Thursday, November 13, 2025

Latest Posts

ರಕ್ಷಿತಾ ಮಾಡ್ತಾರಾ ಔಟ್ ಮ್ಯಾಜಿಕ್? ನೆಕ್ಸ್ಟ್ ಯಾರ್ ಹೋಗ್ತಾರೆ ಗೊತ್ತಾ?

- Advertisement -

ಬಿಗ್ ಬಾಸ್ ಮನೆಯಲ್ಲಿ ರಕ್ಷಿತಾ ಶೆಟ್ಟಿ ಹೆಚ್ಚಾಗಿ ಬೆರೆತಿದದ್ದು ಅಂದ್ರೆ ಅದು ಮಲ್ಲಮ್ಮ ಮತ್ತು ಚಂದ್ರಪ್ರಭಾ ಆದ್ರೆ ಇವರಿಬ್ಬರು ಮನೆಯಿಂದ ಹೊರ ಬಿದಿದ್ದಾರೆ. ಈ ಸಮಯದಲ್ಲಿ ಮನೆಯಲ್ಲಿ ಹೀಗೊಂದು ಚರ್ಚೆ ಶುರುವಾಗಿದೆ. ಬಿಗ್ ಬಾಸ್ ಮನೆಗೆ ಎಂಟ್ರಿಕೊಟ್ಟಿದ್ದ ಮೊದಲ ದಿನವೇ ರಕ್ಷಿತಾ ಶೆಟ್ಟಿ ಮನೆಯಿಂದ ಹೊರ ಬಂದಿದ್ದರು. ನಂತರ ಒಂದು ವಾರಗಳ ಕಾಲ ಸೀಕ್ರೆಟ್ ರೂಮ್ ನಲ್ಲಿದ್ದ ರಕ್ಷಿತ್ತಾ ಶೆಟ್ಟಿ ಮತ್ತೆ ಎಂಟ್ರಿ ಕೊಟ್ಟು ತಮ್ಮ ನೇರ ನುಡಿ ಹಾಗೂ ತಮ್ಮ ಮಾತಿನ ಶೈಲಿಯ ಮೂಲಕ ಪ್ರೇಕ್ಷಕರಿಗೆ ತುಂಬಾ ಇಷ್ಟ ಆದ್ರು. ಏನೇ ಇದ್ದರು ನೇರಾನೇರ ಹೇಳುವ ರಕ್ಷಿತಾ ಶೆಟ್ಟಿ ಎರಡನೇ ವಾರದ ವೀಕೆಂಡ್ ನಲ್ಲಿ ಸುದೀಪ್ ನಿಮಗೆ ಮನೆಯಿಂದ ಯಾರನ್ನಾದರೂ ಹೊರಹಾಕುಲು ಚಾನ್ಸ್ ಕೊಟ್ರೆ ಯಾರನ್ನು ಹಾಕುತ್ತೀರಾ ಎಂದು ಕೇಳಿದಾಗ ”ನಾನು ಎಲ್ಲರನ್ನೂ ಹೊರಹಾಕುತ್ತೇನೆ” ಎಂದು ಹೇಳಿದ್ದರು.

ರಕ್ಷಿತಾ ಹೇಳಿದಂತೆ ಆಗಿತ್ತು , ಎಲ್ಲಾ ಸ್ಪರ್ಧಿಗಳು ಮನೆಯಿಂದ ಹೊರ ಬಿದ್ದಿದ್ದರು. ಇದಾದ ಬಳಿಕ ಅನೇಕ ಟ್ರೋಲ್ ಗಳು ಶುರುವಾದವು. ರಕ್ಷಿತಾ ಶೆಟ್ಟಿ ಹೇಳಿದಂತೆ ಮನೆಯಿಂದ ಎಲ್ಲರನ್ನೂ ಹೊರ ಹಾಕಿ ಬಿಟ್ಟರು ಎಂದು ಮಾತು ಶುರುವಾಗಿತ್ತು . ಇದೀಗ ರಕ್ಷಿತಾ, ಗಿಲ್ಲಿ ಬಳಿ ಇಂಥದ್ದೇ ವಿಷ್ಯ ಮಾತನಾಡಿಕೊಂಡಿದ್ದಾರೆ.

ರಕ್ಷಿತಾ ಬಿಗ್ ಬಾಸ್ ಮನೆಯಲ್ಲಿ ದಿನವಿಡೀ ಮಲ್ಲಮ ಜೊತೆ ಮಾತನಾಡುತ್ತಾ ಅವರ ಜೊತೆಯೇ ಹೆಚ್ಚು ಕಾಲ ಕಳೆಯುತ್ತಿದ್ದರು .ಆದರೆ ಮಲ್ಲಮ್ಮ ಮನೆಯಿಂದ ಹೊರಬಂದರು ಇದಾದ ಬಳಿಕ ರಕ್ಷಿತಾ ತುಂಬಾ ಬೇಸರದಲ್ಲಿದ್ದರು ದಿನ ಕಳೆದಂತೆ ರಕ್ಷಿತಾ ಚಂದ್ರಪ್ರಭಾ ಜೊತೆ ಹೆಚ್ಚು ಮಾತನಾಡುತ್ತಿದ್ದರು. ತಮ್ಮ ಮನಸ್ಸಲ್ಲಿದ್ದ ಮಾತುಗಳನ್ನು ಚಂದ್ರಪ್ರಭ ಜೊತೆ ಹೇಳಿಕೊಳ್ಳುತ್ತಿದ್ದರು . ಚಂದ್ರಣ್ಣ… ಚಂದ್ರಣ್ಣ… ಎನ್ನುತ್ತಾ ಜೊತೆಗೇ ಓಡಾಡುತ್ತಿದ್ದರು. ಆದ್ರೆ ಕಳೆದ ವಾರ ಮಲ್ಲಮ್ಮನಂತೆ ಚಂದ್ರಪ್ರಭ ಕೂಡ ಮನೆಯಿಂದ ಹೊರ ಹೋಗುತ್ತಾರೆ. ಹೀಗಾಗಿ ರಕ್ಷಿತಾ ಮನಸಲ್ಲಿ ಒಂದು ಪ್ರಶ್ನೆ ಮೂಡಿದೆ ಅದನ್ನು ಗಿಲ್ಲಿ ಹಾಗೂ ರಘು ಬಳಿ ಹೇಳಿಕೊಂಡಿದ್ದಾರೆ.”ಸತ್ಯ ಹೇಳ್ತಿದೆನೆ ಅಜ್ಜಿ ಜೊತೆ ಕ್ಲೋಸ್ ಇದ್ದೆ ಅವರು ಹೋದ್ರು. ಮತ್ತೆ ನಾನು ಚಂದ್ರಣ್ಣ ಜೊತೆ ಕೋಸ್ ಆದೆ ಅವರು ಹೋದ್ರುʼʼ ಈ ರೀತಿಯಾಗಿ ರಕ್ಷಿತಾ ಹೇಳ್ತಾರೆ. ಇದನ್ನು ಕೇಳಿದ ಗಿಲ್ಲಿ, ನೆಕ್ಸ್ಟ್ ಅಶ್ವಿನಿ ಮೇಡಂ ಜೊತೆ ನೀನು ಕ್ಲೋಸ್ ಇರು, ಅವರು ಹೋಗ್ಬಿಡಲಿ ಅಂತ ಗಿಲ್ಲಿ ಹೇಳ್ತಾರೆ.

ಗಿಲ್ಲಿ ಮಾತು ಕೇಳಿ ಬಿಗ್ ಬಾಸ್ ಪ್ರೇಕ್ಷಕರಂತೂ ಫುಲ್ ಖುಷಿಯಾಗಿದ್ದಾರೆ . ಹಾಗೂ ಜನರು ಅವರ ಅಭಿಪ್ರಾಯಗಳನ್ನೂ ಕೂಡ ಕಮೆಂಟ್ ಮಾಡಿದ್ದಾರೆ . ”ನಿನ್ನ ಅಣ್ಣ ಧ್ರುವ ಜೊತೆ ಕ್ಲೋಸ್ ಆಗು ನೆಕ್ಸ್ಟ್ ವೀಕ್ ಹೋಗಿ ಬಿಡ್ಲಿ” ಇನ್ನೂ ಕೆಲವರು ರಿಷಾ ಜೊತೆ ಇರಿ ಅವರು ಹೋಗಿ ಬಿಡ್ಲಿ ಹೀಗೆ ಬೇರೆ ಬೇರೆ ರೀತಿಯಲ್ಲಿ ಕಮೆಂಟ್ ಹಾಕುತ್ತಿದ್ದಾರೆ .ಒಟ್ಟಿನಲ್ಲಿ ಗಿಲ್ಲಿ ಹೊಡೆದ ಡೈಲಾಗ್ ಅಂತೂ ಎಲ್ಲೆಡೆ ವೈರಲ್ ಆಗುತ್ತಿದೆ. ಮತ್ತೊಂದು ತಮಾಷೆಯ ವಿಷ್ಯ ಏನಂದ್ರೆ ರಕ್ಷಿತಾ ಈಗ ಅತೀ ಹೆಚ್ಚು ಬೆರೆಯುತ್ತಿರೋದೇ ಗಿಲ್ಲಿ ಹಾಗೂ ರಘು ಜೊತೆ, ಹುಷಾರು ನೀವೇ ಹೋಗಿ ಬಿಡ್ಬೇಡಿ ಅಂತ ಜನ ತಮಾಷೆ ಮಾತುಗಳನ್ನು ಆಡುತ್ತಿದ್ದಾರೆ. ಇನ್ನು ರಕ್ಷಿತಾ ಹೇಳಿದ ಮಾತಿನಂತೆ ಈ ಬಾರಿ ರಕ್ಷಿತಾಗೆ ಹತ್ತಿರ ಆದೋರು ಮನೆಯಿಂದ ಹೊರಗೆ ಹೋಗ್ತಾರಾ ಕಾದು ನೋಡ್ಬೇಕಿದೆ…..

ವರದಿ : ಗಾಯತ್ರಿ

- Advertisement -

Latest Posts

Don't Miss