2020ರ ವಿಧಾನಸಭಾ ಚುನಾವಣೆಯಲ್ಲಿ ಆರ್‌ಜೆಡಿ ಕೇವಲ ಕೆಲವು ಸಾವಿರ ಮತಗಳಿಂದ ಎನ್‌ಡಿಎಗಿಂತ ಹಿಂತೆಗೆದಿತ್ತು. ಆ ಅನುಭವದ ನಂತರ, 2025ರಲ್ಲಿ ಮಹಾ ಮೈತ್ರಿಕೂಟದ ಆರ್‌ಜೆಡಿ–ಕಾಂಗ್ರೆಸ್ ಗೆಲುವು ಬಹುತೇಕ ಖಚಿತ ಎಂದು ವಿಶ್ಲೇಷಕರು ತಿಳಿಸಿದ್ದಾರೆ. ಆದರೆ ಈ ಬಾರಿ ಫಲಿತಾಂಶ ಪೂರ್ಣವಾಗಿ ಅದಕ್ಕೆ ವಿರುದ್ಧವಾಗಿ ಬಂದಿದೆ. 2025ರ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ತೇಜಸ್ವಿ ಯಾದವ್ ಮತ್ತು ಆರ್‌ಜೆಡಿಗೆ ಜನರು ಗಟ್ಟಿಯಾದ ಸಂದೇಶ ನೀಡಿದ್ದಾರೆ.
ನವೆಂಬರ್ 14 ಬೆಳಿಗ್ಗೆ 11:50ರ ಟ್ರೆಂಡ್ ಪ್ರಕಾರ, ಮಹಾ ಮೈತ್ರಿಕೂಟ ಕೇವಲ 48 ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಂಡರೆ, ಎನ್‌ಡಿಎ 191 ಸ್ಥಾನಗಳಲ್ಲಿ ಭಾರೀ ಮುನ್ನಡೆ ಸಾಧಿಸಿದೆ. ಆಘಾತಕಾರಿ ಸಂಗತಿಯೇನಂದರೆ ತೇಜಸ್ವಿ ಯಾದವ್ ಸ್ವತಃ ತಮ್ಮ ಕ್ಷೇತ್ರದಲ್ಲೂ ಹಿಂದುಳಿದಿದ್ದಾರೆ. ಹಾಗಾದರೆ, ಚುನಾವಣೆಯ ದಿನದವರೆಗೆ ‘ನಿಕಟ ಪೈಪೋಟಿ’ ಎಂದು ಹೇಳಿಕೊಂಡಿದ್ದ ಮಹಾ ಮೈತ್ರಿಕೂಟ ಹೇಗೆ ಸಂಪೂರ್ಣ ಡೌನ್ ಆಯಿತು ಗೊತ್ತಾ? ಈ ಐದು ದೊಡ್ಡ ತಪ್ಪುಗಳೇ ತೇಜಸ್ವಿ ಯಾದವ್ ಅವರ ಭಾರೀ ಹಿನ್ನಡೆಯ ಕಾರಣ ಅಂತ ಹೇಳಾಗುತ್ತಿದೆ.
ನಂಬರ್ 1: 52 ಯಾದವ್ ಅಭ್ಯರ್ಥಿಗಳಿಗೆ ಟಿಕೆಟ್ ನೀಡಿದ್ದು ಮಹಾ ತಪ್ಪು!
ಈ ಸೋಲಿಗೆ ಪ್ರಮುಖ ಕಾರಣ ಆರ್‌ಜೆಡಿ ಈ ಬಾರಿ ಒಟ್ಟು 144 ಸ್ಥಾನಗಳಲ್ಲಿ 52 ಯಾದವ್ ಅಭ್ಯರ್ಥಿಗಳಿಗೆ ಟಿಕೆಟ್ ನೀಡಿತು. ಬಿಹಾರದ ರಾಜಕೀಯ ಜಾತಿ ಆಧಾರಿತವಾಗಿರುವುದರಿಂದ, ಯಾದವ್‌ಗಳಿಗೆ ಅತಿಯಾದ ಆದ್ಯತೆ ನೀಡಿದ ನಿರ್ಧಾರವು ಆರ್‌ಜೆಡಿಯ ಜಾತಿವಾದಿ ಇಮೇಜ್ ಅನ್ನು ಬಲಪಡಿಸಿತು. 52 ಟಿಕೆಟ್‌ಗಳನ್ನು ನೀಡುವ ಮೂಲಕ ಸಾರ್ವಜನಿಕರಿಗೆ ಯಾದವ್ ಆಳ್ವಿಕೆಯ ಸುಳಿವು ಸಿಕ್ಕಿತು. ಇದು ಮೇಲ್ಜಾತಿಗಳು ಮತ್ತು ಅತ್ಯಂತ ಹಿಂದುಳಿದ ಜಾತಿಗಳು ಮಹಾ ಮೈತ್ರಿಕೂಟದಿಂದ ದೂರವಾಗಲು ಕಾರಣವಾಯಿತು.
ನಂಬರ್ 2: ಮಿತ್ರಪಕ್ಷಗಳ ನಿರ್ಲಕ್ಷ್ಯ
ತೇಜಸ್ವಿ ಯಾದವ್ ಅವರ ಕಾರ್ಯತಂತ್ರದಲ್ಲಿನ ಅತಿದೊಡ್ಡ ದೋಷವೆಂದರೆ ಅವರ ಮಿತ್ರಪಕ್ಷಗಳಾದ ಕಾಂಗ್ರೆಸ್, ಎಡಪಂಥೀಯರು ಮತ್ತು ಸಣ್ಣ ಪಕ್ಷಗಳೊಂದಿಗೆ ‘ಸಮಾನ ಸ್ಥಾನ’ ಕಾಯ್ದುಕೊಳ್ಳುವಲ್ಲಿ ವಿಫಲರಾದರು. ಸೀಟು ಹಂಚಿಕೆ ವಿವಾದಗಳು ಮೈತ್ರಿಕೂಟವನ್ನು ದುರ್ಬಲಗೊಳಿಸಿವೆ. ತೇಜಸ್ವಿ ಅವರ ಆರ್‌ಜೆಡಿ ಕೇಂದ್ರಿತ ವಿಧಾನವು ವಿರೋಧ ಪಕ್ಷಗಳನ್ನು ವಿಭಜಿಸಿತು. ತೇಜಸ್ವಿ ನಾವು ಉದ್ಯೋಗಗಳನ್ನು ಒದಗಿಸುತ್ತೇವೆ ಎಂದು ಆದ್ಯತೆ ನೀಡಿದರು, ಇದು ಮಿತ್ರಪಕ್ಷಗಳನ್ನು ಕೆರಳಿಸಿತು.
ನಂಬರ್ 3: ಭರವಸೆಗಳಿಗೆ ಯಾವುದೇ ನೀಲನಕ್ಷೆ ಇಲ್ಲ, ಜನರಲ್ಲಿ ಅಪನಂಬಿಕೆ!
ತೇಜಸ್ವಿ ಪ್ರತಿ ಮನೆಗೆ ಉದ್ಯೋಗ, ಪಿಂಚಣಿ, ಮಹಿಳಾ ಸಬಲೀಕರಣ, ನಿಷೇಧ ಮರುಪರಿಶೀಲನೆ ಸೇರಿದಂತೆ ಹಲವಾರು ಭರವಸೆಗಳನ್ನು ನೀಡಿದರು. ಆದರೆ ಈ ಎಲ್ಲಕ್ಕೂ ಹಣಕಾಸು ಮೂಲ, ಯೋಜನೆ ಅಥವಾ ಸಕಾಲಿಕ ನೀಲನಕ್ಷೆ ಯಾವುದಕ್ಕೂ ಸ್ಪಷ್ಟತೆ ನೀಡಲಿಲ್ಲ. ಮುಂದಿನ ಎರಡು ದಿನಗಳಲ್ಲಿ ನೀಲನಕ್ಷೆ ಕೊಡುತ್ತೇವೆ” ಎಂದು ಅವರು ನಿರಂತರ ಹೇಳಿದರೂ, ಚುನಾವಣೆಯ ಕೊನೆಯವರೆಗೂ ಅದು ಹೊರಬರಲಿಲ್ಲ. ಈ ಅಪನಂಬಿಕೆ, ಯುವ ಮತದಾರರನ್ನು ಕಳೆದುಕೊಳ್ಳುವ ಪ್ರಮುಖ ಕಾರಣವಾಯಿತು.
ನಂಬರ್ 4: ಮಹಾ ಮೈತ್ರಿಕೂಟಗಳಿಗೆ ಮುಸ್ಲಿಂ ಪರವಾದ ಇಮೇಜ್!
ಮಹಾ ಮೈತ್ರಿಕೂಟದ ಮೇಲೆ ‘ಮುಸ್ಲಿಂ ಪರ’ ಎಂಬ ಟ್ಯಾಗ್ ಇಮೇಜ್ ತೇಜಸ್ವಿ ಯಾದವ್ ಅವರ ಸೋಲಿಗೆ ಪ್ರಮುಖ ಕಾರಣವೆಂದು ಸಾಬೀತಾಯಿತು. ಕಾಂಗ್ರೆಸ್ ಹಾಗೂ ಎಡಪಂಥೀಯರ ನೀತಿಗಳು, ತೇಜಸ್ವಿಯವರ ವಕ್ಫ್ ಮಸೂದೆ ಕುರಿತು ನೀಡಿದ ಹೇಳಿಕೆ ಈ ಎಲ್ಲವು ಯಾದವ್ ಸಮುದಾಯದಲ್ಲೂ ಅಸಮಾಧಾನ ಸೃಷ್ಟಿಸಿತು. ಲಾಲು ಪ್ರಸಾದ್ ಅವರ ವಕ್ಫ್ ಮಸೂದೆ ವಿರೋಧದ ಹಳೆಯ ಭಾಷಣವನ್ನು ಬಿಜೆಪಿ ವೈರಲ್ ಮಾಡಿದ ಪರಿಣಾಮವಾಗಿ, ಆರ್‌ಜೆಡಿಯ ಮತಗಳೂ ಕುಸಿತ ಕಂಡಿವೆ.
ನಂಬರ್ 5 : ತಂದೆ ಲಾಲು ಪ್ರಸಾದ್ ಬಗ್ಗೆ ತೇಜಸ್ವಿಗೆ ಗೊಂದಲ!
ಲಾಲು ಅವರ ಪರಂಪರೆಯನ್ನು ತೇಜಸ್ವಿ ಅಪ್ಪಿಕೊಂಡರು, ಆದರೆ ಪೋಸ್ಟರ್‌ಗಳಲ್ಲಿ ಅವರ ಇಮೇಜ್ ಅನ್ನು ಕಡಿಮೆ ಮಾಡುವ ಮೂಲಕ ಅವರು ಹೊಸ ಪೀಳಿಗೆಗೆ ಏನನ್ನು ತಿಳಿಸಲು ಪ್ರಯತ್ನಿಸುತ್ತಿದ್ದಾರೆ ಎಂಬುದನ್ನು ಸ್ಪಷ್ಟಪಡಿಸಲಿಲ್ಲ. ಈ ದ್ವಂದ್ವ ನೀತಿ ಉಲ್ಟಾ ಹೊಡೆದಿದೆ. ಗೋಪಾಲ್‌ಗಂಜ್ ರ್ಯಾಲಿಯಲ್ಲಿ ಪ್ರಧಾನಿ ಮೋದಿ ರ‍್ಯಾಲಿಯಲ್ಲಿ ತೇಜಸ್ವಿ ಲಾಲು ಅವರ ಪಾಪಗಳನ್ನು ಮರೆಮಾಡುತ್ತಿದ್ದಾರೆ ಎಂದು ಮಾಡಿದ ಟೀಕೆ ಜನಮನಕ್ಕೆ ನೇರವಾಗಿ ತಲುಪಿತು.
ವರದಿ : ಲಾವಣ್ಯ ಅನಿಗೋಳ




