Thursday, November 13, 2025

Latest Posts

ಬಾಬರಿ ಮಸೀದಿ ಧ್ವಂಸಕ್ಕೆ ಸೇಡು – 32 ಕಾರು ಸಜ್ಜುಗೊಳಿಸಿದ್ದ ಉಗ್ರರು

- Advertisement -

ದೇಶದ ರಾಜಧಾನಿ ದೆಹಲಿಯ ಹೃದಯಭಾಗದಲ್ಲೇ, ಐತಿಹಾಸಿಕ ಕೆಂಪುಕೋಟೆ ಬಳಿ ನಡೆದ ಕಾರು ಸ್ಫೋಟ ಪ್ರಕರಣ ರಾಷ್ಟ್ರವನ್ನು ಬೆಚ್ಚಿಬೀಳಿಸಿದೆ. ಈ ದಾಳಿ ಕೇವಲ ಯಾದೃಚ್ಛಿಕ ಸ್ಫೋಟವಲ್ಲ, ಬಾಬರಿ ಮಸೀದಿ ಧ್ವಂಸಕ್ಕೆ ಸೇಡು ತೀರಿಸಿಕೊಳ್ಳುವ ಉದ್ದೇಶದಿಂದ ರೂಪಿಸಲಾದ ದೇಶವ್ಯಾಪಿ ಭಯೋತ್ಪಾದಕ ಸಂಚಿನ ಭಾಗವೆಂದು ತನಿಖಾಧಿಕಾರಿಗಳು ಬಹಿರಂಗಪಡಿಸಿದ್ದಾರೆ. ಡಿಸೆಂಬರ್ 6ರಂದು ದೆಹಲಿಯ ಆರು ಕಡೆ ಸೇರಿದಂತೆ ದೇಶದ ಹಲವು ನಗರಗಳಲ್ಲಿ ಸರಣಿ ಬಾಂಬ್ ಸ್ಫೋಟ ನಡೆಸುವ ದುರಾಲೋಚನೆ ನಡೆದಿದೆ ಎಂಬ ಮಾಹಿತಿಯು ಇದೀಗ ಹೊರಬಿದ್ದಿದೆ.

ಸ್ಫೋಟಕ ವಸ್ತುಗಳನ್ನು ಸಾಗಿಸಲು ಮಾರುತಿ ಬ್ರೆಝಾ, ಸ್ವಿಫ್ಟ್ ಡಿಜೈರ್ ಹಾಗೂ ಫೋರ್ಡ್ ಇಕೋಸ್ಪೋರ್ಟ್ ಸೇರಿದಂತೆ 32 ಕಾರುಗಳನ್ನು ಭಯೋತ್ಪಾದಕರು ಸಜ್ಜುಗೊಳಿಸಿದ್ದರು. ಈಗಾಗಲೇ ನಾಲ್ಕು ಕಾರುಗಳು ಪತ್ತೆಯಾಗಿದ್ದು, ಒಂದರಲ್ಲಿ ಅಸಾಲ್ಟ್ ರೈಫಲ್ ಮತ್ತು ಮದ್ದುಗುಂಡುಗಳು ಸಿಕ್ಕಿವೆ. ಹರಿಯಾಣದ ಫರಿದಾಬಾದ್‌ನ ಅಲ್-ಫಲಾಹ್ ಮೆಡಿಕಲ್ ಕಾಲೇಜು ಆವರಣದಲ್ಲಿ ಬ್ರೆಝಾ ಕಾರು ಪತ್ತೆಯಾಗಿದ್ದು, ಅದು ಭಯೋತ್ಪಾದಕ ಚಟುವಟಿಕೆಗಳ ಕೇಂದ್ರವಾಗಿತ್ತು ಎಂದು ಶಂಕೆ ವ್ಯಕ್ತವಾಗಿದೆ.

ನವೆಂಬರ್ 10ರಂದು ಕೆಂಪುಕೋಟೆ ಬಳಿ ಸಂಭವಿಸಿದ ಸ್ಫೋಟದಲ್ಲಿ 12 ಮಂದಿ ಸಾವನ್ನಪ್ಪಿದರೆ, ದಾಳಿ ನಡೆಸಿದ ಉಮರ್ ಎಂಬ ವೈದ್ಯ ದಕ್ಷಿಣ ಕಾಶ್ಮೀರದ ಪುಲ್ವಾಮಾದವನಾಗಿದ್ದಾನೆ. ಆತ ಕಾಶ್ಮೀರದಿಂದ ಹರಿಯಾಣದವರೆಗೆ ವ್ಯಾಪಿಸಿದ್ದ ಭಯೋತ್ಪಾದಕ ಜಾಲದ ಪ್ರಮುಖ ಸದಸ್ಯನಾಗಿದ್ದು, ಮೆಟ್ರೋ ನಿಲ್ದಾಣದ ಬಳಿಯ ಜನನಿಬಿಡ ಸಿಗ್ನಲ್‌ನಲ್ಲಿ ಕಾರು ಸ್ಫೋಟಿಸಿದ್ದಾನೆ. ಈ ಘಟನೆಯು ರಾಷ್ಟ್ರದ ಭದ್ರತೆಯ ಮೇಲಿನ ದೊಡ್ಡ ಸವಾಲಾಗಿ ಪರಿಣಮಿಸಿದೆ.

ವರದಿ: ರಂಜಿತ ರೇವಣ್ಣ ನಾಟನಹಳ್ಳಿ

- Advertisement -

Latest Posts

Don't Miss