Thursday, November 13, 2025

Latest Posts

ಪಾಕ್‌ ಮೂಲದ ಭಯೋತ್ಪಾದಕ ಗುಂಪು ಜೈಶ್‌ನಲ್ಲಿ ಹೆಣ್ಣು ಮಕ್ಕಳ ಘಟಕ

- Advertisement -

ದೆಹಲಿ ಸಮೀಪದ ಫರೀದಾಬಾದ್‌ನಲ್ಲಿ ನಡೆದ ಬೃಹತ್ ಸ್ಫೋಟಕಗಳ ಸಾಗಣೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಲಕ್ನೋ ಮೂಲದ ವೈದ್ಯೆಯನ್ನು ಬಂಧಿಸಲಾಗಿತ್ತು. ಭಾರತದಲ್ಲಿ ಪಾಕಿಸ್ತಾನ ಮೂಲದ ಭಯೋತ್ಪಾದಕ ಗುಂಪು ಜೈಶ್-ಎ-ಮೊಹಮ್ಮದ್‌ನ ಮಹಿಳಾ ವಿಭಾಗವನ್ನು, ಸ್ಥಾಪಿಸುವ ಕೆಲಸವನ್ನು ವಹಿಸಿಕೊಂಡಿದ್ದಳು ಎಂದು ದೆಹಲಿ ಪೊಲೀಸ್ ಮೂಲಗಳು ತಿಳಿಸಿವೆ.

ಪಾಕಿಸ್ತಾನದಲ್ಲಿರುವ ಜೆಇಎಂ ಸಂಸ್ಥಾಪಕ ಮಸೂದ್ ಅಜರ್ ಅವರ ಸಹೋದರಿ ಸಾದಿಯಾ ಅಜರ್ ನೇತೃತ್ವದ, ಜೆಎಂನ ಮಹಿಳಾ ವಿಭಾಗ ಜಮಾತ್ ಉಲ್-ಮೊಮಿನಾತ್‌ನ ಭಾರತ ಶಾಖೆಯ ಜವಾಬ್ದಾರಿಯನ್ನ, ಡಾ.ಶಾಹೀನ್ ಶಾಹಿದ್‌ಗೆ ವಹಿಸಲಾಗಿತ್ತು ಎನ್ನುವ ಮಾಹಿತಿ ಲಭ್ಯವಾಗಿದೆ.

ಸಾದಿಯಾ ಅಜರ್ ಪತಿ ಯೂಸುಫ್ ಅಜರ್ ಕಂದಹಾರ್, ವಿಮಾನ ಅಪಹರಣದ ಪ್ರಮುಖ ಸಂಚುಕೋರನಾಗಿದ್ದ. ಮೇ 7ರಂದು ಆಪರೇಷನ್ ಸಿಂಧೂರ್ ಸಮಯದಲ್ಲಿ ಮೃತಪಟ್ಟಿದ್ದ ಎಂದು ವರದಿಯಾಗಿದೆ. ಶಾಹೀನ್ ಲಕ್ನೋದ ಲಾಲ್ ಬಾಗ್ ನಿವಾಸಿ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಫರಿದಾಬಾದ್‌ನಲ್ಲಿ ಜೆಇಎಂನ ಭಯೋತ್ಪಾದಕ ಮಾಡ್ಯೂಲ್ ಬೇಧಿಸಿದ ನಂತರ, ಆಕೆಯನ್ನು ಬಂಧಿಸಲಾಗಿದ್ದು, ಅಸಾಲ್ಟ್ ರೈಫಲ್ ವಶಪಡಿಸಿಕೊಳ್ಳಲಾಗಿದೆ.

ಶಾಹೀನ್ ಅಲ್-ಫಲಾಹ್ ವಿಶ್ವವಿದ್ಯಾಲಯದ ಭಾಗವಾಗಿದ್ದು, ಫರಿದಾಬಾದ್‌ನಲ್ಲಿ 2 ಕೊಠಡಿಗಳನ್ನು ಬಾಡಿಗೆಗೆ ಪಡೆದಿದ್ದಳಂತೆ. ಕೊಠಡಿಗಳಲ್ಲಿ ಪರಿಶೀಲನೆ ವೇಳೆ 2,900 ಕೆಜಿ ಸ್ಫೋಟಕಗಳು ಮತ್ತು ದಹನಕಾರಿ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಮತ್ತು ಬಂಧಿತ ಶಾಹೀನ್ ಕಾಶ್ಮೀರಿ ವೈದ್ಯ ಮುಜಮ್ಮಿಲ್ ಗನೈ ಜೊತೆ ನಿಕಟ ಸಂಬಂಧ ಹೊಂದಿದ್ದಾಳೆಂದು ವರದಿಯಾಗಿದೆ.

ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾ ಮೂಲದ ಮುಜಮ್ಮಿಲ್, ದೆಹಲಿಯಿಂದ 45 ಕಿಲೋ ಮೀಟರ್‌ ದೂರದಲ್ಲಿರುವ ಧೌಜ್‌ನಲ್ಲಿರುವ ಅಲ್ ಫಲಾಹ್ ವಿಶ್ವವಿದ್ಯಾಲಯದಲ್ಲಿ ವೈದ್ಯರಾಗಿದ್ದರು. ಶ್ರೀನಗರದಲ್ಲಿ ಜೈಶ್-ಎ-ಮೊಹಮ್ಮದ್ ಅನ್ನು ಬೆಂಬಲಿಸಿ ಹಾಕಲಾದ ಪೋಸ್ಟರ್‌ಗಳಿಗೆ ಸಂಬಂಧಿಸಿದಂತೆ, ಜೆಕೆ ಪೊಲೀಸರು ಮುಜಮ್ಮಿಲ್ ಅವರನ್ನು ವಾಂಟೆಡ್ ವ್ಯಕ್ತಿ ಎಂದು ಹೆಸರಿಸಿದ ನಂತರ ಬಂಧಿಸಲಾಗಿತ್ತು.

ಆ ವೇಳೆ ಪೊಲೀಸರಿಗೆ ಅಮೋನಿಯಂ ನೈಟ್ರೇಟ್ ಎಂದು ಶಂಕಿಸಲಾದ ಸ್ಫೋಟಕ ವಸ್ತು, 20 ಟೈಮರ್‌ಗಳು ಮತ್ತು ಇತರ ಅನುಮಾನಾಸ್ಪದ ವಸ್ತುಗಳನ್ನು ಪತ್ತೆಯಾಗಿದ್ದವು.ವರದಿಗಳ ಪ್ರಕಾರ ಹೊಸ ಮಹಿಳಾ ಘಟಕಕ್ಕೆ ನೇಮಕಾತಿ ಅಕ್ಟೋಬರ್ 8ರಂದು ಪಾಕಿಸ್ತಾನದ ಬಹವಾಲ್ಪುರದ ಮರ್ಕಜ್ ಉಸ್ಮಾನ್-ಒ-ಅಲಿಯಲ್ಲಿ ಪ್ರಾರಂಭವಾಗಿದೆ.

ಮಸೂದ್ ಅಜರ್‌ನ ಸಹೋದರಿ ಸಾದಿಯಾ ಅಜರ್ ಈ ಗುಂಪಿನ ನೇತೃತ್ವ ವಹಿಸಿದ್ದು, ಇದು ಜೆಇಎಂ ಕಮಾಂಡರ್‌ಗಳ ಪತ್ನಿಯರನ್ನು ಹಾಗೂ ಬಹಾವಲ್‌ಪುರ, ಕರಾಚಿ, ಮುಜಫರಾಬಾದ್, ಕೋಟ್ಲಿ, ಹರಿಪುರ ಮತ್ತು ಮನ್ಸೆಹ್ರಾದಲ್ಲಿರುವ ತನ್ನ ಕೇಂದ್ರಗಳಲ್ಲಿ, ಅಧ್ಯಯನ ಮಾಡುತ್ತಿರುವ ಆರ್ಥಿಕವಾಗಿ ದುರ್ಬಲ ಮಹಿಳೆಯರನ್ನು ಸೇರಿಸಿಕೊಳ್ಳುವ ಕೆಲಸ ಮಾಡುತ್ತಿತ್ತು ಎಂದು ವರದಿಯಾಗಿದೆ.

- Advertisement -

Latest Posts

Don't Miss