ಪರಪ್ಪನ ಅಗ್ರಹಾರ ಜೈಲಿನಲ್ಲಿ ಉಗ್ರರಿಗೆ ರಾಜಾತಿಥ್ಯ ನೀಡಲಾಗಿದೆ ಎಂಬ ಆರೋಪದ ಹಿನ್ನೆಲೆ, ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ. ವಿಧಾನಸೌಧದಲ್ಲೇ ಭಯೋತ್ಪಾದಕರನ್ನು ಇಟ್ಟುಕೊಂಡಿದ್ದಾರೆ, ಹಾಗಿದ್ದಾಗ ಜೈಲಿನ ಬಗ್ಗೆ ಮಾತನಾಡಿ ಏನು ಪ್ರಯೋಜನ? ಎಂದು ಪ್ರಶ್ನಿಸಿದ್ದಾರೆ.
ಈ ಮೊದಲೇ ಜೈಲು ಅಧಿಕಾರಿಗಳ ನಡುವಿನ ಜವಾಬ್ದಾರಿ ವೈಫಲ್ಯ ಮತ್ತು ರಾಜಕಾರಣದ ವಿಷಯ ಚರ್ಚೆಗೆ ಕಾರಣವಾಗಿತ್ತು. ಇಂತಹ ಅಕ್ರಮಗಳು ಹೊಸದಲ್ಲ, ವ್ಯವಸ್ಥೆಯೇ ಕುಸಿದಿದೆ ಎಂದು ಆರೋಪಿಸಿದ್ದರು. ಗೃಹ ಸಚಿವ ಪರಮೇಶ್ವರ್ ತನಿಖೆ ಘೋಷಿಸಿರುವುದರ ಮೇಲೂ ಕುಮಾರಸ್ವಾಮಿ ಅಸಮಾಧಾನ ವ್ಯಕ್ತಪಡಿಸಿಸಿದ್ದಾರೆ.
ವಿಧಾನಸೌಧದಲ್ಲೇ ಭಯೋತ್ಪಾದಕರಿದ್ದಾರೆ ಎಂದ ಕುಮಾರಸ್ವಾಮಿ ಅವರಿಗೆ ಡಿಕೆಶಿ ತಿರುಗೇಟು ಕೊಟ್ಟಿದ್ದಾರೆ. ಕುಮಾರಸ್ವಾಮಿ ಹಿಂದೆ ಶಾಸಕರಾಗಿದ್ದರಲ್ವಾ? ಈ ಹಿಂದೆ ಅವ್ರು ವಿಧಾನಸೌಧಕ್ಕೆ ಬರ್ತಾಯಿದ್ರು. ಅವರ ಪಕ್ಷದ ಶಾಸಕರು ವಿಧಾನ ಸಭೆಯಲ್ಲಿ ಕೂರಲ್ವಾ? ಕುಮಾರಸ್ವಾಮಿಯವರು ಇದರ ಭಾಗ ಆಲ್ವಾ? ಅವರದ್ದೇ ಪಕ್ಷದ ಶಾಸಕರುಗಳು ವಿಧಾನ ಸೌಧದಲ್ಲಿಲ್ಲವಾ? ಹಾಗಾದ್ರೆ HDK ಅವ್ರನ್ನ ಏನಂತ ಕರಿಬೇಕು ಅಂತ ಡಿಕೆಶಿ ಪ್ರಶ್ನೆ ಎತ್ತಿದ್ದಾರೆ.
ವರದಿ : ಲಾವಣ್ಯ ಅನಿಗೋಳ

