Monday, November 17, 2025

Latest Posts

“ಈ 5 ಲಕ್ಷಣ ಕಂಡ್ರೆ ಪವರ್‌ಬ್ಯಾಂಕ್ ಟೈಂ ಬಾಂಬ್!”

- Advertisement -

ಇತ್ತೀಚಿನ ದಿನಗಳಲ್ಲಿ ಸ್ಮಾರ್ಟ್‌ಫೋನ್ ನಮ್ಮ ಕೈಯಿಂದ ದೂರವಾಗಿರುವುದೇ ಕಷ್ಟ. ಅದಕ್ಕೆ ಪವರ್‌ಬ್ಯಾಂಕ್‌ಗಳು ನಮ್ಮ ದಿನನಿತ್ಯದ ಅವಿಭಾಜ್ಯ ಅಂಗವಾಗಿವೆ. ಆದರೆ, ಈ ಸಣ್ಣ ಸಾಧನವೇ ಕೆಲವೊಮ್ಮೆ ದೊಡ್ಡ ಅಪಾಯಕ್ಕೆ ಕಾರಣವಾಗಬಹುದು ಎಂಬುದು ಅನೇಕರಿಗೆ ಗೊತ್ತಿಲ್ಲ. ಪವರ್ ಬ್ಯಾಂಕ್ ಬಳಸುವಾಗ ಕಾಣಿಸಿಕೊಳ್ಳುವ ಕೆಲವು ಸೂಕ್ಷ್ಮ ಸೂಚನೆಗಳನ್ನು ನಿರ್ಲಕ್ಷ್ಯ ಮಾಡಿದರೆ, ಅದು ಸ್ಫೋಟ ಅಥವಾ ಬೆಂಕಿ ಅಪಘಾತಕ್ಕೆ ದಾರಿ ಮಾಡಿಕೊಡಬಹುದು.

ಪವರ್‌ಬ್ಯಾಂಕ್‌ನ ಮೊದಲ ಮುಖ್ಯ ಲಕ್ಷಣ ಬ್ಯಾಟರಿ ಊತ—ಮೇಲ್ಮೈ ಉಬ್ಬಿದಂತಾಗಿದ್ದರೆ, ಒಳಗಿನ ಲಿಥಿಯಂ ಸೆಲ್ ಹಾನಿಯಾಗಿದೆ ಅಂತ ಅರ್ಥ. ಮತ್ತೊಂದು ಲಕ್ಷಣ ಅತಿಯಾದ ಬಿಸಿ. ಚಾರ್ಜಿಂಗ್ ಸಮಯದಲ್ಲಿ ಸ್ವಲ್ಪ ಬಿಸಿ ಸಾಧಾರಣ, ಆದರೆ ಕೈಗೆ ಹಿಡಿಯಲಾಗದಷ್ಟು ಬಿಸಿಯಾದರೆ ತಕ್ಷಣ ಬಳಕೆ ನಿಲ್ಲಿಸಬೇಕು. ಇದು ಶಾರ್ಟ್ ಸರ್ಕ್ಯೂಟ್ ಅಥವಾ ಓವರ್‌ಹೀಟ್‌ನ ಸೂಚನೆ.

ಪವರ್‌ಬ್ಯಾಂಕ್‌ನಲ್ಲಿ ಔಟ್‌ಪುಟ್ ಸಮಸ್ಯೆಗಳು ಕಂಡುಬಂದರೂ ಎಚ್ಚರ. ಫೋನ್ ಚಾರ್ಜ್ ಆಗುತ್ತಾ ಹೋಗುತ್ತಾ ಸಂಪರ್ಕ ಕಡಿತಗೊಳ್ಳುವುದು, ಸ್ಪಾರ್ಕ್ ಬರುವುದು, ಅಥವಾ ಸುಡುವ ವಾಸನೆ, ಸ್ವಲ್ಪ ಹೊಗೆ–ಇವುಗಳು ಪವರ್‌ಬ್ಯಾಂಕ್ ಒಳಗಿನ ಸರ್ಕ್ಯೂಟ್ ಗಂಭೀರ ಹಾನಿಯ ಲಕ್ಷಣ. ಜೊತೆಗೆ, ಇಂಡಿಕೇಟರ್ ದೀಪಗಳು ಕಾರಣವಿಲ್ಲದೆ ಮಿನುಗುತ್ತಿರೋದು ಅಥವಾ ಕೆಲಸ ಮಾಡದೇ ನಿಂತುಹೋಗುವುದು ಕೂಡಾ ಅಪಾಯಕಾರಿ ಸಂಕೇತ.

ಈ ಲಕ್ಷಣಗಳಲ್ಲಿ ಏನಾದರೂ ಕಂಡರೆ, ಪವರ್‌ಬ್ಯಾಂಕ್ ಬಳಕೆ ತಕ್ಷಣ ನಿಲ್ಲಿಸಿ. ಚಾರ್ಜರ್ ತೆಗೆದು ಅದನ್ನು ತಂಪಾದ, ಒಣ ಜಾಗದಲ್ಲಿ ಇಡಿ; ತಟ್ಟುವುದು, ಒತ್ತುವುದು ಬೇಡ. ಹಾನಿಯಾದ ಪವರ್‌ಬ್ಯಾಂಕ್‌ಗಳನ್ನು ಸಾಮಾನ್ಯ ಕಸದ ಬುಟ್ಟಿಗೆ ಹಾಕಬಾರದು—ಸಮೀಪದ ಇ-ವೇಸ್ಟ್ ಸೆಂಟರ್‌ಗೆ ನೀಡಬೇಕು. ಪವರ್‌ಬ್ಯಾಂಕ್ ಉಪಯುಕ್ತವಾದರೂ, ಸರಿಯಾದ ಜಾಗರೂಕತೆಯೇ ನಿಮ್ಮ ಸುರಕ್ಷತೆ…

ವರದಿ : ಗಾಯತ್ರಿ ಗುಬ್ಬಿ

- Advertisement -

Latest Posts

Don't Miss