ಬಿಗ್ ಬಾಸ್ ಮನೆಯಲ್ಲಿ ಇದೀಗ ಹೊಸ ಡ್ರಾಮಾ(Drama) ಶುರುವಾಗಿದೆ, ಮನೆಯ ನಿಯಮ ಉಲ್ಲಂಘಿಸಿದ ಸ್ಪರ್ಧಿಗಳಿಗೆ ಕಠಿಣ ಶಿಕ್ಷೆ ನೀಡಲಾಗಿದೆ. ಮನೆಯ ಸದಸ್ಯರೇ ತಮ್ಮ ನಡುವೆ ನಿಯಮ ಮುರಿದವರ ಹೆಸರನ್ನು ಹೇಳಬೇಕಾದ ಪರಿಸ್ಥಿತಿ ಬಂತು. ಇಲ್ಲಿ ಜಾಹ್ನವಿ ಮತ್ತು ಅಶ್ವಿನಿ ಗೌಡ ಇಬ್ಬರ ಹೆಸರು ಮೊದಲೇ ಕೇಳಿಬಂತು. ಇಬ್ಬರಿಗೂ ನಾಮಿನೇಟ್(Nominate) ಅನ್ನೋ ಸ್ಟಿಕರ್ ಹಾಕಿ, ಶಿಕ್ಷೆಯಾಗಿ ಮನೆಯ ಮಂದಿಯ ಎದುರಿನಲ್ಲಿ ಬಸ್ಕಿ ಹೊಡೆಯುವಂತೆ ಬಿಗ್ ಬಾಸ್ ಆದೇಶಿಸಿದರು.
ಇಬ್ಬರ ಕೊರಳಿಗೆ “ಐ ಆ್ಯಮ್ ಸಾರಿ”(I am Sorry ) ಬೋರ್ಡ್ ಹಾಕಿ ಬಸ್ಕಿ ಹೊಡೆಯುವ ಈ ಶಿಕ್ಷೆ ಅಶ್ವಿನಿ ಗೌಡ ಅವರಲ್ಲಿ ಸ್ವಲ್ಪ ಟೆನ್ಷನ್ ಕ್ರಿಯೇಟ್ ಮಾಡಿತು.
ಮುಂದಿನ ದಿನಗಳಲ್ಲಿ ನಿಯಮ ಉಲ್ಲಂಘನೆ ಮಾಡೋದಿಲ್ಲ ಎಂದು ಹೇಳಿಸುವುದು ಈ ಟಾಸ್ಕ್‌ನ ಮುಖ್ಯ ಉದ್ದೇಶ. ಈ ಟಾಸ್ಕ್‌ನಿಂದ ಮನೆಯ ಡೈನಮಿಕ್ಸ್ ಸಂಪೂರ್ಣ ಬದಲಾಗಿದೆ,ಅಶ್ವಿನಿ ಗೌಡ ಹೆಸರನ್ನ ತಗೊಂಡ(Gilli Nata) ಗಿಲ್ಲಿ, ಅಶ್ವಿನಿ ಮೇಡಂಗೆ ನಾಮಿನೇಷನ್ ಅಂದ್ರು ಸೀರಿಯಸ್ನೆಸ್ ಇಲ್ಲ, ಬಿಗ್ ಬಾಸ್ ರೂಲ್ಸ್ ಅಂದ್ರು ಸೀರಿಯಸ್ನೆಸ್ ಇಲ್ಲ, ಅವ್ರಿಗೆ ಕಠಿಣವಾದ ಶಿಕ್ಷೆ ಕೊಡ್ಬೇಕು ಅಂತ ಹೇಳಿದ್ದು, ಎಣ್ಣೆ ಸೀಗೆಕಾಯಿಯಂತೆ ಇರೋ ಗಿಲ್ಲಿ ಅಶ್ವಿನಿ ಮಧ್ಯೆ ಇನ್ನೊಂದು ಟಾಕ್ ವಾರ್’ಗೆ ದಾರಿ ಮಾಡಿಕೊಟ್ಟಿರುತ್ತೆ.
ಈ ನಡುವೆ ಗಿಲ್ಲಿಯ ವರ್ತನೆ ಅಶ್ವಿನಿ ಗೌಡ ಅವರಿಗೆ ನೇರವಾಗಿ ಸಿಟ್ಟು ತಂದಿದೆ, ಅಶ್ವಿನಿ ಬಸ್ಕಿ ಹೊಡೆಯುತ್ತಿರೋ ಸಮಯದಲ್ಲಿ ಗಿಲ್ಲಿ ಕಾಲು ಮೇಲೆ ಕಾಲು ಹಾಕಿಕೊಂಡು ಕುಳಿತಿರುವ ರೀತಿ ಅಶ್ವಿನಿ ಗೌಡ ‘ಈಗೋ’ಗೆ ಹೊಡೆತ ತಂದಿರೋದಂತು ಸತ್ಯ, “ಇಳ್ಸು ಕಾಲು”, “ತೀರಾ ಓವರ್ ಆಗ್ ಆಡೋಕೆ ಹೋಗ್ಬೇಡಾ” , “ನಿನ್ನ ಧಿಮಾಕನ್ನ ಹೊರಗಡೆ ಇಟ್ಕೋ” ಅಂತೆಲ್ಲ ವಾರ್ನ್ ಮಾಡ್ತಾರೆ, ಗಿಲ್ಲಿ ಮಾತ್ರ ಅದೇನಾದ್ರು ಆಗ್ಲಿ “ಐ ಡೋಂಟ್ ಕೇರ್” ಅನ್ನೋ ಹಾಗೆ ” “ನಾನ್ ಹೆಂಗಾದ್ರೂ ಕೂತ್ಕೋಬಹುದು” ಅಂತ ಟಕ್ಕರ್ ಕೊಟ್ರು, ಮೊದ್ಲೇ ಎಲ್ರೂ ನನ್ ಹೆಸರನ್ನ ತಗೊಂಡ್ರಲ್ಲ ಅಂತ ಉರಿದುಬೀಳ್ತಿದ್ದ ಅಶ್ವಿನಿ ಅವ್ರಿಗೆ ಗಿಲ್ಲಿ ಯಥಾ ಪ್ರಕಾರ ಕಾಲ್ ಮೇಲೆ ಕಾಲ್ ಹಾಕಿ ಉರಿಯೋ ಬೆಂಕಿಗೆ ತುಪ್ಪ ಸುರಿದಿದ್ದಾರೆ, ಒಟ್ನಲ್ಲಿ ಗಿಲ್ಲಿ ಅಶ್ವಿನಿ ಗೌಡ(Ashwini Gowda) ಬಿಗ್ ಮನೆಯಲ್ಲಿ ಹಾವು ಮುಂಗಸಿ ಹಾಗೆ ಕಿತ್ತಾಡೋದನ್ನ ನೋಡೋಕೆ ಒಂದು ಮಜಾ ಅಂತ ಹೇಳಬಹುದು …
ವರದಿ : ಗಾಯತ್ರಿ ಗುಬ್ಬಿ

