ಜಾನ್ವಿಯ ಆಂಕರಿಂಗ್ ಮತ್ತೆ ಜಾನ್ವಿ ಕಲರ್ಸ್ ಕನ್ನಡದಲ್ಲಿ ಮಾಡುತ್ತಿದ್ದಂತಹ ಸವಿರುಚಿ ಶೋ ಬಗ್ಗೆ ಕೀಳಾಗ್ ಮಾತಾಡ್ತೀಯಾ ? ಅಂತ ಜಾನ್ವಿ ರೊಚ್ಚಿಗೆದ್ದಿದ್ರು , ಆದ್ರೆ ಅಲ್ಲಿ ನಿಜ್ವಾಗ್ಲೂ ಗಿಲ್ಲಿ ಕೀಳಾಗಿ ಮಾತಾಡಿದ್ರಾ ? ಅನ್ನೋದು ಪ್ರಶ್ನೆಯಾಗಿದೆ., ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಿಟ್ಟಿದ್ದ ‘ಸವಿರುಚಿ’ ಪ್ರೋಗ್ರಾಂ ಬಗ್ಗೆ ಗಿಲ್ಲಿ ನಟ ಕೀಳಾಗಿ ಮಾತಾಡಿದ್ದಾರೆ ಎಂದು ಜಾಹ್ನವಿ ಬಿಗ್ ಬಾಸ್ ಮನೆಯಲ್ಲಿ ಆರೋಪ ಮಾಡಿದ್ದಾರೆ, ಅದ್ರಲ್ಲೂ ಜಾನ್ವಿ ಈ ಕಾರ್ಯಕ್ರಮದ ಆಂಕರ್ ಆಗಿದ್ರು ಕೂಡ, “ಗಿಲ್ಲಿ ನಟ ನಿಜವಾಗಿಯೂ ಶೋ ಬಗ್ಗೆ ಕೆಟ್ಟದಾಗಿ ಮಾತನಾಡಿದರಾ?” ಎಂಬ ಪ್ರಶ್ನೆಯನ್ನ ಪ್ರೇಕ್ಷಕರೂ ಕೇಳ್ತಿದ್ದಾರೆ.
ಸ್ಪಂದನಾ ವಿಷಯದಲ್ಲಿ ಜಾಹ್ನವಿ ಕಲರ್ಸ್ ವಾಹಿನಿಯ ಬಗ್ಗೆ ಹೇಳಿದ ಮಾತಿಗೆ ಕಿಚ್ಚ ಗಂಭೀರ ಕ್ಲಾಸ್ ತೆಗೆದುಕೊಂಡಿದ್ದರು. ಅದಾದ ನಂತರ ಜಾಹ್ನವಿ ಕ್ಯಾಮರಾ ಮುಂದೆ ಕ್ಷಮೆ ಕೇಳಿದರು. ಆ ಕ್ಷಣವನ್ನು ಗಮನಿಸಿದ ಗಿಲ್ಲಿ, ಜಾಹ್ನವಿಯ ಆ ವರ್ತನೆಯನ್ನು ಹಾಸ್ಯ–ಸಟೈರ್ ಶೈಲಿಯಲ್ಲಿ ಕಾಲೆಳೆಯುತ್ತ, “ಜಾನು ಆಂಕರಿಂಗ್ ರೀಕಾಲ್ ಮಾಡ್ತಿದ್ಯಾ? ಕಲರ್ಸ್ ನಂ.1 ಆಗಿದೆ ಆಮೇಲ್ ನನ್ನ ಕಾರ್ಯಲ್ಲ ಅಂತ ಹಿಂಗ್ ಮಾಡ್ತಿದೀಯಾ ? ಅಂತ ಗಿಲ್ಲಿ ಕಾಲೆಳೆದ್ರು…
ಇದನ್ನೇ ಆಧಾರ ಮಾಡಿಕೊಂಡ ಜಾಹ್ನವಿ, ಗಿಲ್ಲಿ ನಟ ‘ಸವಿರುಚಿ’ ಶೋ ಬಗ್ಗೆ ಕೀಳಾಗಿ ಮಾತನಾಡಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು. ಆದರೆ ಗಿಲ್ಲಿ ನಟನ ಮಾತುಗಳನ್ನು ಕೇಳಿದಾಗ, ಅವರು ನೇರವಾಗಿ ‘ಸವಿರುಚಿ’ ಶೋನ ಬಗ್ಗೆ ಕೆಟ್ಟ ಮಾತು ಆಡಿದಂತೆ ಕಂಡುಬರುವುದಿಲ್ಲ. ಅವರ ಉದ್ದೇಶವು ಜಾಹ್ನವಿಯ ಕ್ಷಮೆಯ ವಿಡಿಯೋ ಕುರಿತು ಹಾಸ್ಯ ಮಾಡುವುದೇ ಹೊರತು ಶೋಗೆ ಅವಮಾನ ಮಾಡುವುದಲ್ಲ ಅನ್ನೋದು ನೋಡುಗರಿಗೆ ಅನ್ನಿಸುತ್ತಿರೋ ಸತ್ಯ…
ಒಟ್ಟಿನಲ್ಲಿ ಜಾನ್ವಿ ಯಾವುದೋ ಒಂದು ಸಣ್ಣ ಕಾರಣ ಸಿಕ್ರೂ ಸಾಕು ಗಿಲ್ಲಿ ವಿರುದ್ಧ ತಿರುಗಿ ಬೀಳೋಕೆ ಕಾಯ್ತಾ ಇರ್ತಾರೆ ಅನ್ನೋದು ಅವರ ವರ್ತನೆಯಲ್ಲಿ ಕಾಣಿಸಿದೆ, ಗಿಲ್ಲಿ ಅದೇನೇ ಮಾದಿದ್ರೂ ಜನ ಮಾತ್ರ ಗಿಲ್ಲಿ ಸರಿಯಾಗೇ ಮಾಡಿದ್ದಾನೆ ಅಂತ ಎಂಜಾಯ್ ಮಾಡ್ತಿದ್ದಾರೆ…..
ವರದಿ : ಗಾಯತ್ರಿ ಗುಬ್ಬಿ

