ಬಿಹಾರ ವಿಧಾನಸಭೆ ಚುನಾವಣೆಯಲ್ಲಿ NDA ಮೈತ್ರಿಕೂಟ ಭರ್ಜರಿ ಗೆಲುವು ಸಾಧಿಸಿದೆ. ಈ ಫಲಿತಾಂಶದ ಬಳಿಕ ಕರ್ನಾಟಕದಲ್ಲಿ ಜೆಡಿಎಸ್-ಬಿಜೆಪಿ ಮೈತ್ರಿಗೆ ಹೊಸ ಉತ್ಸಾಹ ಮೂಡಿದೆ. ಭವಿಷ್ಯದಲ್ಲಿ ನಡೆಯುವ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಬಿಹಾರದ ಮಾದರಿಯಲ್ಲಿ ಯಶಸ್ಸು ಸಾಧಿಸಲು ಉಭಯ ಪಕ್ಷಗಳು ಚಿಂತನೆ ನಡೆಸುತ್ತಿದ್ದಾರೆ. ರಾಜಕೀಯ ತಜ್ಞರು ಹೇಳುತ್ತಿರುವಂತೆ, ಬಿಹಾರದಲ್ಲಿ ಬಿಜೆಪಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಲು ಪ್ರಾದೇಶಿಕ ಪಕ್ಷಗಳ ಬೆಂಬಲ ಮುಖ್ಯ ಕಾರಣವಾಗಿದೆ.
ಕೆಲವು ವರ್ಷಗಳ ಹಿಂದಿನ ವಿಧಾನಸಭಾ ಚುನಾವಣೆಯಲ್ಲಿ ಹೀನಾಯ ಸೋಲು ಕಂಡ ಜೆಡಿಎಸ್ ತಮ್ಮ ಅಸ್ತಿತ್ವವೇ ಪ್ರಶ್ನಾಸ್ಪದವಾಗಿದ್ದ ಸಂದರ್ಭ, ವರಿಷ್ಠರು ಎಚ್.ಡಿ.ದೇವೇಗೌಡ ಅವರು ತಮ್ಮ ಅನುಭವವನ್ನು ಬಳಸಿಕೊಂಡು ಕೇಂದ್ರದ ಎನ್ಡಿಎ ಮೈತ್ರಿಕೂಟದಲ್ಲಿ ಸೇರಿದರು. ಅದರಿಂದ ಜಂಟಿ ಅಭ್ಯರ್ಥಿಗಳು ಹಲವು ಕ್ಷೇತ್ರಗಳಲ್ಲಿ ಜಯ ಸಾಧಿಸಿದ್ದರು.
ಹೀನಾಯ ಫಲಿತಾಂಶದಿಂದ ಬೇಸರಗೊಂಡ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಕೇಂದ್ರದ ಎನ್ಡಿಎ ಸರ್ಕಾರದಲ್ಲಿ ಕ್ಯಾಬಿನೆಟ್ ಸ್ಥಾನ ಲಭಿಸಿದ್ದು, ಪಕ್ಷದ ಅಸ್ತಿತ್ವ ಉಳಿಸಲು ಸಹಾಯಮಾಡಿದೆ. ಇದೀಗ ಬಿಹಾರ ಫಲಿತಾಂಶ ಜೆಡಿಎಸ್ಗೆ ಮತ್ತಷ್ಟು ಹುರುಪು ನೀಡಿದ್ದು, ಮೈತ್ರಿಯನ್ನು ಗಟ್ಟಿಗೊಳಿಸಲು ಪಕ್ಷದ ನಾಯಕರು ಚಿಂತನೆ ನಡೆಸುತ್ತಿದ್ದಾರೆ.
ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ಬಲವರ್ಧನೆಗಾಗಿ ಉಭಯ ಪಕ್ಷಗಳು ಸಜ್ಜಾಗಿದ್ದು, ಜನರಿಂದ ಬೆಂಬಲ ದೊರೆಯಲಿದೆ ಎಂಬ ನಿರೀಕ್ಷೆ ಉಂಟಾಗಿದೆ. ಪಕ್ಷಗಳು ಸಂಘಟನೆ, ಶಕ್ತಿ ಪ್ರದರ್ಶನ ಮತ್ತು ಸಾಮೂಹಿಕ ಸಮಾವೇಶಗಳ ಮೂಲಕ ತಮ್ಮ ಒಗ್ಗಟ್ಟನ್ನು ತೋರಿಸಲು ಮುಂದಾಗಿವೆ. 25 ವರ್ಷವನ್ನು ಪೂರೈಸುತ್ತಿರುವ ಜೆಡಿಎಸ್ ಹೊಸ ಕನಸು ಮತ್ತು ಉತ್ಸಾಹದಿಂದ ಮುಂದಿನ ಹಾದಿಯತ್ತ ಪಯಣಿಸಲು ಸಜ್ಜಾಗಿದೆ.
ವರದಿ: ರಂಜಿತ ರೇವಣ್ಣ ನಾಟನಹಳ್ಳಿ

