Friday, November 21, 2025

Latest Posts

ಅಶ್ವಿನಿ ‘ಮರ್ಯಾದೆ ಕೊಟ್ಟು ತಗೋಳಿ : ವೀಕ್ಷಕರ ಮರ್ಯಾದೆ ಕ್ಲಾಸ್ !

- Advertisement -

ಅಶ್ವಿನಿ ಗೌಡ ಅವ್ರೆ ಗೌರವವನ್ನ ಕೊಟ್ಟು – ಗೌರವ ತಗೋಳಿ ಅಂತಿದ್ದಾರೆ ಅಶ್ವಿನಿ ಗೌಡ ಅವ್ರ ಈ ವಾರದ ಆಗು ಹೋಗುಗಳನ್ನ ನೋಡುತ್ತಿರೋ ಬಿಗ್ ಬಾಸ್(Bigg Boss) ವೀಕ್ಷಕರು, ಅಶ್ವಿನಿ ಗೌಡ ಅವರು ನಿಜ್ವಾಗ್ಲೂ ನೋವಲ್ಲಿದ್ದಾರಾ ? ಅಥವಾ ಮನೆಯಲ್ಲಿ ಸ್ಟ್ರಾಂಗ್ ಇರೋವ್ರನ್ನ ಹೇಗಾದ್ರು ಮಾಡಿ ವೀಕ್ ಮಾಡ್ಬೇಕು ಅನ್ನೋ ಮಸಲತ್ತು ಮಾಡ್ತಿದ್ದಾರಾ ಅನ್ನೋದು ದೊಡ್ಡ ಪ್ರಶ್ನೆಯಾಗಿ ಕಾಡುತ್ತಿದೆ, ಇಂಗ್ಲಿಷ್ ನಲ್ಲಿ ಒಂದು ಕೋಟ್(quote) ಇದೆ ” Respect is something which you cant buy but u can earn, ಅಂತ ಅಶ್ವಿನಿ ಗೌಡಾ ಅವರು ಎಲ್ಲೊ ಮರ್ಯಾದೆ ಕೊಟ್ಟು ಮರ್ಯಾದೆ ತಗೋಬೇಕು ಅನ್ನೋದನ್ನ ಮರೆತಿದ್ದಾರೆ ಅನ್ಸುತ್ತೆ, ಇದ್ರ ಮದ್ಯೆ ಒಮ್ಮೊಮ್ಮೆ ಅನ್ಸುತ್ತೆ ಬೇರೆ ಯಾವ್ದು ಸೆಟ್ ಆಗ್ತಿಲ್ಲ ಅಂತ ಸಿಂಪತಿ ಕಾರ್ಡ್ ಯೂಸ್ ಮಾಡೋಕೆ ಶುರು ಮಾಡ್ಬಿಟ್ರಾ ಅಶ್ವಿನಿ ಗೌಡಾ ಅವ್ರು ಅಂತ..

ಬಿಗ್ ಬಾಸ್ ಮನೆಯಲ್ಲಿ ಗಿಲ್ಲಿ ಹಾಗೂ ರಘು ಜೊತೆ ಜೋರಾಗಿ ಜಗಳವಾದ್ಮೇಲೆ ಅಶ್ವಿನಿ ಗೌಡ ಭಾವನಾತ್ಮಕವಾಗಿದ್ದಾರೆ. “ನನ್ನ ವಯಸ್ಸಿಗೆ, ನನ್ನ ಮೆಚ್ಯೂರಿಟಿಗೆ ಈ ತರಹದ ಅವಮಾನ ನನಗಲ್ಲ” ಎಂದು ಕಣ್ಣೀರಿಟ್ಟ ಅಶ್ವಿನಿ, ಊಟ-ತಿಂಡಿ ಬಿಟ್ಟು ಉಪವಾಸ ಸತ್ಯಾಗ್ರಹಕ್ಕೂ ಇಳಿದಿದ್ದಾರೆ. ಈ ನಾಟಕೀಯ ಕ್ಷಣಗಳನ್ನು ನೋಡಿ ಕೆಲ ವೀಕ್ಷಕರು ಬೆಂಬಲಿಸುತ್ತಿದ್ದರೆ, ಇನ್ನೂ ಕೆಲವರು ಅಶ್ವಿನಿಯ ವರ್ತನೆಯನ್ನೇ ಪ್ರಶ್ನಿಸುತ್ತಿದ್ದಾರೆ.

ಅಶ್ವಿನಿ ತಾನೇ ಗಿಲ್ಲಿ ಮತ್ತು ರಘು ಮೇಲೆ “ನೀನ್ಯಾವನೋ”, “ಹೋಗೋಲೋ”, “ಮುಚ್ಕೊಂಡ್ ಮಲ್ಕೋ”, “ಅಮಾವಾಸ್ಯೆ” ಅಂತಾ ಏಕವಚನದಲ್ಲಿ ಕಟುವಾಗಿ ಮಾತನಾಡಿದ್ದಾರೆ ಎಂದು ನೆನಪಿಸುತ್ತಿರುವ ವೀಕ್ಷಕರು — “ತಾವು ಬೇರೆಯವರಿಗೆ ಗೌರವ ಕೊಡದೇ, ತಮಗೆ ಗೌರವ ಸಿಗಬೇಕು ಅಂತ ನಿರೀಕ್ಷಿಸುವುದು ಯಾವ ನ್ಯಾಯ?” ಎಂದು ಪ್ರಶ್ನಿಸುತ್ತಿದ್ದಾರೆ. ಅಭಿಮಾನಿಗಳು ಕ್ಯಾಪ್ಟನ್ “ರಘು ನಿಜವಾದ ಸ್ನೇಹಿತ, ಅಶ್ವಿನಿ ಗೌಡರ ಬೈಗುಳದ ವಿರುದ್ಧ ಗಿಲ್ಲಿಗೆ ಸಪೋರ್ಟ್ ಮಾಡೋದು ತಪ್ಪೇನಿಲ್ಲ” ಅಂತ ಪೋಸ್ಟ್ ಮಾಡುತ್ತಿದ್ದಾರೆ.

ಗಿಲ್ಲಿ ಅಶ್ವಿನಿ ಗೌಡಾ(Ashwini Gowda) ಅವರನ್ನ ಟಾಂಟ್‌ಗಳ ಮೂಲಕ ಎಕ್ಸ್‌ಪೋಸ್ ಮಾಡುತ್ತಿದ್ದಾನೆ, ಅದನ್ನೇ ಅಶ್ವಿನಿಗೆ ಸಹಿಸೋಕೆ ಆಗ್ತಿಲ್ಲ ಎಂದು ಕೆಲವರು ವಿಶ್ಲೇಷಿಸುತ್ತಿದ್ದಾರೆ. ಜಾಹ್ನವಿ “ನಿನಗೆ ಮರ್ಯಾದೆ ಕೊಟ್ಟಿರೋದೇ ಹೆಚ್ಚು” ಎಂಬ ಮಾತಿಗೆ ಗಿಲ್ಲಿ “ನನ್ನ ಬಾಯಲ್ಲೂ ಮರ್ಯಾದೆ ಬರೋದು ಇದೇ ಕಾರಣಕ್ಕೆ” ಅಂತಾ ತಿರುಗೇಟು ನೀಡಿದ ವಿಡಿಯೋ ವೈರಲ್ ಆಗಿದ್ದು ಚರ್ಚೆ ಹೆಚ್ಚಿಸಿದೆ. ಕೆಲ ವೀಕ್ಷಕರು ಜಾನ್ವಿ ಅಶ್ವಿನಿ ,“ಇಬ್ಬರು ಕೂಡ ಒಂದೇ ತರದುರಹಂಕಾರ, ಟಾಂಟ್, ತಪ್ಪನ್ನ ಒಪ್ಪಿಕೊಳ್ಳದ ಸ್ವಭಾವ — ಯಾರೂ ಮನೆಯ ದೇವತೆ ಅಲ್ಲ, ಇಬ್ಬರೂ ವಿಲನ್‌ಗಳೇ” ಎಂಬ ಅಭಿಪ್ರಾಯ ಹಂಚಿಕೊಳ್ತಿದ್ದಾರೆ.

ಒಟ್ಟಿನಲ್ಲಿ, ಗಿಲ್ಲಿ ಹಾಗೂ ಅಶ್ವಿನಿ ನಡುವೆ ನಡೆದ ಜಗಳ, ಗೌರವ-ಅಗೌರವದ ವಿಚಾರ, ಕಣ್ಣೀರು ಮತ್ತು ಸಿಂಪಥಿ ಗೇಮ್ — ಎಲ್ಲದರ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಜೋರಾಗಿ ಚರ್ಚೆ ನಡೆಯುತ್ತಿದೆ. ಕೆಲವು ಅಭಿಮಾನಿಗಳು ಅಶ್ವಿನಿ “ಕಿಚ್ಚನ ಚಪ್ಪಾಳೆ” ಗಾಗಿ ಕಣ್ಣೀರು ಸುರಿಸುತ್ತಿದ್ದಾರೆ ಅಂತಿದ್ದಾರೆ; ಇನ್ನೂ ಕೆಲವರು ಗಿಲ್ಲಿ ಮಾಡಿದ್ದೆ ಸರಿ ಅಂತಿದ್ದಾರೆ. ಈಗ ಕಾಡುತ್ತಿರೋ ದೊಡ್ಡ ಪ್ರಶ್ನೆ ಅಂದ್ರೆ ಈ ವೀಕೆಂಡ್‌ನಲ್ಲಿ ಕಿಚ್ಚ ಯಾರು ತಪ್ಪು ಅಂತಾರೆ ? ಯಾರಿಗೆ ಪಾಠ ಹೇಳ್ತಾರೆ ? ಯಾರಿಗೆ ಚಪ್ಪಾಳೆ ಕೊಡ್ತಾರೆ ಅನ್ನೋದು…

ವರದಿ : ಗಾಯತ್ರಿ ಗುಬ್ಬಿ

- Advertisement -

Latest Posts

Don't Miss