ದೆಹಲಿ ಸ್ಫೋಟ ಪ್ರಕರಣದಲ್ಲಿ ಬಗೆದಷ್ಟು ಸಂಚುಗಳು ಬಯಲಾಗುತ್ತಿದೆ. ಭಾರತದ 200ಕ್ಕೂ ಹೆಚ್ಚು ಕಡೆ ಸ್ಫೋಟಕ್ಕೆ ಸಂಚು ರೂಪಿಸಿದ್ರಂತೆ. 1993ರಲ್ಲಿ ಮುಂಬೈನಲ್ಲಿ ನಡೆದಿದ್ದ ಸರಣಿ ಸ್ಫೋಟದ ಮಾದರಿಯಲ್ಲಿ, ಈಗಲೂ ಸ್ಫೋಟಿಸಲು ಪ್ಲಾನ್ ಮಾಡಿಕೊಂಡಿದ್ರಂತೆ. ಟೆರರ್ ನೆಟ್‌ವರ್ಕ್ ಮೂಲಕ ಜೈಶ್ ಉಗ್ರರು ಸ್ಫೋಟಕ ರವಾನಿಸಲು ಸಂಚು ಹೆಣೆದಿದ್ರಂತೆ .
ಮತ್ತೊಂದು ಪ್ರಮುಖ ವಿಷ್ಯ ಅಂದ್ರೆ, ಕೆಂಪು ಕೋಟೆ ಬಳಿ i20 ಕಾರ್‌ನಲ್ಲಿ ಬಾಂಬ್ ಇಟ್ಟು ಸ್ಪೋಟಿಸಲಾಗಿತ್ತು. i20 ಕಾರ್ ಮಾತ್ರವಲ್ಲ ಇದೇ ರೀತಿ ಇನ್ನೂ 2 ಕಾರುಗಳು ಇವೆಯಂತೆ. ಇಕೋ ಸ್ಪೋರ್ಟ್ಸ್ ಕಾರು ಮತ್ತು ಕೆಂಪು ಬಣ್ಣದ ಕಾರ್‌ಗಳಿಗಾಗಿ, ತನಿಖಾ ತಂಡ ತಲಾಶ್ ಮಾಡ್ತಿದೆ.
ಈ ಕಾರುಗಳನ್ನೇ ಬಳಸಿಕೊಂಡು ಜನವಸತಿ ಪ್ರದೇಶ, ಪ್ರವಾಸಿ ತಾಣಗಳಲ್ಲೇ ದುಷ್ಕೃತ್ಯ ಎಸಗಲು ಸಂಚು ರೂಪಿಸಲಾಗಿತ್ತಂತೆ. ಈ ಬಗ್ಗೆ ಟ್ರಾಫಿಕ್ ಪೊಲೀಸರಿಗೂ ಮಾಹಿತಿ ರವಾನೆಯಾಗಿದ್ದು, ಸದ್ಯ ಮಾನಿಟರಿಂಗ್ ಮಾಡಲಾಗ್ತಿದೆ.
ಈಗಾಗಲೇ ಬಂಧನಕ್ಕೆ ಒಳಗಾಗಿರುವ ಮಹಿಳಾ ವೈದ್ಯೆಯ ಕಾರನ್ನೂ ಕೂಡ ತಡೆದು ತಪಾಸಣೆ ನಡೆಸಲಾಗಿತ್ತು. ಆ ವೇಳೆ ಶಸ್ತ್ರಾಸ್ತ್ರಗಳು ಪತ್ತೆಯಾಗಿತ್ತು. ಸದ್ಯ, ಆಕೆ ಕೊಟ್ಟ ಮಾಹಿತಿಯಂತೆ ಹುಡುಕಾಟ ಮಾಡಲಾಗ್ತಿದೆ. ದೊಡ್ಡ ಪ್ರಮಾಣದಲ್ಲಿ ಸ್ಫೋಟಕ ಸಾಗಿಸಿ, ಅನಾಹುತ ಎಸಗುವುದಕ್ಕೂ ಮೊದಲು ಉಗ್ರರ ಪ್ಲಾನ್ ತಲೆಕೆಳಗಾಗಿಸಲು, ಭದ್ರತಾ ಪಡೆ ಮತ್ತು ತನಿಖಾ ತಂಡಗಳು ತೀವ್ರ ಶೋಧ ಕಾರ್ಯದಲ್ಲಿ ತೊಡಗಿವೆ. ಉಗ್ರರ ಬೇಟೆಗಾಗಿ 5 ತಂಡಗಳನ್ನೂ ರಚಿಸಲಾಗಿದೆ.

