ಡಿ.ಕೆ. ಶಿವಕುಮಾರ್ ಅವರ ಬಳಿಯಲ್ಲಿ ಶಾಸಕರ ಸಂಖ್ಯೆ ತುಂಬಾ ಕಡಿಮೆ ಎಂದು ಶಾಸಕ ರಮೇಶ್ ಜಾರಕಿಹೊಳಿ ಹೇಳಿದರು. ಸುದ್ದಿ ವಾಹಿನಿಗಳು ಸುಮ್ಮನೇ ಹವಾ ಮಾಡುತ್ತಿವೆ. ಅವರ ಬಳಿ ಕೇವಲ 50 ಶಾಸಕರಿದ್ದಾರೆಂದು ತೋರಿಸಿದರೆ, ಇವತ್ತೇ ಅವರನ್ನು ಮುಖ್ಯಮಂತ್ರಿಯಾಗಲು ನಾನು ಒತ್ತಾಯಿಸುವೆ ಎಂದು ಅವರು ಸವಾಲು ಹಾಕಿದರು.
ಮುಖ್ಯಮಂತ್ರಿ ಸ್ಥಾನ ಬಗ್ಗೆ ನಾವು ಮಾತನಾಡಬಾರದು. ಬಿಜೆಪಿ ತಟಸ್ಥವಾಗಿರಬೇಕು. ಕಾಂಗ್ರೆಸ್ ಏನು ಮಾಡಿದರೂ, ಅವರ ಗಲಾಟೆಯನ್ನು ನಮ್ಮ ಮೇಲೆ ಹೊರಿಸಬಾರದು ಎಂದು ಅವರು ತಿಳಿಸಿದರು.
ಇದಕ್ಕೂ ಮೊದಲು ಮಹಾರಾಷ್ಟ್ರದಲ್ಲಿ ಆಡಳಿತ ಪಕ್ಷವೇ ಎರಡು ಭಾಗವಾಗಿ ಬಿಜೆಪಿ ಜೊತೆಗೂಡಿ ಸರ್ಕಾರ ರಚಿಸಿತ್ತು. ಅಂತಹ ಪರಿಸ್ಥಿತಿ ಕರ್ನಾಟಕದಲ್ಲಿ ಬರುವುದಿಲ್ಲ. ಇಲ್ಲಿ ಶಾಸಕರ ಸಂಖ್ಯೆಯಲ್ಲಿ ದೊಡ್ಡ ವ್ಯತ್ಯಾಸವಿದೆ. ಡಿ.ಕೆ. ಶಿವಕುಮಾರ್ ತಮ್ಮ ತಂಡದೊಂದಿಗೆ ಬಿಜೆಪಿ ಸೇರಲು ಬಂದರೂ ನಾವು ಒಪ್ಪುವುದಿಲ್ಲ ಎಂದು ಅವರು ಹೇಳಿದರು.
ವರದಿ: ರಂಜಿತ ರೇವಣ್ಣ ನಾಟನಹಳ್ಳಿ

