ರಾಜಕೀಯದಲ್ಲಿ ಇಷ್ಟೆಲ್ಲ ಬೆಳವಣಿಗೆಗಳು ಆಗ್ತಾಯಿದ್ರು ಕೂಡ ಈಗ KN ರಾಜಣ್ಣ ಈಗ ತಮ್ಮದೇ ಪಕ್ಷದ ಬಗ್ಗೆ ಮತ್ತೊಂದು ಶಾಕಿಂಗ್ ಹೇಳಿಕೆ ನೀಡಿದ್ದಾರೆ. ತುಮಕೂರು ಜಿಲ್ಲೆಯಲ್ಲಿ ಕಾಂಗ್ರೆಸ್ ಮತ್ತೆ ವೈಟ್ವಾಶ್ ಆಗಲೂಬಹುದು. ಮುಂದೆ ನಾನು ಯಾವ ಬಾವುಟ ಹಿಡಿಯುತ್ತೇನೋ ಗೊತ್ತಿಲ್ಲ, ಬೇರೆ ಪಕ್ಷದ ಬಾವುಟ ಹಿಡಿಯುವ ಸಂದರ್ಭ ಬರಬಹುದು ಎಂದು ಅವರು ಮಧುಗಿರಿಯ ದೊಡ್ಡೇರಿಯ ಜನಸಂಪರ್ಕ ಸಭೆಯಲ್ಲಿ KN ರಾಜಣ್ಣ ಹೇಳಿದರು.
2004ರಲ್ಲಿ ಜೆಡಿಎಸ್ನಿಂದ ಶಾಸಕನಾಗಿದ್ದಾಗ ತುಮಕೂರು ಜಿಲ್ಲೆಯಲ್ಲಿ ಕಾಂಗ್ರೆಸ್ ಸಂಪೂರ್ಣ ವೈಟ್ವಾಶ್ ಆಗಿತ್ತು ಎಂದು ರಾಜಣ್ಣ ನೆನಪಿಸಿಕೊಂಡಿದ್ದಾರೆ. ನಾನು ಮುಂದಿನ ಚುನಾವಣೆಗೆ ಸ್ಪರ್ಧಿಸುವುದಿಲ್ಲ ಅಂದ್ರು ಕೂಡ ರಾಜಕೀಯದಲ್ಲಿ ಏನಾಗತ್ತೆ? ಏನೆಲ್ಲಾ ಬದಲಾಗತ್ತೆ ಅಂತ ಹೇಳೋಕೆ ಸಾಧ್ಯವಿಲ್ಲ ಎಂದು ಹೇಳಿದರು.
ರಾಜಕಾರಣದಲ್ಲಿ ಶಾಶ್ವತ ಶತ್ರುಗಳೂ ಇಲ್ಲ, ಮಿತ್ರರೂ ಇಲ್ಲ. ನನಗೂ ಮಧುಗಿರಿಗೂ ಯಾವ ಋಣಾನುಬಂಧವೋ ಗೊತ್ತಿಲ್ಲ. ಜನರ ಬೆಂಬಲವೇ ನನ್ನ ಬಲ, ಎಂದು ರಾಜಣ್ಣ ಸ್ಪಷ್ಟಪಡಿಸಿದರು. ಜಾತಿ-ಪಕ್ಷ ರಹಿತವಾಗಿ ಬಡವರ ಪರವಾಗಿ ಕೆಲಸ ಮಾಡಿದಾಗ ಅವರ ಆಶೀರ್ವಾದವೇ ದೇವರ ಆಶೀರ್ವಾದ ಎಂದು ಅವರು ಹೇಳಿದರು.
ವರದಿ : ಲಾವಣ್ಯ ಅನಿಗೋಳ

