ಮಂಡ್ಯ: ಜಿಲ್ಲೆಯ ಕೆ.ಆರ್.ಪೇಟೆ ತಾಲೂಕಿನ ಬೂಕನಕರೆ ಸಮುದಾಯ ಆರೋಗ್ಯ ಕೇಂದ್ರವನ್ನು ‘ಡಿ ಗ್ರೇಡ್’ ಗೆ ಇಳಿಸಿರುವ ರಾಜ್ಯ ಆರೋಗ್ಯ ಇಲಾಖೆಯ ನಿರ್ಧಾರಕ್ಕೆ ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆ ಗ್ರಾಮದ ಸರ್ಕಲ್ ಬಳಿ ಸಂಪರ್ಕ ರಸ್ತೆ ತಡೆದು 60ಕ್ಕೂ ಹೆಚ್ಚು ಹಳ್ಳಿ ಜನರು ಪ್ರತಿಭಟನೆ ನಡೆಸಿದರು.
ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರ ಹುಟ್ಟೂರಾದ ಬೂಕನಕೆರೆಯ ಆಸ್ಪತ್ರೆಯನ್ನು, ಅವರು ಅಧಿಕಾರದಲ್ಲಿದ್ದಾಗ 50 ಹಾಸಿಗೆ ಆಸ್ಪತ್ರೆಗೆ ವಿಸ್ತರಿಸಲಾಗಿತ್ತು. ಈಗ ಅದೇ ಆಸ್ಪತ್ರೆಗೆ ಡಿ ಗ್ರೇಡ್ ಇಳಿಕೆ ಮಾಡಿರುವುದು ಸ್ಥಳೀಯರ ಅಸಮಾಧಾನಕ್ಕೆ ಕಾರಣವಾಗಿದೆ.
ಗ್ರಾಮಸ್ಥರು ಡೀಗ್ರೇಡ್ ಆದೇಶ ಹೊರಡಿಸಿದ ಆರೋಗ್ಯ ಆಯುಕ್ತ ಹರ್ಷ ಗುಪ್ತಾ ವಿರುದ್ಧ ಕಿಡಿ ಹೊತ್ತಿದ್ದು, ತಕ್ಷಣವೇ ಈ ಆದೇಶವನ್ನು ಹಿಂತೆಗೆದುಕೊಳ್ಳುವಂತೆ ಆಗ್ರಹಿಸಿದ್ದಾರೆ. ಬೂಕನಕೆರೆಯ ಆಸ್ಪತ್ರೆ ಇರುವಂತೆಯೇ ಮುಂದುವರಿಸಿ ಸುತ್ತಮುತ್ತಲಿನ ಗ್ರಾಮಗಳ ಜನರಿಗೆ ಆರೋಗ್ಯ ಸೇವೆ ಅಡ್ಡಿಯಾಗದಂತೆ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂಬುದು ಪ್ರತಿಭಟನಾಕಾರರ ಬೇಡಿಕೆ.
ವರದಿ: ರಂಜಿತ ರೇವಣ್ಣ ನಾಟನಹಳ್ಳಿ



