ಬೆಂಗಳೂರುದಿಂದ ತುಮಕೂರಿನವರೆಗೆ ಮೆಟ್ರೋ ವಿಸ್ತರಣೆಗಾಗಿ BMRCL ಕೊನೆಗೂ ಡಿಪಿಆರ್ ತಯಾರಿಸಲು ಟೆಂಡರ್ ಕರೆದಿದೆ. 59.6 ಕಿಮೀ ಉದ್ದದ ಗ್ರೀನ್ ಲೈನ್‌ನ್ನು 25 ಎತ್ತರಿಸಿದ ನಿಲ್ದಾಣಗಳೊಂದಿಗೆ ನಿರ್ಮಿಸುವ ಯೋಜನೆಗೆ ಆರಂಭಿಕ ವೇಗ ಸಿಕ್ಕಿದೆ. ಮೊಟ್ಟ ಮೊದಲ ಬಾರಿಗೆ ಕರ್ನಾಟಕದಲ್ಲಿ ಇಂಟರ್‌ಸಿಟಿ ಮೆಟ್ರೋ ಸೇವೆ ಹುಟ್ಟಿಕೊಳ್ಳಲು ಇದು ದಾರಿ ಮಾಡುತ್ತದೆ. ಹಾಗು ಕರ್ನಾಟಕದ ಮೊದಲ ಇಂಟರ್‌ಸಿಟಿ ಮೆಟ್ರೋ ಖ್ಯಾತಿ ಪಡೆಯುತ್ತದೆ.
ಮಾದವರ –ತುಮಕೂರು ಕಾರಿಡಾರ್ ಪಿಪಿಪಿ ಮಾದರಿಯಲ್ಲಿ ಅಭಿವೃದ್ಧಿಯಾಗಲಿದೆ. ಮೆಟ್ರೋ ಮಾರ್ಗವು ನೆಲಮಂಗಲ, ದಾಬಸ್ ಪೇಟೆ, ಕ್ಯಾತಸಂದ್ರ ಮೂಲಕ ಸಾಗಲಿದೆ. ಯೋಜನೆಯ ಮೊದಲ ಹಂತಕ್ಕೆ ಸುಮಾರು ₹20,649 ಕೋಟಿ ವೆಚ್ಚ ಆಗುವ ನಿರೀಕ್ಷೆಯಿಂದ, 2024-25ರ ಬಜೆಟ್‌ನಲ್ಲಿಯೇ ಈ ಯೋಜನೆಯ ಪ್ರಸ್ತಾಪ ನಡೆದಿದೆ.
ತುಮಕೂರಿಗೆ ಮೆಟ್ರೋ ವಿಸ್ತರಣೆ ಜಾರಿಯಾದರೆ ಈಗಿನ ಪ್ರಯಾಣ ಸಮಯವು ಗಣನೀಯವಾಗಿ ಕಡಿಮೆಯಾಗುವುದರೊಂದಿಗೆ, ಹೆದ್ದಾರಿ ಸಂಚಾರ ದಟ್ಟಣೆ ಸಹ ಇಳಿಕೆಯಾಗಲಿದೆ. ಗ್ರೀನ್ ಲೈನ್ ವಿಸ್ತರಣೆಯು ಮಾರ್ಗದ ಸುತ್ತಲಿನ ಪ್ರದೇಶಗಳಲ್ಲಿ ಆರ್ಥಿಕ ಚಟುವಟಿಕೆಗಳನ್ನು ಹೆಚ್ಚಿಸಿ, ರಾಜ್ಯಕ್ಕೆ ಹೊಸ ರೀತಿಯ ಸಾರಿಗೆ ಅಭಿವೃದ್ಧಿ ಮಾದರಿಯನ್ನು ಪರಿಚಯಿಸುತ್ತದೆ.
ವರದಿ : ಲಾವಣ್ಯ ಅನಿಗೋಳ

