Monday, November 17, 2025

Latest Posts

ಕರ್ನಾಟಕದ ಅತಿದೊಡ್ಡ ಡಿಜಿಟಲ್ ಅರೆಸ್ಟ್, ಬೆಂಗಳೂರಿನ ಟೆಕ್ಕಿಗೆ 31.83 ಕೋಟಿ ನಷ್ಟ!

- Advertisement -

ಬೆಂಗಳೂರಿನಲ್ಲಿ ಕರ್ನಾಟಕದಲ್ಲೇ ಅತಿದೊಡ್ಡ ಡಿಜಿಟಲ್ ಅರೆಸ್ಟ್ ಪ್ರಕರಣ ಬೆಳಕಿಗೆ ಬಂದಿದೆ. ಇಂದಿರಾನಗರದ 57 ವರ್ಷದ ಮಹಿಳಾ ಟೆಕ್ಕಿಯೊಬ್ಬರು ಡಿಜಿಟಲ್ ಅರೆಸ್ಟ್ ಸೈಬರ್ ವಂಚನೆಗೆ ಒಳಗಾಗಿ ಬರೋಬ್ಬರಿ 31.83 ಕೋಟಿ ರೂ. ಕಳೆದುಕೊಂಡಿದ್ದಾರೆ. ಇದು ಕರ್ನಾಟಕದಲ್ಲೇ ಈ ವಂಚನಾ ಮಾದರಿಯಲ್ಲಿ ದಾಖಲಾಗಿರುವ ಅತಿದೊಡ್ಡ ಹಣ ನಷ್ಟ ಪ್ರಕರಣವಾಗಿದೆ ಎಂದು ಪೊಲೀಸ್ ಇಲಾಖೆ ತಿಳಿಸಿದೆ.

ವಂಚಕರು DHL ಮತ್ತು CBI ಅಧಿಕಾರಿಗಳ ಸೋಗಿನಲ್ಲಿ ಆಕೆಯ ಹೆಸರಿನಲ್ಲಿ ಮಾದಕ ವಸ್ತು ಮತ್ತು ನಕಲಿ ದಾಖಲೆಗಳ ಪ್ಯಾಕೇಜ್ ಸಿಕ್ಕಿದೆ ಎಂದು ಸುಳ್ಳು ಹೇಳಿ ಆಕೆಯನ್ನು ಭಯಭೀತಗೊಳಿಸಿದ್ದರು. ಬಳಿಕ ಸ್ಕೈಪ್ ವಿಡಿಯೋ ಕಾಲ್ ಮೂಲಕ ‘ಡಿಜಿಟಲ್ ಅರೆಸ್ಟ್’ ಗೆ ಒಳಪಡಿಸಿ, ಸ್ಥಳೀಯ ಪೊಲೀಸ್ ಅಥವಾ ಕುಟುಂಬಕ್ಕೆ ಮಾಹಿತಿ ನೀಡದಂತೆ ಒತ್ತಡ ಹಾಕಿದ್ದರು.

ಆರೋಪಿಗಳ ಸೂಚನೆಯಂತೆ ಮಹಿಳೆ ಆರು ತಿಂಗಳ ಅವಧಿಯಲ್ಲಿ 187 ವಹಿವಾಟುಗಳಲ್ಲಿ 31.83 ಕೋಟಿ ರೂ. ಗಳನ್ನು ವರ್ಗಾಯಿಸಿದ್ದಾರೆ. ನಂತರ ಹಣ ಮರಳಿ ಸಿಗದಿರುವ ಅನುಮಾನ ಬಂದಾಗ 2025ರ ನವೆಂಬರ್ 14ರಂದು ಸೈಬರ್ ಕ್ರೈಮ್ ಪೊಲೀಸರಿಗೆ ದೂರು ನೀಡಿದ್ದಾರೆ. ಈ ಪ್ರಕರಣವನ್ನು ಪೊಲೀಸರು ಗಂಭೀರವಾಗಿ ತನಿಖೆ ಆರಂಭಿಸಿದ್ದಾರೆ.

ವರದಿ : ಲಾವಣ್ಯ ಅನಿಗೋಳ

- Advertisement -

Latest Posts

Don't Miss