Sunday, November 16, 2025

Latest Posts

ರಾಹುಲ್ ಯಾತ್ರೆ ಕೈಗೊಂಡ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಸೋಲು ಕಂಡಿದ್ದು ಯಾಕೆ?

- Advertisement -

ಸ್ವಾತಂತ್ರ್ಯ ಕಾಲದಲ್ಲಿ ಅವಿಭಜಿತ ಬಿಹಾರದಲ್ಲಿ ಏಕಮೇವ ಪ್ರಭಾವಶಾಲಿ ಪಕ್ಷವಾಗಿದ್ದ ಕಾಂಗ್ರೆಸ್, 2025ರ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಕೇವಲ 6 ಸ್ಥಾನಗಳಿಗೆ ತೃಪ್ತಿಪಟ್ಟು ತನ್ನ ಸೋಲಿನ ಸರಣಿಯನ್ನು ಮತ್ತೊಮ್ಮೆ ಮುಂದುವರಿಸಿದೆ. ಪಕ್ಷದ ನಿರಂತರ ಕುಸಿತ ನಾಯಕತ್ವ, ಸಂಘಟನೆ ಮತ್ತು ನೆಲಮಟ್ಟದ ಬಲದ ಕೊರತೆಯ ಪ್ರಶ್ನೆಗಳನ್ನು ಹೆಚ್ಚಿಸಿದೆ.

ಬಿಹಾರದಲ್ಲಿ ಕಾಂಗ್ರೆಸ್‌ನ ಹೀನಾಯ ಸೋಲು ಮತ್ತೊಮ್ಮೆ ಪಕ್ಷದ ಅಸ್ತಿತ್ವವನ್ನು ಪ್ರಶ್ನಿಸುವಂತೆ ಮಾಡಿದೆ. ಬಿಹಾರದಲ್ಲಿ ಬಿಜೆಪಿ 89 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದೆ. ಆದರೆ ಇದು ಕಾಂಗ್ರೆಸ್ ಕಳೆದ ಲೋಕಸಭೆ ಚುನಾವಣೆ ಬಳಿಕ ನಡೆದ 4 ರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ ಗೆದ್ದ ಕ್ಷೇತ್ರಗಳಿಂತಲೂ ಜಾಸ್ತಿ. ಹರ್ಯಾಣದಲ್ಲಿ 37, ಮಹಾರಾಷ್ಟ್ರದಲ್ಲಿ 16, ದೆಹಲಿಯಲ್ಲಿ 0, ಬಿಹಾರದಲ್ಲಿ 6 ಕ್ಷೇತ್ರಗಳಿಗೆ ಕಾಂಗ್ರೆಸ್ ತೃಪ್ತಿ ಪಟ್ಟಿದೆ.

ಇದು ಬಿಹಾರದಲ್ಲಿ ಬಿಜೆಪಿ ಗೆದ್ದಿದ್ದಕ್ಕಿಂತ ಬರೋಬ್ಬರಿ 30 ಕ್ಷೇತ್ರಗಳಿಗಿಂತ ಕಡಿಮೆ. ಇದರ ಜತೆಗೆ ಲೋಕಸಭೆ ಚುನಾವಣೆಗೆ ಜತೆಯಲ್ಲಿ ನಡೆದ ಆಂಧ್ರ ಪ್ರದೇಶ, ಒಡಿಶಾ ಚುನಾವಣೆ ಸೇರೆ ಎಲ್ಲ ಕ್ಷೇತ್ರಗಳಲ್ಲಿ ಸೇರಿಸಿದರೆ ಕಾಂಗ್ರೆಸ್ ಪಡೆದಿದ್ದು 81. ಇದು ಬಿಜೆಪಿ ಬಿಹಾರದಲ್ಲಿ ಪಡೆದ 8 ಕ್ಷೇತ್ರಕ್ಕಿಂತ ಕಡಿಮೆಯಾಗಿದೆ.

ಬಿಹಾರದಲ್ಲಿನ ಕಾಂಗ್ರೆಸ್ ಕುಸಿತದ ಚರಿತ್ರೆ ಗಮನಿಸೋದಾದ್ರೆ 1952ರಲ್ಲಿ ಅವಿಭಜಿತ ಬಿಹಾರದಲ್ಲಿ 276 ಸ್ಥಾನಗಳಲ್ಲಿ 239 ಸ್ಥಾನ ಗೆದ್ದು ಕಾಂಗ್ರೆಸ್ ಭರ್ಜರಿ ಜಯಭೇರಿ ಬಾರಿಸಿತ್ತು. 2000ನೇ ಇಸವಿಯಲ್ಲಿ ಜಾರ್ಖಂಡ್ ಪ್ರತ್ಯೇಕಗೊಂಡ ಬಳಿಕ ಕಾಂಗ್ರೆಸ್‌ನ ಬಲ ಕ್ರಮೇಣ ಕುಂಠಿತವಾಯಿತು.

ಆದರೆ 2000ದ ನಂತರದ ಪ್ರತಿ ಚುನಾವಣೆಯಲ್ಲೂ ಕಾಂಗ್ರೆಸ್‌ ಹೀನಾಯ ಪ್ರದರ್ಶನ ನೀಡುತ್ತಾ ಬಂದಿದೆ. 2000ನೇ ಇಸವಿಯಲ್ಲಿ 243 ಸ್ಥಾನಗಳಲ್ಲಿ 23, 2005ರಲ್ಲಿ 10, 2010ರಲ್ಲಿ 4, 2015ರಲ್ಲಿ 27, 2020ರಲ್ಲಿ 19 ಸ್ಥಾನಗಳಲ್ಲಿ ಕಾಂಗ್ರೆಸ್‌ ಗೆದ್ದಿತ್ತು. ಈ ಬಾರಿ ಮುಖಭಂಗವಾಗುವ ರೀತಿಯಲ್ಲಿ ಕೇವಲ 6 ಸ್ಥಾನಗಳಿಗೆ ತೃಪ್ತಿಪಟ್ಟಿದೆ.

ಬಿಹಾರದಲ್ಲಿ ಮತಗಳ್ಳತನದ ಆರೋಪಗಳ ವಿರುದ್ಧ ದೇಶವ್ಯಾಪಿ ಸಂಚಲನ ಸೃಷ್ಟಿಸುವ ಉದ್ದೇಶದಿಂದ ಕಾಂಗ್ರೆಸ್ ನಾಯಕ ರಾಹುಲ್‌ ಗಾಂಧಿ ಕೈಗೊಂಡ “ಮತದಾರ ಅಧಿಕಾರ ಯಾತ್ರೆ” ಪಕ್ಷಕ್ಕೆ ಯಾವುದೇ ಲಾಭ ತರಲಿಲ್ಲ. ಯಾತ್ರೆ ನಡೆದ ಎಲ್ಲ ಕ್ಷೇತ್ರಗಳಲ್ಲೂ ಕಾಂಗ್ರೆಸ್ ಸೋಲು ಕಂಡು ರಾಹುಲ್‌ ಪ್ರಚಾರಕ್ಕೆ ದೊಡ್ಡ ಹಿನ್ನಡೆ ತಂದುಕೊಟ್ಟಿದೆ. ಪ್ರಚಾರ ನಡೆಸಿದ ಎಲ್ಲ ಕ್ಷೇತ್ರಗಳಲ್ಲಿಯೂ ಪಕ್ಷ ನೆಲಕಚ್ಚಿದೆ.

ವರದಿ : ಲಾವಣ್ಯ ಅನಿಗೋಳ

- Advertisement -

Latest Posts

Don't Miss