KSRTC ವಿರುದ್ಧ ಪ್ರತಿಭಟನೆ : ತಂಬಾಕು ಜಾಹೀರಾತಿಗೆ ಧಿಕ್ಕಾರ!

ರಾಜ್ಯ ರಸ್ತೆ ಸಾರಿಗೆ ನಿಗಮದ ಬಸ್‌ಗಳ ಮೇಲೆ ತಂಬಾಕು ಮತ್ತು ಪಾದರಕ್ಷೆಗಳ ಜಾಹೀರಾತು ಪ್ರಕಟಿಸಿರುವುದನ್ನು ಖಂಡಿಸಿ ಮಂಡ್ಯದಲ್ಲಿ ಮಂಡ್ಯ ರಕ್ಷಣಾ ವೇದಿಕೆ ಸದಸ್ಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಕ್ರಮ KSRTC ನಿಗಮದ ನೈತಿಕ ಜವಾಬ್ದಾರಿಯನ್ನು ಪ್ರಶ್ನಿಸುವಂತಿದೆ ಎಂದು ಪ್ರತಿಭಟನಾಕಾರರು ಹೇಳಿದರು.

ಮಂಡ್ಯ ರಕ್ಷಣಾ ವೇದಿಕೆಯ ಸಂಸ್ಥಾಪಕ ಅಧ್ಯಕ್ಷ ಶಂಕರ್ ಬಾಬು ಅವರ ನೇತೃತ್ವದಲ್ಲಿ ನಗರದ ಸಂಜಯ್ ವೃತ್ತದಲ್ಲಿ ಭಾರಿ ಪ್ರತಿಭಟನೆ ನಡೆಯಿತು. ಪ್ರತಿಭಟನಾಕಾರರು ಬಸ್‌ಗಳ ಮೇಲೆ ಇಂತಹ ಜಾಹೀರಾತು ಪ್ರದರ್ಶನ ನಿಗಮದ ಗೌರವಕ್ಕೆ ಧಕ್ಕೆ ತರುತ್ತದೆ ಎಂದು ಆರೋಪಿಸಿ, ಘೋಷಣೆ ಕೂಗಿ KSRTC ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ನಗರ ಬಸ್ ನಿಲ್ದಾಣದ ಆಡಳಿತಾಧಿಕಾರಿಗಳಿಗೆ ಮನವಿ ಸಲ್ಲಿಸಿದ ಮ.ರ.ವೇ ಸದಸ್ಯರು, ತಕ್ಷಣವೇ ಬಸ್‌ಗಳ ಮೇಲಿನ ತಂಬಾಕು ಮತ್ತು ಪಾದರಕ್ಷೆಗಳ ಜಾಹೀರಾತುಗಳನ್ನು ತೆರವುಗೊಳಿಸುವಂತೆ ಆಗ್ರಹಿಸಿದರು. ಈ ಜಾಹೀರಾತುಗಳನ್ನು ತೆಗೆದಿಲ್ಲದಿದ್ದರೆ ಉಗ್ರ ಹೋರಾಟಕ್ಕೆ ಇಳಿಯುತ್ತೇವೆ ಎಂದು ಶಂಕರ್ ಬಾಬು ಎಚ್ಚರಿಕೆ ನೀಡಿದರು.

ವರದಿ: ರಂಜಿತ ರೇವಣ್ಣ ನಾಟನಹಳ್ಳಿ 

About The Author