ಕೊಪ್ಪಳ ಜಿಲ್ಲೆಯ 2025 ನೇ ಸಾಲಿನ ಪೊಲೀಸ್ ವಾರ್ಷಿಕ ಕ್ರೀಡಾಕೂಟವು ಪೊಲೀಸ್ ಕವಾಯತ್ ಮೈದಾನ ಕೊಪ್ಪಳದಲ್ಲಿ ಅದ್ದೂರಿಯಾಗಿ ಜರುಗಿದೆ. ಈ ವಾರ್ಷಿಕ ಕ್ರೀಡಾಕೂಟದ 2025 ರ ಉದ್ಘಾಟಕರಾಗಿ ಡಾ. ಸುರೇಶ್ ಬಿ ಹಿಟ್ನಾಳ ಜಿಲ್ಲಾಧಿಕಾರಿಗಳು ಕೊಪ್ಪಳ ಅವರು ಉದ್ಘಾಟನೆ ಮಾಡಿ ಚಾಲನೆ ನೀಡಿದರು.
ಮುಖ್ಯ ಅತಿಥಿಯಾಗಿ ಶ್ರೀ ವರ್ಣಿತ ನೇಗಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಜಿಲ್ಲಾ ಪಂಚಾಯತ್ ಕೊಪ್ಪಳ ಅವರ ಭಾಗಿಯಾಗಿದ್ದರು. ವಾರ್ಷಿಕ ಪೊಲೀಸ್ ಕ್ರೀಡಾಕೂಟದಲ್ಲಿ ಡಾ. ರಾಮ್ ಅರಸಿದ್ದಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಕೊಪ್ಪಳ ಸೇರಿದಂತೆ ಪೋಲಿಸ್ ಅಧಿಕಾರಿಗಳು ಮತ್ತು ಪೊಲೀಸ್ ಸಿಬ್ಬಂದಿಗಳು ಕೂಡ ಭಾಗಿಯಾಗಿದ್ದರು.
ಕ್ರೀಡೆ ಇಲ್ಲದ ಜೀವನ ಕೀಟದಿಂದ ಹಣ್ಣಿನಂತೆ ಎಂಬಂತೆ ನಿತ್ಯ ಕರ್ತವ್ಯದ ನಡುವೆಯೂ ಪೋಲಿಸ್ ಅಧಿಕಾರಿಗಳು ಸೇರಿದಂತೆ ಪೊಲೀಸ್ ಸಿಬ್ಬಂದಿ ವಾರ್ಷಿಕ ಕ್ರೀಡಾಕೂಟದ ಕ್ರೀಡೆಗಳಾದ ಗುಂಡು ಎಸೆತ, ಬರ್ಚಿ ಎಸೆತ, ಉದ್ದ ಜಿಗಿತ, ಎತ್ತರ ಜಿಗಿತ, ವಾಲಿಬಾಲ್ ಹಲವಾರು ಕ್ರೀಡೆಗಳಲ್ಲಿ ಭಾಗಿಯಾಗಿ ಸಂತೋಷಪಟ್ಟರು.
ವರದಿ : ಲಾವಣ್ಯ ಅನಿಗೋಳ

