಪೊಲೀಸರು ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ. ಒಟ್ನಲ್ಲಿ ಯುವಕ-ಯುವತಿಯ ದುಡುಕು ನಿರ್ಧಾರಕ್ಕೆ, ಹೊಟ್ಟೆಯಲ್ಲಿದ್ದ ಕಂದಮ್ಮ ಬಲಿಯಾಗಿದೆ.

