Monday, November 17, 2025

Latest Posts

ದಳಪತಿ ವಿಜಯ್ v/s‌ ಉದಯನಿಧಿ ಸ್ಟಾಲಿನ್

- Advertisement -

ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಡಿಎಂಕೆ ಮತ್ತು ಟಿವಿಕೆ ಪಕ್ಷದ ಮಧ್ಯೆ ಮಾತ್ರ ಸಮರ ಇರಲಿದೆ. ಹೀಗೆಂದು ಕೆಲವು ದಿನದ ಹಿಂದೆ ನಟ ವಿಜಯ್‌ ಹೇಳಿದ್ರು. ದಳಪತಿ ವಿಜಯ್‌ ಹೇಳಿಕೆ ಬಳಿಕ ಡಿಎಂಕೆ ನಾಯಕರು ಕೆರಳಿ ಕೆಂಡವಾಗಿದ್ದಾರೆ. ರಾಜ್ಯದಲ್ಲಿ ನಮಗೆ ಸಾಟಿ ಯಾರು ಇಲ್ಲ ಎಂಬಂತೆ ಹೇಳಿಕೆಗಳನ್ನು ಕೊಡುತ್ತಿದ್ದಾರೆ. ಜಗತ್ತಿಗೆ ಸೂರ್ಯ ಚಂದ್ರ ಒಬ್ಬನೇ. ಹಾಗೆಯೇ ತಮಿಳುನಾಡಿಗೆ ಡಿಎಂಕೆ ಒಂದೇ ಎಂದು ಸ್ಟಾಲಿನ್‌ ಹೇಳಿದ್ದರು. ಈಗ ಅದೇ ಸಾಲಿನಲ್ಲಿ ಉದಯನಿಧಿ ಸ್ಟಾಲಿನ್‌ ಅವರು ಇದ್ದಾರೆ.

ಡಿಎಂಕೆ ಪಕ್ಷವನ್ನು ಕೆಡವಲು ಅನೇಕ ಹೊಸ ಪಕ್ಷಗಳು ಬರುತ್ತಿವೆ. ಡಿಎಂಕೆ ಪಕ್ಷಕ್ಕೆ ಸೈದ್ಧಾಂತಿಕತೆಯೇ ಅಡಿಪಾಯ. ಆ ಅಡಿಪಾಯದ ಮೇಲೆ ಕಟ್ಟುವ ಯಾವುದೇ ಕಟ್ಟಡ ಬಲಿಷ್ಠವಾಗಿರುತ್ತದೆ. ಆದರೆ ಇಂದು, ಅನೇಕರು ಅಡಿಪಾಯವಿಲ್ಲದೆ ರಾಜಕೀಯಕ್ಕೆ ಕಾಲಿಡುತ್ತಿದ್ದಾರೆ. ತಮಿಳಗ ವೆಟ್ರಿ ಕಳಗಂ ಪಕ್ಷ ಕಾರ್ಡ್‌ಬೋರ್ಡ್‌ ಇದ್ದಂತೆ ಬುನಾದಿಯೇ ಇಲ್ಲ ಎಂದು ಲೇವಡಿ ಮಾಡಿದ್ದಾರೆ. ಟಿವಿಕೆ ಪಕ್ಷವನ್ನು ಪ್ರದರ್ಶನಗಳಲ್ಲಿ ಇರಿಸಲಾಗುವ ತಾಜ್ ಮಹಲ್ ಮತ್ತು ಐಫೆಲ್ ಟವರ್‌ನ ಮೇಲಿನ ಕಾರ್ಡ್‌ಬೋರ್ಡ್‌ ಇದ್ದಂತೆ. ಒಂದು ಸಣ್ಣ ಗಾಳಿ ಬೀಸಿದರೆ ಸಾಕು, ಅಂತಹ ಪಕ್ಷಗಳು ಬಿದ್ದು ಹೋಗುತ್ತವೆ. ಅವು ಕೇವಲ ಪ್ರಚಾರದಿಂದಲೇ ನಿಂತಿವೆ.

dmk ಇಂದಿಗೂ ಸಿದ್ಧಾಂತ ಪಾಲನೆ ಮಾಡುತ್ತದೆ. ಆದರೆ aiadmk ಅವರನ್ನು ಭಯವೇ ಮುನ್ನಡೆಸುತ್ತಿದೆ. ಇಪಿಎಸ್ ಅವರು ತಮ್ಮ ಪಕ್ಷದ ಕಾರ್ಯಕರ್ತರನ್ನು ಮೈತ್ರಿ ವಿಷಯದಲ್ಲಿ ದಾರಿತಪ್ಪಿಸುತ್ತಿದ್ದಾರೆ . ದೊಡ್ಡ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಳ್ಳುವುದಾಗಿ ಭರವಸೆ ನೀಡಿದ್ದ ಇಪಿಎಸ್, ನಂತರ ಮತ್ತೊಂದು ಪಕ್ಷದ ಧ್ವಜವನ್ನು ಹಿಡಿದು ‘ಇದೇ ಆರಂಭ’ ಎಂದು ಹೇಳಿಕೊಂಡರು. ಪರೀಕ್ಷೆಗೆ ಸಿದ್ಧತೆ ಇಲ್ಲದ ವಿದ್ಯಾರ್ಥಿಯಂತೆ, ಕೊನೆ ಕ್ಷಣದ ಪ್ರಯತ್ನದಲ್ಲಿದ್ದರೂ ಏನೂ ತಿಳಿದಿಲ್ಲದ ಪರಿಸ್ಥಿತಿಯಲ್ಲಿ ಇಪಿಎಸ್ ಪಕ್ಷದ ನಾಯಕರಿದ್ದಾರೆ ಎಂದು ಉದಯನಿಧಿ ಸ್ಟಾಲಿನ್‌ ವ್ಯಂಗ್ಯವಾಡಿದರು.

- Advertisement -

Latest Posts

Don't Miss