ದೆಹಲಿಯಲ್ಲಿ ನಿನ್ನೆ ಸಂಭವಿಸಿದ ಸ್ಫೋಟ, ಇಡೀ ರಾಷ್ಟ್ರವನ್ನೇ ತಲ್ಲಣಗೊಳಿಸಿದೆ. ದೇಶದ ರಾಜಧಾನಿಯಾಗಿ ಕೋಟ್ಯಂತರ ಕುಟುಂಬಗಳಿಗೆ ಆಶ್ರಯ ತಾಣವಾಗಿರುವ, ರಾಷ್ಟ್ರ ರಾಜಕಾರಣದ ಕೇಂದ್ರ ಬಿಂದುವಾಗಿರುವ, ಕೇಂದ್ರ ಸರ್ಕಾರದ ಶಕ್ತಿಪೀಠವಾಗಿರುವ ದೆಹಲಿಯಲ್ಲಿ, ಈ ಹಿಂದೆಯೂ ಹಲವಾರು ಬಾರಿ ಸ್ಫೋಟಗಳು ಸಂಭವಿಸಿವೆ.
1997 ಜನವರಿ 9
ದೆಹಲಿ ಪೊಲೀಸ್ ಪ್ರಧಾನ ಕಚೇರಿಯ ಎದುರು ಬಾಂಬ್ ಸ್ಫೋಟಗೊಂಡಿದ್ದು, 50 ಜನರಿಗೆ ಗಾಯವಾಗಿತ್ತು.
1997 ಅಕ್ಟೋಬರ್ 1
ಸದರ್ ಬಜಾರ್ ಪ್ರದೇಶದಲ್ಲಿ ಮೆರವಣಿಗೆಯ ಬಳಿ ನಡೆದ ಎರಡು ಬಾಂಬ್ ಸ್ಫೋಟಗಳಲ್ಲಿ 30 ಜನರಿಗೆ ಗಾಯಗೊಂಡಿದ್ರು.
1997 ಅಕ್ಟೋಬರ್ 10
ಶಾಂತಿವನ್, ಕೌರಿಯಾ ಪುಲ್ ಮತ್ತು ಕಿಂಗ್ಸ್‌ವೇ ಕ್ಯಾಂಪ್ ಪ್ರದೇಶಗಳಲ್ಲಿ ನಡೆದ 3 ಬಾಂಬ್ ಸ್ಫೋಟಗಳಲ್ಲಿ ಒಬ್ಬರು ಸಾವನ್ನಪ್ಪಿದ್ರು. 16 ಜನರಿಗೆ ಗಾಯವಾಗಿತ್ತು.
1997 ಅಕ್ಟೋಬರ್ 18
ರಾಣಿ ಬಾಗ್ ಮಾರುಕಟ್ಟೆಯಲ್ಲಿ ನಡೆದ ಅವಳಿ ಬಾಂಬ್ ಸ್ಫೋಟಗಳಲ್ಲಿ ಒಬ್ಬರು ಸಾವನ್ನಪ್ಪಿದ್ರು. 23 ಜನರಿಗೆ ಗಾಯವಾಗಿತ್ತು.
1997 ಅಕ್ಟೋಬರ್ 26
ಕರೋಲ್ ಬಾಗ್ ಮಾರುಕಟ್ಟೆಯಲ್ಲಿ ನಡೆದ ಅವಳಿ ಬಾಂಬ್ ಸ್ಫೋಟಗಳಲ್ಲಿ ಒಬ್ಬರು ಸಾವನ್ನಪ್ಪಿದ್ರು. 34 ಜನರಿಗೆ ಗಾಯವಾಗಿತ್ತು.
1997 ನವೆಂಬರ್ 30
ಕೆಂಪು ಕೋಟೆ ಪ್ರದೇಶದಲ್ಲಿ ನಡೆದ ಅವಳಿ ಸ್ಫೋಟಗಳಲ್ಲಿ ಮೂವರು ಸಾವನ್ನಪ್ಪಿದ್ರು. 70 ಜನರಿಗೆ ಗಾಯವಾಗಿತ್ತು.
1997 ಡಿಸೆಂಬರ್ 30
ಪಂಜಾಬಿ ಬಾಗ್ ಬಳಿ ಬಸ್‌ನಲ್ಲಿ ನಡೆದ ಬಾಂಬ್ ಸ್ಫೋಟದಲ್ಲಿ ನಾಲ್ವರು ಪ್ರಯಾಣಿಕರು ಸಾವನ್ನಪ್ಪಿದ್ರು. ಸುಮಾರು 30 ಜನರಿಗೆ ಗಾಯವಾಗಿತ್ತು.
1998 ಜುಲೈ 26
ಅಂತಾರಾಜ್ಯ ಬಸ್ ಟರ್ಮಿನಲ್‌ನ ಕಾಶ್ಮೀರಿ ಗೇಟ್‌ನಲ್ಲಿ ನಿಲ್ಲಿಸಲಾಗಿದ್ದ ಬಸ್‌ನಲ್ಲಿ ಸಂಭವಿಸಿದ ತೀವ್ರ ಸ್ಫೋಟದಲ್ಲಿ ಇಬ್ಬರು ಸಾವನ್ನಪ್ಪಿದ್ರೆ, ಮೂವರು ಗಾಯಗೊಂಡಿದ್ದರು.
ಜೂನ್ 18, 2000
ದೆಹಲಿಯ ಕೆಂಪು ಕೋಟೆ ಬಳಿ ನಡೆದ ಎರಡು ಪ್ರಬಲ ಬಾಂಬ್ ಸ್ಫೋಟಗಳಲ್ಲಿ 8 ವರ್ಷದ ಬಾಲಕಿ ಸೇರಿ ಇಬ್ಬರು ಸಾವನ್ನಪ್ಪಿದರು. ಸುಮಾರು 12 ಜನರು ಗಾಯಗೊಂಡಿದ್ದರು.
2005 ಮೇ 22
ದೆಹಲಿಯ 2 ಸಿನಿಮಾ ಮಂದಿರಗಳಲ್ಲಿ ನಡೆದ ಸರಣಿ ಸ್ಫೋಟಗಳಲ್ಲಿ ಒಬ್ಬ ವ್ಯಕ್ತಿ ಸಾವನ್ನಪ್ಪಿದ್ದರು ಮತ್ತು 60 ಜನರು ಗಾಯಗೊಂಡಿದ್ದರು.
2005 ಅಕ್ಟೋಬರ್ 29
ಸರೋಜಿನಿ ನಗರ ಮತ್ತು ಪಹರ್‌ಗಂಜ್ ಮಾರುಕಟ್ಟೆಗಳನ್ನು ಬೆಚ್ಚಿಬೀಳಿಸಿದ 3 ಸ್ಫೋಟಗಳಲ್ಲಿ, 59ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದರು ಮತ್ತು ಕೆಲವು ವಿದೇಶಿಯರು ಸೇರಿದಂತೆ 100ಕ್ಕೂ ಹೆಚ್ಚು ಜನರು ಗಾಯಗೊಂಡಿದ್ರು ಮತ್ತು ದೆಹಲಿಯ ಗೋವಿಂದಪುರಿ ಪ್ರದೇಶದಲ್ಲಿ ಬಸ್‌ನಲ್ಲಿ ಒಂದು ಸ್ಫೋಟ ಸಂಭವಿಸಿತ್ತು.
2006 ಏಪ್ರಿಲ್ 14
ಹಳೆಯ ದೆಹಲಿಯ ಗೋಡೆಯಿಂದ ಆವೃತವಾದ ನಗರದ ಜಾಮಾ ಮಸೀದಿಯ ಅಂಗಳದಲ್ಲಿ 2 ಸ್ಫೋಟಗಳ ನಂತರ ಕನಿಷ್ಠ 14 ಜನರು ಗಾಯಗೊಂಡಿದ್ದರು.
2008 ಸೆಪ್ಟೆಂಬರ್ 13
ದಕ್ಷಿಣ ದೆಹಲಿಯ ಕನಾಟ್ ಪ್ಲೇಸ್, ಕರೋಲ್ ಬಾಗ್‌ನ ಗಫರ್ ಮಾರುಕಟ್ಟೆ ಮತ್ತು ಎಂ-ಬ್ಲಾಕ್ ಮಾರುಕಟ್ಟೆಯಲ್ಲಿ 45 ನಿಮಿಷಗಳಲ್ಲಿ ಸಂಭವಿಸಿದ 5 ಸರಣಿ ಸ್ಫೋಟಗಳಲ್ಲಿ, ಕನಿಷ್ಠ 25 ಜನರು ಸಾವನ್ನಪ್ಪಿದ್ದರು ಮತ್ತು 100ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು.
2008 ಸೆಪ್ಟೆಂಬರ್ 27
ಕುತುಬ್ ಮಿನಾರ್ ಬಳಿಯ ಮೆಹ್ರೌಲಿ ಹೂವಿನ ಮಾರುಕಟ್ಟೆಯಲ್ಲಿ ಕಡಿಮೆ ತೀವ್ರತೆಯ ಸ್ಫೋಟದಲ್ಲಿ, ಮೂವರು ಸಾವನ್ನಪ್ಪಿದ್ದರು ಮತ್ತು 21 ಜನರು ಗಾಯಗೊಂಡಿದ್ದರು.
2011 ಮೇ 25
ದೆಹಲಿ ಹೈಕೋರ್ಟ್‌ನ ಹೊರಗೆ ಕಾರು ನಿಲ್ದಾಣದಲ್ಲಿ ಸಣ್ಣ ಸ್ಫೋಟಗೊಂಡಿದ್ದು, ಯಾವುದೇ ಸಾವುನೋವು ಸಂಭವಿಸಿರಲಿಲ್ಲ.
2025 ನವೆಂಬರ್ 10
ದೆಹಲಿಯ ಕೆಂಪು ಕೋಟೆಯ ಮೆಟ್ರೋ ನಿಲ್ದಾಣದ ಗೇಟ್ 1ರ ಬಳಿ ಸ್ಫೋಟ ಸಂಭವಿಸಿ, 9 ಮಂದಿ ದುರ್ಮರಣಕ್ಕೀಡಾಗಿದ್ದಾರೆ.

