ಹುಲಸೂರು ಪಟ್ಟಣ ಪಂಚಾಯತಿಯನ್ನಾಗಿ ಮಾಡಬೇಕು. ಇಲ್ಲದೆ ಹೋದರೆ ಬೀದರ್ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಈಶ್ವರ್ ಖಂಡ್ರೆ ಅವರ ಮನೆಗೆ ಪಾದಯಾತ್ರೆ ಮಾಡಿ ಅವರ ಮನೆಗೆ ಘೇರಾವ್ ಹಾಕುವ ಬಗ್ಗೆ ತಹಸಿಲ್ದಾರ್ ಹಾಗೂ ತಾಲೂಕ ಕಾರ್ಯನಿರ್ವಾಹಕ ಅಧಿಕಾರಿಗಳ ಮುಖಾಂತರ ಹೋರಾಟಗಾರರು ಮನವಿ ಮಾಡಿದ್ದಾರೆ.
ಈಗಾಗಲೇ ಹುಣಸೂರು ಪಟ್ಟಣವು ತಾಲೂಕ ಕೇಂದ್ರವಾಗಿ 8 ವರ್ಷಗಳು ಕಳೆದಿವೆ. ಆದರೆ ಪಟ್ಟಣ ಪಂಚಾಯತಿಗೆ ಬೇಕಾಗಿರುವ ಎಲ್ಲಾ ರೀತಿಯ ಅರ್ಹತೆಗಳು ಹೊಂದಿದೆ. ಕಳೆದ ಹತ್ತು ವರ್ಷಗಳಿಂದ ಪಟ್ಟಣ ಪಂಚಾಯಿತಿ ಆಗಬೇಕೆಂದು ಬೇಡಿಕೆಯಿದೆ.
ಬೇಡಿಕೆಗೆ ಸಂಬಂಧಿಸಿದಂತೆ ಇಲ್ಲಿವರೆಗೆ ಹಲವು ಸಚಿವರು, ಶಾಸಕರು, ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದ್ರು ಕೂಡ ನಮಗೆ ಸ್ಪಂದನೆ ಸಿಕ್ಕಿಲ್ಲ, ನ್ಯಾಯವು ದೊರೆತಿಲ್ಲ. ಹೀಗಾಗಿ ಹುಲಸೂರ ಪಟ್ಟಣದ ಅಭಿವೃದ್ಧಿ ಬಗ್ಗೆ ಇರುವಂತಹ ಆಸೆ ದಿನೇ ದಿನೇ ಹುಷಿಯಾಗುತ್ತಿದೆ. ಆದ್ದರಿಂದ ಇದೆ ನವೆಂಬರ್ 22 ಒಳಗಾಗಿ ಹುಲಸೂರನ್ನ ಪಟ್ಟಣ ಪಂಚಾಯತಿಯನ್ನಾಗಿ ಘೋಷಣೆ ಮಾಡಬೇಕು.
ಇಲ್ಲದೆ ಹೋದ್ರೆ ಹುಲಸೂರು ಪಟ್ಟಣದ ಶ್ರೀ ವೀರಭದ್ರೇಶ್ವರ ದೇವಸ್ಥಾನದಿಂದ ಭಾಲ್ಕಿಯಲ್ಲಿರುವ ಜಿಲ್ಲಾ ಉಸ್ತುವಾರಿ ಸಚಿವರಾದ ಸನ್ಮಾನ್ಯ ಶ್ರೀ ಈಶ್ವರ್ ಖಂಡ್ರೆ ಅವರ ಮನೆಯವರಿಗೆ ಪಾದಯಾತ್ರೆ ಮಾಡಿ ಘೇರಾವ್ ಹಾಕುತ್ತೇವೆ ಎಂದು ಹೋರಾಟಗಾರರು ಎಚ್ಚರಿಕೆ ನೀಡಿದ್ದಾರೆ.
ವರದಿ : ಲಾವಣ್ಯ ಅನಿಗೋಳ

